ಲಾಕ್ ಡೌನ್ ನಂತ್ರ ರಿಲೀಸ್ ಆಗೋ‌ಮೊದಲ ಕನ್ನಡ ಚಿತ್ರ ಸಲಗ..!!! ವೈರಲ್ ಆಯ್ತು ರೀರೆಕಾರ್ಡಿಂಗ್ ಮೇಕಿಂಗ್ ವಿಡಿಯೋ‌..!!!

ಇದು ಸಲಗ ರೀರೆಕಾರ್ಡಿಂಗ್ ಸಮಯದಲ್ಲಿನ ಝಲಕ್…, ಹಿನ್ನೆಲೆ‌ ಸಂಗೀತ ಭರಿತ ಸಣ್ಣ ಮೇಕಿಂಗ್ ತುಣುಕು…ಖುದ್ದು ನಟ, ನಿರ್ದೇಶಕ ದುನಿಯಾ ವಿಜಯ್ ಕೂತು ಸಂಗೀತ ನಿರ್ದೇಶಕ ಚರಣ್ ರಾಜ್ ಅವರೊಟ್ಟಿಗೆ ಸಲಗದ ಮಾಸ್ ಸೀನ್ ಗಳಿಗೆ ಸಂಗೀತ ಲೇಪಿಸುತ್ತಿರುವ ಕ್ಷಣ. ಸಲಗ ಹಿನ್ನೆಲೆ‌ ಸಂಗೀತದ ಇದೊಂದು ಸಣ್ಣ ಬಿಟೇ ಸಖತ್ ಮಾಸಾಗಿ ಸೆಳೆಯುತ್ತಿದ್ದು, ಸಲಗ ನೋಡೋರ ಮೈಮನ ನವಿರೇಳಿಸೋ‌ ಸೂಚನೆ ಕೊಡ್ತಿದೆ…

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ವಾರ ಸಲಗ ಸಿನಿಮಾ ರಿಲೀಸ್ ಆಗ್ಬೇಕಿತ್ತು.. ಆದ್ರೆ ಮಹಾಮಾರಿ ಸಾವಿನ ವೈರಸ್ ಕೊರೋನ ವೈರಸ್ ಹಬ್ಬುವಿಕೆಯಿಂದ ಆತಂಕಗೊಂಡು ದೇಶವೇ ಲಾಕ್ ಡೌನ್ ಆಗಿರೋ‌ದ್ರಿಂದ ಸಿನಿಮಾ ಉದ್ಯಮವೇ ಬಂದಾಗಿದ್ದು, ಎಲ್ಲಾ ಚಿತ್ರಗಳಂತೆ ಸಲಗ ಚಿತ್ರದ ರಿಲೀಸ್ ಡೇಟ್ ಕೊಡ ಮುಂದಕ್ಕೆ ಹೋಗಿದೆ.

View this post on Instagram

#Salaga

A post shared by Kannada News Live (@kannadanewslive) on

ಮೂಲಗಳ ಪ್ರಕಾರ ಲಾಕ್ ಡೌನ್ ನಂತ್ರ ರಿಲೀಸ್ ಆಗಲಿರೋ ಮೊದಲ ಸಿನಿಮಾ ಸಲಗ ಆಗೋ ಲಕ್ಷಣಗಳು ಉದ್ಯಮದಲ್ಲಿ ಕಾಣ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top