ಲಾಕ್‌ಡೌನ್‌ ಅವಧಿಯ ಇಎಂಐ ಮರುಪಾವತಿ ಕೇಂದ್ರಕ್ಕೆ ಕೊನೆ ಅವಕಾಶ ಕೊಟ್ಟ ಸುಪ್ರೀಂ

ಲಾಕ್‌ಡೌನ್‌ ಟೈಂನ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎರಡು ವಾರಗಳ ಅವಕಾಶವನ್ನು ನೀಡಿದ್ದು, ಇದು ಕೊನೆ ಅವಕಾಶ ಎಂದು ಹೇಳಿದೆ.

ವಿಚಾರಣೆ ಮುಂದುವರೆಸಿದ ಸುಪ್ರೀಂಕೋರ್ಟ್‌, ಎರಡು ವಾರಗಳ ಸಮಯ ಕೇಂದ್ರಕ್ಕೆ ನೀಡುತ್ತಿದ್ದೇವೆ. ಕೇಂದ್ರ ಮತ್ತು ಆರ್‌ಬಿಐ ಸೂಕ್ತ ಯೋಜನೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಕೊನೆಯ ಅವಕಾಶವಾಗಿದೆ ಎಂದು ಸುಪ್ರೀಂ ಎಚ್ಚಿರಿಸಿದೆ.

ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಪರ ವಾದ ಮಂಡಿಸಿದ ತುಷಾರ್‌ ಮೆಹ್ತಾ, ಎರಡು ಮೂರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಸಾಲ ಮರು ಪಾವತಿ ಅಂತಿಮ ದಿನಾಂಕದ ಬಗ್ಗೆ ಗೊಂದಲಗಳೂ ವ್ಯಕ್ತವಾಗಿದೆ. ಅದನ್ನು ಪರಿಶೀಲಿಸಲಾಗುತ್ತದೆ ಎರಡು ವಾಗಳ ಕಾಲಾವಾಕಾಶ ನೀಡುಬೇಕು ಎಂದು ಮನವಿ ಮಾಡಿದ್ದರು.

ಮನವಿ ಸ್ಪಂದಿಸಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಮುಂದೂಡುವುದಿಲ್ಲ, ಕೇಂದ್ರ ಮತ್ತು ಆರ್‌ಬಿಐ ಸಲಹೆ ಆಧರಿಸಿ ಸೂಕ್ತ ಆದೇಶವನ್ನು ನೀಡಲಿದ್ದೇವೆ ಎಂದು ಕೋರ್ಟ್‌ ಹೇಳಿದೆ.

ಲಾಕ್‌ಡೌನ್‌ ಟೈಂನ ಇಎಂಐ ಮುಂದೂಡಲ್ಪಟ್ಟಿದಕ್ಕೆ ಬಡ್ಡಿಯ ಮೇಲಿನ ಬಡ್ಡಿ ಮತ್ತು ಸಾಲ ಮರುಪಾವತಿಗೆ ಆಗಸ್ಟ್‌ 31ಕ್ಕೆ ಆರ್‌ಬಿಐ ನೀಡಿದ್ದ ವಿನಾಯಿತಿ ಮುಕ್ತಾಯವಾಗಿದ್ದು,ಆರ್ಥಿಕ ಸಂಕಷ್ಟದ ನಡುವೆ ಸಾಲ ಮರುಪಾವತಿ ಬಗ್ಗೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top