ರೋಹಿತ್ ಶರ್ಮಾ ಫಿಟ್‍ನೆಸ್ ಪರೀಕ್ಷೆ ಪಾಸ್ ಆಸ್ಟ್ರೇಲಿಯಾಗೆ ಹೊರಟ ಹಿಟ್‍ಮ್ಯಾನ್

ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಸದ್ಯ ಫಿಟೆನೆಸ್ ಇಲ್ಲ ಎಂದು ಆಸ್ಟ್ರೇಲಿಯಾ ಪ್ರವಾಸದಿಂದ ಅವರನ್ನು ಕೈ ಬಿಡಲಾಗಿತ್ತು, ಇನ್ನು ರೋಹಿತ್ ಶರ್ಮಾ ಫಿಟೆನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಆಸ್ಟ್ರೇಲಿಯಾ ಪ್ರವಾಸ ಉಳಿದ ಪಂದ್ಯಗಳಿಗೆ ಆಯ್ಕೆ ಮಾಡಲಾಗುವುದು ಅನ್ನೋ ಮಾತುಗಳು ಇತ್ತು, ಅದರಲ್ಲೂ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗುವುದರಿಂದ ಆ ಜಾಗಕ್ಕೆ ರೋಹಿತ್ ಶರ್ಮಾ ಬೇಕೆ ಬೇಕು ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಇದೀಗ ರೋಹಿತ್ ಶರ್ಮಾ ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲಿದ್ದಾರಾ ಅನ್ನೋ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಶುರುವಾಗಿದೆ. ಇಂದು ರಾಹುಲ್ ದ್ರಾವಿಡ್ ನೇತೈತ್ವದ್ಲಲಿ ನಡೆದ ಫಿಟ್ನೆಸ್ ಟೆಸ್ಟ್‍ನಲ್ಲಿ ಶರ್ಮಾ ಪಾಸ್ ಆಗಿದ್ದು, ಮುಂದಿನ ಪಂದ್ಯಗಳಿಗೆ ನಾನು ಫಿಟ್ ಅಂಡ್ ಫೈನ್ ಅಂತ ಹೇಳಿದ್ದಾರೆ. ಹಾಗಾದ್ರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರೋ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ತಂಡವನ್ನು ಸೇರಿಕೊಳ್ಳಲಿದ್ದಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇದ್ದು, ಹಾಗೇನಾದ್ರು ಆದಲ್ಲಿ ರೋಹಿತ್ ಮೊದಲ ಟೆಸ್ಟ್ ಪಂದ್ಯ ಆಡಲು ಸಾಧ್ಯವಾಗುವುದಿಲ್ಲ, ಕಾರಣ ಕೊರೊನಾ ನಿಯಮದ ಪ್ರಕಾರ 14 ದಿನ ಕ್ವಾರಂಟೇನ್‍ನಲ್ಲಿ ರೋಹಿತ್ ಇರಬೇಕಾಗುತ್ತದೆ. ಹಾಗಾಗಿ ರೋಹಿತ್ ಶರ್ಮಾ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಆಡೋದು ಪಕ್ಕಾ ಆಗಲಿದೆ.

ಬ್ಯಾಟಿಂಗ್‍ನಲ್ಲಿ ಹೊಸ ದಾಖಲೆ ಬರೆದ ಜಸ್‍ಪ್ರೀತ್ ಬೂಮ್ರಾ

ಟೀಂ ಇಂಡಿಯಾದ ವೇಗದ ಬೌಲರ್ ಬೂಮ್ರಾ ಇದೀಗ ಹೊಸದೊಂದು ದಾಖಲೆ ಬರೆದಿದ್ದಾರೆ. ಹೌದು ಇಮದು ಆಸ್ಟ್ರೇಲಿಯಾ ಎ ಮತ್ತು ಭಾರತ ಎ ನಡುವೆ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಬೂಮ್ರಾ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 10ನೇ ಕ್ರಮಾಂಕದಲ್ಲಿ ಬಂದಿದ್ದ ಬೂಮ್ರಾ ಉತ್ತಮ ಬ್ಯಾಟಿಂಗ್ ಪ್ರದರ್ಶನಿಂದ 57 ಎಸೆತಗಳಲ್ಲಿ 55ರನ್‍ಗಳನ್ನು ಕೊಡುಗೆಯಾಗಿ ನೀಡಿದ್ರು. ಇದು ಬೂಮ್ರಾ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಧಿಕ ರನ್ ಆಗಿದ್ದು, ಇದು ಬೂಮ್ರಾ ಅವರ ಚೊಚ್ಚಲ ಅರ್ಧ ಶತಕವೂ ಆಗಿದೆ. ಇನ್ನು ಅಭ್ಯಾಸ್ ಪಂದ್ಯ ಟೆಸ್ಟ್‍ನ ಇನ್ನಿಂಗ್ಸ್‍ನಲ್ಲಿ ಒಬ್ಬ ಬೌಲರ್ ಪಂದ್ಯದಲ್ಲಿ ವೈಯುಕ್ತಿಕ ಅಧಿಕ ರನ್ ಗಳಿಸಿದ ಆಟಗಾರ ಅನ್ನೋ ಹೆಸರಿಗೂ ಪಾತ್ರವಾಗಿದ್ದು, ಬೂಮ್ರಾ ತಮ್ಮ ಮೊದಲ ಅರ್ಧ ಶತಕವನ್ನು ಸಿಕ್ಸರ್ ಸಿಡಿಸುವ ಮೂಲಕ ಮಾಡಿದ್ದು ಮತ್ತೊಂದು ದಾಖಲೆಯಾಗಿದೆ. ಇನ್ನು ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 194ರನ್‍ಗಳಿಗೆ ಅಲೌಟ್ ಆಗಿದ್ರೆ, ಇತ್ತ ಭಾರತೀಯರ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿ ಹೋಗಿದೆ 108ರನ್‍ಗಳಿಗೆ ಅಲೌಟ್ ಆಗುವ ಮೂಲಕ ಭಾರತ ಇನ್ನಿಂಗ್ಸ್ ಮುನ್ನಡೆಯನ್ನು ಸಾಧಿಸಿದೆ. ಇನ್ನು ಬ್ಯಾಟಿಂಗ್‍ನಲ್ಲಿ ಅಬ್ಬರಿಸಿ ಅರ್ಧ ಶತಕ ಸಿಡಿದ್ದ ಬೂಮ್ರಾ ಬೌಲಿಂಗ್‍ನಲ್ಲೂ ಮಿಂಚಿದ್ದು 33 ರನ್ ನೀಡಿ ಎರಡು ವಿಕೆಟ್ ಕಬಳಿಸೋ ಮೂಲಕ ಗಮನ ಸೆಳೆದ್ರು.

ಆರ್‍ಸಿಬಿ ಹುಡುಗನ ಆ ಕೆಲಸಕ್ಕೆ ಕ್ರಿಕೆಟ್ ಕ್ಷೇತ್ರವೇ ಮೆಚ್ಚಿಕೊಳ್ತು

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಅಭ್ಯಾಸ ಪಂದ್ಯದ ವೇಳೆ ಪಂದ್ಯ ವಿಶೇಷ ಘಟನೆಗೆ ಸಾಕ್ಷಿಯಾಯ್ತು, ಹೌದು ಭಾರತ ತಂಡದ ಪರ ಬೂಮ್ರಾ ಮತ್ತು ಆರ್‍ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಮಾಡುವ ವೇಳೆ, ಆಸ್ಟ್ರೇಲಿಯಾದ ವೇಗದ ಬೌಲರ್ ಕ್ಯಾಮರೂನ್ ಗ್ರೀನ್ ಬೌಲಿಂಗ್‍ನಲ್ಲಿ ಬೂಮ್ರಾ ಹೊಡೆದ ಬಾಲ್ ನೇರವಾಗಿ ಗ್ರೀನ್ ಮುಖಕ್ಕೆ ಬಂದು ಬಡಿಯಿತು ಈ ವೇಳೆ ಮೊಹಮ್ಮದ್ ಸಿರಾಜ್ ರನ್ ಕದಿಯುವ ಬದಲು ಗ್ರೀನ್ ಮುಖಕ್ಕೆ ಬಾಲ್ ಬಡಿಯುತ್ತಿದ್ದಂತೆ ಬ್ಯಾಟ್ ಎಸೆದು ಬೌಲರ್ ಅನ್ನು ವಿಚಾರಿಸಲು ಮುಂದಾದ್ರು, ಸದ್ಯ ಈ ಘಟನೆ ಬಗ್ಗೆ ಇದೀಗ ಮೆಚ್ಚುಗೆ ವ್ಯಕ್ತವಾಗಿದ್ದು, ಸಿರಾಜ್ ಅವರು ಮೈದಾನದಲ್ಲಿ ನಡೆದುಕೊಂಡ ರೀತಿಗೆ ಕ್ರಿಕೆಟ್ ಪಂಡಿತರು ಸೇರಿದಂತೆ, ನೆಟ್ಟಿಗರು ಇದು ಕ್ರೀಡಾ ಸ್ಫೂರ್ತಿ ಅಂದ್ರೆ ಅಂತ ಸಿರಾಜ್ ನಡೆದುಕೊಂಡ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top