ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಹಣ್ಣು ಮಾರುತ್ತಿರೋ ನಟ ದಿವಾಕರ್

ಕೊರೊನಾ ಆರ್ಭಟದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಸದ್ಯ ಸ್ವಲ್ಪ ಮಟ್ಟಿನ ಸಡಿಲಿಕೆ ಕಂಡಿದ್ದರು, ಜನ ಜೀವನ ಮಾತ್ರ ಯಥಾ ಸ್ಥಿತಿಗೆ ಬರಲು ಸಾಧ್ಯವಾಗಿಲ್ಲ, ಇನ್ನು ಲಾಕ್ ಡೌನ್‍ನಿಂದಾಗಿ ಅದೆಷ್ಟೋ ಜನರ ಜೀವನ ಶೋಚನೀಯ ಸ್ಥಿತಿಗೆ ತಲುಪಿರುವುದಂತು ನಿಜ, ಸುಮಾರು ಮಂದಿ ಕೆಲಸವನ್ನು ಕಳೆದುಕೊಂಡಿದ್ದಾರೆ, ಜೊತೆಗೆ ಆರ್ಥಿಕ ಸಂಕಷ್ಟವನ್ನು ಸಹ ಎದುರಿಸುತ್ತಿದ್ದು, ಕೆಲವು ಕಂಪನಿಗಳು ಉದ್ಯೋಗವನ್ನು ಕಡಿತ ಗೊಳಿಸಿದ್ದು ಇದರಿಂದಾಗಿ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಲಾಕ್‍ಡೌನ್‍ನಿಂದಾಗಿ ಸಿನಿಮಾ ಮಂದಿಗೂ ಇದರಿಂದ ಹೊಡೆತ ಬಿದ್ದಿದ್ದು, ಸಣ್ಣ ಪುಟ್ಟ ಕಲಾವಿದರು ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಇನ್ನು ತಂತ್ರಜ್ಞರು ಸಹ ಮುಂದೇನೂ ಗತಿ ಅನ್ನೋ ಸ್ಥಿತಿಗೆ ತಲುಪಿದ್ದಾರೆ.ಇನ್ನು ಚಿತ್ರರಂಗದ ಕೆಲಸ ಕಾರ್ಯಗಳು ಯಾವಾಗ ಪ್ರಾರಂಭವಾಗಲಿದೆ ಅನ್ನೋ ಸಮಯಕ್ಕೆ ಕಾಯುತ್ತಾ ಕುಳಿತ್ತಿದ್ದಾರೆ. ಹೀಗಿರುವಾಗ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಟನೊಬ್ಬ ತನ್ನ ಜೀವನ ಸಾಗಿಸುವ ಸಲುವಾಗಿ ಹಣ್ಣಿನ ವ್ಯಪಾರ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಆರ್ಥಿಕ ಪರಿಸ್ಥಿತಿಯ ಮೇಲೆ ಬಿದ್ದಿರುವ ಹೊಡೆತವನ್ನು ತಪ್ಪಿಸುಕೊಳ್ಳಲು ಮುಂದಾಗಿದ್ದಾರೆ. ಹೌದು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ, ನಟನೊಬ್ಬ ಈಗ ಹಣ್ಣಿನ ವ್ಯಾಪಾರವನ್ನು ಮಾಡುವ ಮೂಲಕ ತಮ್ಮ ಜೀವನವನ್ನು ಸಾಗಿಸಲು ಮುಂದಾಗಿದ್ದಾರೆ.

ದೆಹಲಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ಈ ನಟನ ಹೆಸರು ಸೋಲಂಕಿ ದಿವಾಕರ್' ಬಾಲಿವುಡ್‍ನಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈ ನಟ ಈಗ ಕೆಲಸವಿಲ್ಲದಂತಾಗಿ,ಇನ್ನು ಕುಟುಂಬದ ಜವಬ್ದಾರಿ ಕೂಡ ಈ ನಟನ ಮೇಲಿದ್ದು, ಜೊತೆಗೆ ಮನೆಯ ಬಾಡಿಯನ್ನು ಕಟ್ಟಬೇಕಾಗಿರುವುದರಿಂದ ದಿವಾಕರ್ ಈಗ ಹಣ್ಣಿನ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇನ್ನು ಈ ವಿಚಾರವಾಗಿಸೋಲಂಕಿ ದಿವಾಕರ್’ ಅವರನ್ನು ಕೇಳಿದ್ರೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಅನಿವಾರ್ಯವಾಗಿ ಹಣ್ಣು ಮಾರಾಟ ಮಾಡುತ್ತಿದ್ದೇನೆ. ಯಾವುದೇ ಕೆಲಸವಿರಲಿ ಅದನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಹೇಳುವ ಅವರು ನಟ ರಿಷಿ ಕಪೂರ್ ಜೊತೆ ನಟಿಸುವ ಅವಕಾಶವಿತ್ತು ಆದ್ರೆ ಅದು ಈಗ ತಪ್ಪಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದೇನೆ ಇದ್ರು ಈ ಪರಿಸ್ಥಿತಿಯಲ್ಲಿ ತನ್ನ ಜೀವನವನ್ನು ಸಾಗಿಸಲು ನಾನು ಯಾವ ರೀತಿಯ ಕೆಲಸ ಮಾಡಲು ಸಿದ್ಧ ಅಂತ ಸೋಲಂಕಿ ದಿವಾಕರ್ ಹೇಳ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top