ಲಾಕ್ ಡಾನ್ ಟೈಂನಲ್ಲೂ ಡಿಬಾಸ್ ನಂಬರ್ 1

ಚಾಲೆಂಜಿಂಗ್‌ ಸ್ಟಾರ್ ದರ್ಶನ್… ಕ್ರೇಜ್ ಕಾ ಬಾಪ್,ಬಾಕ್ಸಾಫಿಸ್ ಸುಲ್ತಾನ್,ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಮಾಸ್ ಹೀರೋ, ಬಾಸ್ ಸಿನಿಮಾ ಬರ್ತಾ ಇದೆ ಅಂದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ,ಸದ್ಯ ಅಭಿಮಾನಿಗಳು ರಾಬರ್ಟ್ ಚಿತ್ರಕ್ಕಾಗಿ ಕಾಯ್ತಾ ಇದ್ರೆ, ಇತ್ತ ಕೊರೋನಾ ಎಫೆಕ್ಟ್ ನಿಂದಾಗಿ..ಇಡೀ ದೇಶವೇ ಲಾಕ್‌ಡೌನ್ ಆಗಿದ್ದು ಚಿತ್ರರಂಗವೂ ಕೂಡ ಸದ್ಯ ತನ್ನ ಕೆಲಸವನ್ನು ಸ್ಥಗಿತಗೊಳಿಸಿದೆ..ಹೀಗಿರುವಾಗ ತಮ್ಮ ನೆಚ್ಚಿನ ಮಟರ ಚಿತ್ರಗಳು ಚಿತ್ರಮಂದಿರದಲ್ಲಿ ನೋಡಲು ಅವಕಾಶ ಸದ್ಯ ಅಭಿಮಾನಿಗಳಿಗೆ ಸಿಗುತ್ತಿಲ್ಲ,ಸದ್ಯ ತಮ್ಮ ತಮ್ಮ ಮನೆಯಲ್ಲಿಯೇ ಟಿವಿಯಲ್ಲಿ ಪ್ರಸಾರವಾಗೋ ಸಿನಿಮಾಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇನ್ನು ದಾಖಲೆಗಳ ಮೇಲೆ ದಾಖಲೆ ಬರೆಯೋ ವಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ ಡೌನ್ ಟೈಂನಲ್ಲೂ ಭರ್ಜರಿ ದಾಖಲೆ ಬರೆಯೋ ಮೂಲಕ ಎಲ್ಲ ಟೈಂನಲ್ಲೂ ನಾನೇ ನಂಬರ್ ಒನ್ ಅಂತ ತೋರಿಸಿದ್ದಾರೆ..ಹೌದು ಸದ್ಯ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಿರುತೆರೆಯಲ್ಲಿ ಸಿನಿಮಾಗಳು ಪ್ರಸಾರವಾಗಿತ್ತಿದ್ದು,ಕಳೆದ ವಾರ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಐರಾವತ ಸಿನಿಮಾ ದಾಖಲೆಯ ವೀಕ್ಷಣೆ ಪಡೆಯೋ ಮೂಲಕ ದಾಖಲೆ ಬರೆದಿದೆ.. ಕಳೆದ ವಾರ ಪ್ರಸಾರವಾದ ಕುರುಕ್ಷೇತ್ರ 4809 ಇಂಪ್ರೆಶನ್ ಪಡೆಯೋ ಮೂಲಕ ಮೊದಲ ಸ್ಥಾನ ಗಳಿಸಿದ್ರೆ, ಐರಾವತ ಸಿನಿಮಾ ಎರಡನೇ ಸ್ಥಾನ ಪಡೆದಿದೆ,ಇನ್ನು ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮೂರನೇ ಸ್ಥಾನ ಪಡೆದುಕೊಂಡಿದೆ.ಒಟ್ಟಿನಲ್ಲಿ ಲಾಕ್ ಡೌನ್ ಟೈಂನಲ್ಲೂ ಕಿರುತೆರೆಯಲ್ಲೂ ದಾಖಲೆ ವೀಕ್ಷಣೆ ಪಡೆಯೋ ಮೂಲಕ ಯಾವ್ ಟೈಂ ಆದ್ರೂ,ನಾವ್ ನಂಬರ್ ಒನ್ ಅಂತಿದ್ದಾರೆ ದರ್ಶನ್ ಅಭಿಮಾನಿಗಳು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top