ಲವರ್ಸ್‌ಗಳನ್ನ ನೋಡಿದ್ರೆ ಕಲ್ಲಿನಲ್ಲಿ ಹೊಡಿಬೇಕು ಅನಿಸುತ್ತೆ -ರಶ್ಮಿಕಾ ಮಂದಣ್ಣ..!

ಸಿನಿರಂಗದ ಕ್ರಶ್‌. ರಶ್ಮಿಕಾ ಮಂದಣ್ಣ ಅವರಿಗೆ ಲವರ್ಸ್‌ಗಳನ್ನು ಈ ರೀತಿ ನೋಡಿದ್ರೆ ಕಲ್ಲಿನಲ್ಲಿ ಹೊಡಿಬೇಕು ಅನಿಸುತ್ತದೆಯಂತೆ..ಹೌದು ಸದ್ಯ ರಶ್ಮಿಕಾ ಮಂದಣ್ಣ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಸಖತ್‌ ಬ್ಯೂಸಿಯಾಗಿರೋ ನಟಿ.. ಸದ್ಯ ತೆಲುಗಿನ ಭಿಷ್ಮ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು, ಇದೇ ಫೆಬ್ರವರಿ 21ರಂದು ತೆರೆಕಾಣ್ತಾ ಇದೆ. ಇನ್ನು ಈ ಚಿತ್ರದ ಪ್ರಚಾರದಲ್ಲಿ ನಿತಿನ್‌ ಜೊತೆ ಬ್ಯೂಸಿಯಾಗಿರೋ ರಶ್ಮಿಕಾ ಮಂದಣ್ಣ, ಇತ್ತಿಚೆಗೆ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡುವ ವೇಳೆ..ಆಂಕರ್‌ ಕೇಳಿದ ಪ್ರಶ್ನೆಗೆ ಸಖತ್‌ ಆಗೆ ಉತ್ತರವನ್ನು ನೀಡಿದ್ದಾರೆ.
ಮೊದಲಿಗೆ ಆಂಕರ್‌ ಮದುವೆ ಬಗ್ಗೆ ಪ್ರಶ್ನೆಕೇಳಿದಾಗ, ನಾನು ಇನ್ನು 8ವರ್ಷಗಳ ಕಾಲ ಮದುವೆಯಾಗುವುದಿಲ್ಲ, ಅರೇಂಜ್‌ ಮ್ಯಾರೇಜ್‌ ಆಗುತ್ತೇನೆ, ನನಗೆ ಹುಡುಗ ಹಾಗಿರಬೇಕು,ಹೀಗಿರಬೇಕು ಅನ್ನೋ ಡಿಮ್ಯಾಂಡ್‌ಗಳಿಲ್ಲ, ಒಳ್ಳೇ ಹುಡುಗ ಸಿಕ್ಕರೇ ಮದುವೆಯಾಗುತ್ತೇನೆ ಅಂತ ಹೇಳಿದ್ದಾರೆ.

ಇನ್ನು ನೀವು ಹೀರೋಯಿನ್‌ ಆಗುವ ಮೊದಲು ಮತ್ತು ನಂತರ ಪ್ರೇಮಿಗಳ ದಿನದ ಬಗ್ಗೆ ಅಭಿಪ್ರಾಯ ಏನು ಅಂತ ಕೇಳಿದಾಗ. ರಶ್ಮಿಕಾ ನನಗೆ ಪ್ರೇಮಿಗಳ ದಿನ ಅಂದರೆ ಇಷ್ಟ ಆಗೋದಿಲ್ಲ, ಪ್ರೇಮಿಗಳು ಕೈ ಕೈ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ಕೋಪ ಬರುತ್ತದೆ.ಅದರಲ್ಲೂ ಅವರು ರೊಮ್ಯಾನ್ಸ್‌ ಮಾಡುತ್ತಿರುವುದನ್ನು ನೋಡಿದರೆ ʻಕಲ್ಲಿನಲ್ಲಿ ಹೊಡಿಬೇಕುʼ ಅಂತ ಅನಿಸುತ್ತದೆ ಯಾಕೆ ಅಂತ ಗೊತ್ತಿಲ್ಲ ಅಂತ ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಾನು ಪ್ರೇಮಿಗಳ ದಿನಾಚರಣೆ ಆಚರಣೆ ಮಾಡಿಲ್ಲ.ನನಗೆ ಯಾರು ಪ್ರಪೋಸ್‌ ಮಾಡಿಲ್ಲ,ಆದ್ರೆ ನನಗೆ ಚಿಕ್ಕ ವಯಸ್ಸಿನಲ್ಲಿ ʻದಳಪತಿ ವಿಜಯ್‌ʼ ಮೇಲೆ ಕ್ರಶ್‌ ಆಗಿತ್ತು ಅಂತ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top