ಲವ್ ಮಾಕ್ಟೇಲ್ ಪಾರ್ಟ್ 2 ಬರಲಿದೆ, ಆದಿ ಜೊತೆ ನಿಧಿ ಇದ್ರಲ್ಲಿ ಇರ್ತಾಳಾ..!

ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ವಿಮರ್ಶೆ ಜೊತೆ ಜನರು ಗೆಲ್ಲಿಸಿದ ಸಿನಿಮಾ ಅಂದ್ರೆ ಅದು ಲವ್ ಮಾಕ್ಟೇಲ್, ಪ್ರಾರಂಭದಲ್ಲಿ ಕುಂಟುತ್ತಾ ಸಾಗಿದ್ದ ಚಿತ್ರ, ದಿನ ಕಳೆದಂತೆ ಜನರನ್ನು ಥಿಯೇಟರ್ಗೆ ಕರೆತರುವಲ್ಲಿ ಸಕ್ಸಸ್ ಆಗುವ ಮೂಲಕ ಗಲ್ಲಾ ಪಟ್ಟಿಗೆಯಲ್ಲಿ ಗೆಲುವನ್ನು ಕಂಡಿತು, ಡಾರ್ಲಿಂಗ್ ಕೃಷ್ಣ ಅವರ ಮೊದಲ ಪ್ರಯತ್ನಕ್ಕೆ ಫುಲ್ ಮಾಕ್ರ್ಸ್ ಕೂಡ ಸಿನಿ ರಸಿಕ ಕೊಟ್ಟಿದ್ದು, ಚಿತ್ರದ ಸೀಕ್ವೆಲ್ ಬರುತ್ತಾ ಅನ್ನೋ ಪ್ರಶ್ನೆಯನ್ನು ಸಿನಿರಸಿಕರು ಕೇಳಿದ್ದು, ಇದಕ್ಕೆ ಡಾರ್ಲಿಂಗ್ ಕೃಷ್ಣ ಈಗ ಉತ್ತರವನ್ನು ನೀಡಿದ್ದಾರೆ.

ಹೌದು ಲವ್ ಮಾಕ್ಟೇಲ್ ಸಕ್ಸಸ್‍ನಲ್ಲಿ ಡಾರ್ಲಿಂಗ್ ಕೃಷ್ಣ ಈಗ ಲವ್ ಮಾಕ್ಟೇಲ್ ಸೀಕ್ವೆಲ್‍ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರಂತೆ, ಸಿನಿಮಾಗೆ ಸಿಕ್ಕ ಸಕ್ಸಸ್‍ನಿಂದಾಗಿ, ಚಿತ್ರತಂಡ ಈಗಾಗಲೇ ಸ್ಕ್ರಿಪ್ಟಿಂಗ್ ಕೆಲಸವನ್ನು ಆರಂಭಿಸಿದ್ದಾರಂತೆ, ಅಂದುಕೊಂಡಂತೆ ಆದರೆ ಚಿತ್ರ ಸದ್ಯದರಲ್ಲೇ ಸೆಟ್ಟೇರಲಿದಯಂತೆ, ಇನ್ನು ಸೀಕ್ವೆಲ್ ನಲ್ಲಿ ಯಾವ ಯಾವ ಪಾತ್ರ ಮುಂದುವರೆಯಲಿದೆ ಅನ್ನೋದು ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಗಿದ ನಂತರವಷ್ಟೇ ಗೊತ್ತಾಗಲಿದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top