ಲೂಡೋ ಗೇಮ್‍ನಲ್ಲಿ ಮೋಸಮಾಡಿದ ತಂದೆ ವಿರುದ್ಧ ಕೇಸ್ ಹಾಕಿದ ಮಗಳು.

ಒಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ, ಆ ಕೇಸ್ ಮುಗಿಯುವುದರ ಒಳಗೆ ಕೇಸ್ ಹಾಕಿದವರು ಮತ್ತು ಆರೋಪಿ ಇಬ್ಬರು ಸುಸ್ತಾಗಿ ಹೋಗ್ತಾರೆ ಅನ್ನೋ ಮಾತುಗಳು ಇದೆ. ಇನ್ನು ಕೆಲವು ಕೇಸ್‍ಗಳು ಹತ್ತಾರು ವರ್ಷಗಳ ಕಾಲ ಕೋರ್ಟ್‍ನಲ್ಲೇ ಉಳಿದು ಹೋಗಿರುತ್ತದೆ. ಇನ್ನು ಕೆಲವೊಮ್ಮೆ ಕೋರ್ಟ್‍ಗೆ ಅದೆಷ್ಟೋ ಚಿತ್ರವಿಚಿತ್ರ ಕೇಸ್‍ಗಳು ಸಹ ದಾಖಲಾಗಿವೆ. ಇದೀಗ ಅಂತಹದ್ದೇ ಒಂದು ಕೇಸ್ ಇದೀಗ ಕೋರ್ಟ್‍ನಲ್ಲಿ ದಾಖಲಾಗಿದೆ. ಹೌದು 24 ವರ್ಷದ ಮಹಿಳೆಯೊಬ್ಬಳು ತನ್ನ ತಂದೆ ಲೂಡೋ ಗೇಮ್‍ನಲ್ಲಿ ಮೋಸದಿಂದ ಸೋಲಿಸಿದ್ದಾರೆಂದು ಮಧ್ಯಪ್ರದೇಶದ ಫ್ಯಾಮಿಲಿ ಕೋರ್ಟ್‍ನಲ್ಲಿ ದೂರು ದಾಖಲಿಸಿರುವ ಅಪರೂಪದ ಪ್ರಕರಣ ನಡೆದಿದೆ.

ಲೂಡೋ ಗೇಮ್‍ನಲ್ಲಿ ಮೋಸ ತಂದೆ ವಿರುದ್ಧ ಕೇಸ್ ಹಾಕಿದ ಮಗಳು

ತನ್ನ ತಂದೆ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿದೆ, ಆದ್ರೆ ಲೂಡೋ ಆಟದಲ್ಲಿ ನನ್ನ ತಂದೆ ಮೋಸ ಮಾಡಿ ಆಟದಲ್ಲಿ ಗೆದ್ದಿದ್ದಾರೆ,ನನ್ನ ತಂದೆ ಮೋಸ ಮಾಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ದೂರು ನೀಡಿದ್ದಾಳೆ, ಈ ಕುರಿತು ಕೋರ್ಟ್ ಕೌನ್ಸಿಲರ್ ಸರಿತ ಎನ್ನುವವರು ಈ ಬಗ್ಗೆ ಹೇಳಿಕೆ ನೀಡಿದ್ದು, ಆಕೆ ತನ್ನ ತಂದೆಯನ್ನು ಅತೀವವಾಗಿ ನಂಬಿದ್ದರು, ಸದ್ಯ ಆ ಮಹಿಳೆಗೆ ಕೌನ್ಸೆಲಿಂಗ್ ನಡೆಸುತ್ತಿದ್ದೇವೆ, ಈಗಾಗಲೇ 4ನೇ ಸುತ್ತಿನ ಕೌನ್ಸೆಲಿಂಗ್ ನಡೆಸಿದೇವೆ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ದೊಡ್ಡ ಸುದ್ದಿಯಾಗಿದ್ದು, ಕೆಲವ್ರು ಇದೆಂತಹ ಕೇಸ್ ಎಂದರೆ, ಕೆಲವ್ರು ನಂಬಿಕೆ ಮೋಸ ಮಾಡಿದ್ದಾರೆ ಮಹಿಳೆ ಸರಿಯಾಗಿ ಮಾಡಿದ್ದಾಳೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ.. ಈ ಸ್ಟೋರಿನ್ನು ಶೇರ್ ಮಾಡಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top