ರೋಹಿತ್‌ಗೆ ಅವಕಾಶ ಕೊಟ್ರೆ ಸಾಕು, ಆರ್‌ಸಿಬಿಯಿಂದ ಈ 5 ಆಟಗಾರರು ಔಟ್‌

ಟೀಂ ಇಂಡಿಯಾ ಸತತ ಮೂರು ತಿಂಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಹೊರಡಲಿದ್ದು, ಈಗಾಗಲೇ ಟೀಂ ಇಂಡಿಯಾದ ತಂಡವನ್ನು ಸಹ ಮೂರು ಫಾರ್ಮೆಟ್‌ಗಳಿಗೆ ಪ್ರಕಟಿಸಲಾಗಿದೆ, ಇನ್ನು ಈ ಬಾರಿಯ ಟೀಂ ಇಂಡಿಯಾದಲ್ಲಿ ರೋಹಿತ್‌ ಶರ್ಮಾ ಅವರಿಗೆ ಸ್ಥಾನ ಸಿಗದೇ ಇರೋ ಬಗ್ಗೆ ಒಂದಿಷ್ಟು ಚರ್ಚೆಗಳು ಸಹ ನಡೆದವು, ಇದೀಗ ವಿರಾಟ್‌ ಕೊಹ್ಲಿ ಮೊದಲ ಟೆಸ್ಟ್‌ ಆದ ನಂತರ ಉಳಿದ ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿರುವ ಕಾರಣ ಉಳಿದ ಟೆಸ್ಟ್‌ ಪಂದ್ಯಗಳಿಗೆ ರೋಹಿತ್‌ ಶರ್ಮಾ ಆಯ್ಕೆಯಾಗಲಿದ್ದಾರೆ ಅಂತ ಹೇಳಲಾಗುತ್ತಿದೆ. ಹೀಗರಬೇಕಾದ್ರೆ ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್‌ ಇರ್ಫಾನ್‌ ಪಠಾಣ್‌ ವಿರಾಟ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನೆಡಸಲು ರೋಹಿತ್‌ ಶರ್ಮಾ ಅವರಿಗೆ ಅವಕಾಶ ನೀಡಬೇಕು ಅನ್ನೋ ಮಾತುಗಳನ್ನು ಹೇಳಿದ್ದಾರೆ.

ಪತ್ನಿ ಅನುಷ್ಖಾ ಶರ್ಮಾ ಜನವಿಯಲ್ಲಿ ಮಗುವಿಗೆ ಜನ್ಮ ನೀಡುವುದರಿಂದ ಕೊಹ್ಲಿ ಮೊದಲ ಟೆಸ್ಟ್‌ ಪಂದ್ಯದ ನಂತರ ತವರಿಗೆ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ಟೆಸ್ಟ್‌ ತಂಡವನ್ನು ಮುನ್ನೆಡೆಸಿ ಗೆಲುವನ್ನು ಸಾಧಿಸಿದ್ದಾರೆ.ಇನ್ನು ರಹಾನೆ ಟೆಸ್ಟ್‌ ತಂಡದ ಉಪನಾಯಕನಾಗಿದ್ದು, ವಿರಾಟ್‌ ಅನುಪಸ್ಥಿತಿಯಲ್ಲಿ ಆ ಜವಾಬ್ದಾರಿಯನ್ನು ರಹಾನೆ ಹೊರಲಿದ್ದಾರೆ, ಆದ್ರೆ ಇದೀಗ ಇರ್ಫಾನ್‌ ಪಠಾಣ್‌ ವಿರಾಟ್‌ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸಬೇಕು ಅನ್ನೋ ಮಾತುಗಳನ್ನು ಹೇಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿದೆ, ರೋಹಿತ್‌ ಒಬ್ಬ ಉತ್ತಮ ಆಟಗಾರ ಮತ್ತು ನಾಯಕ ಗುಣ ಇರೋರು ಆದ್ರೆ ತಂಡದಲ್ಲಿ ಉಪನಾಯಕ ನೇಮಕವಾಗಿರೋವಾಗ ತಂಡದಲ್ಲಿ ನಾಯಕ ಅನುಪಸ್ಥಿತಿಯಲ್ಲಿ ಉಪನಾಯಕ ತಂಡವನ್ನು ಉಪನಾಯಕ ಮುನ್ನಡೆಸಬೇಕು ಅಂತ ಹೇಳಿದ್ದು, ನಿಮ್ಮ ಆಸೆಯ ಪ್ರಕಾರ ರೋಹಿತ್‌ ಶರ್ಮಾ ರಹಾನೆ ಸ್ಥಾನವಾದ ಉಪನಾಯಕ ಸ್ಥಾನವನ್ನು ವಿರಾಟ್‌ ಅನುಪಸ್ಥಿತಿಯಲ್ಲಿ ಅಲಂಕರಿಸಲಿ ಎಂದು ಟೀಕೆ ಮಾಡಿದ್ದಾರೆ.

ಇನ್ನು ಈಗಾಗಲೇ ಆರ್‌ಸಿಬಿ ಐಪಿಎಲ್‌ನಿಂದ ಹೊರಬಿದಿದ್ದು ಮುಂದಿನ ಐಪಿಎಲ್‌ಗೆ ಈಗಲೇ ತಯಾರಿಯನ್ನು ಮಾಡಿಕೊಳ್ತಾ ಇದೆ. ಇನ್ನು ೨೦೨೧ರಲ್ಲಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡುವುದಾಗಿ ಈಗಾಗಲೇ ಮೈಕ್‌ ಹಸನ್‌ ಹೇಳಿದ್ದು, 2021ರ ಐಪಿಎಲ್‌ನಲ್ಲಿ ಈ ಐದು ಜನ ಆಟಗಾರರನ್ನು ಆರ್‌ಸಿಬಿ ತಂಡದಿಂದ ಕೈ ಬಿಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರಮುಖವಾಗಿ ಆರಂಭಿಕ ಬ್ಯಾಟಿಂಗ್‌ನಲ್ಲಿ ದೇವದತ್‌ ಪಡಿಕಲ್‌ ಹೊರತು ಪಡಿಸಿ ಉಳಿದವರಿಂದ ಯಡವಿದ್ದು, ಮತ್ತು ತಂಡದ ಮಧ್ಯಮಕ್ರಮಾಂಕದಲ್ಲೂ ಸಹ ಒಂದಿಷ್ಟು ಎಡವಟ್ಟುಗಳನ್ನು ಮಾಡಿಕೊಂಡ ಹಿನ್ನೆಲೆ ಸೋಲಿಗೆ ಕಾರಣವಾಗಿದೆ. ಹಾಗಾಗಿ ಈ ಬಾರಿ ತಂಡದಲ್ಲಿ ಮೇಜರ್‌ ಸರ್ಜರಿಯನ್ನು ಮಾಡುವ ಮೂಲಕ ತಂಡದಲ್ಲಿ ಕೆಲವೊಂದಿಷ್ಟು ಆಟಗಾರರನ್ನು ಕೈ ಬಿಡುವ ಮೂಲಕ ತಂಡಕ್ಕೆ ಮೇಜರ್‌ ಸರ್ಜರಿ ಮಾಡಲು ಮುಂದಾಗಿದೆ ಮೈಕ್‌ ಹಸನ್‌ ಮತ್ತು ತಂಡ, ಹಾಗಾದ್ರೆ ಮುಂದಿನ ಐಪಿಎಲ್‌ನಲ್ಲಿ ಯಾವೆಲ್ಲಾ ಆಟಗಾರರು ಆರ್‌ಸಿಬಿ ತಂಡದಿಂದ ಹೊರ ಹೋಗಲಿದ್ದಾರೆ ಅನ್ನೋದನ್ನ ನಾವ್‌ ಇವತ್ತು ನೋಡೋಣ.

1

ಮೊದಲನೇಯಾದಾಗಿ ಉಮೇಶ್‌ ಯಾದವ್‌ ಅವರನ್ನು ಮುಂದಿನ ಐಪಿಎಲ್‌ಗೂ ಮೊದಲು ಕೈಬಿಡಲಾಗುತ್ತದೆ ಅಂತ ಹೇಳಲಾಗುತ್ತಿದೆ. ಉಮೇಶ್‌ ಯಾದವ್‌ ಇದುವರೆಗೂ ಯಾವ ಐಪಿಎಲ್ ಸೀಸನ್‌ನಲ್ಲೂ ಉತ್ತಮ ಪ್ರದರ್ಶನ ನೀಡದೇ ಇರೋದು ಮುಂದಿನ ಐಪಿಎಲ್‌ನಲ್ಲಿ ಕೈಬಿಡಲು ಕಾರಣ ಅಂತಾನೇ ಹೇಳ ಬಹುದು.

2

ಎರಡನೇಯದಾಗಿ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಿನ ನಡುವೆಯು ಮತ್ತು ಆರಂಭಿಕ ಆಟಗಾರರ ವೈಫಲ್ಯದ ನಡುವೆಯು ವಿಕೇಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ಗೆ ಅವಕಾಶವನ್ನು ನೀಡಲಿಲ್ಲ, ಇನ್ನು ವಿಕೆಟ್‌ ಕೀಪಿಂಗ್‌ನಲ್ಲಿ ಎಬಿಡಿ ಮತ್ತು ಜೋಸೆಫ್‌ ಫಿಲಿಪೆ ಆ ಜಾಗವನ್ನು ತುಂಬುವುದರಿಂದಾಗಿ ಮುಂದಿನ ಐಪಿಎಲ್‌ನಲ್ಲಿ ಪಾರ್ಥಿವ್‌ ಪಟೇಲ್‌ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡಲಿದೆ.

3

ಮೂರನೇಯದಾಗಿ ಗುರ್ಕೀರತ್‌ ಮನ್‌..ಹೌದು ಸದ್ಯ ಆರ್‌ಸಿಬಿ ಅಭಿಮಾನಿಗಳಿಗೆ ಗುರ್ಕೀರತ್‌ ದೊಡ್ಡ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದೇ ತಂಡಕ್ಕಾಗಿ ಆಡದೇ ಟಿ20ಯಲ್ಲಿ ಟೆಸ್ಟ್‌ ಪ್ಲೇಯರ್‌ ಆಟವಾಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು, ಇನ್ನು ಆರ್‌ಸಿಬಿಯ ಮುಂದಿನ ಕೆಲವು ಪಂದ್ಯಗಳಿಂದ ಕೈ ಬಿಟ್ಟಿದ್ದರು.. ಇನ್ನು ಉತ್ತಮ ಸ್ಟ್ರೈಕ್‌ ರೇಟ್‌ ಹೊಂದಿರದ ಗುರ್ಕೀರತ್‌ ಅವರನ್ನು ಮುಂದಿನ ಐಪಿಎಲ್‌ನಿಂದ ಆರ್‌ಸಿಬಿ ತಂಡದಿಂದ ಕೈ ಬಿಡುವುದರಲ್ಲಿ ಯಾವುದೇ ಅನುಮಾನ ವಿಲ್ಲ.

4

ನಾಲ್ಕನೇಯ ಆಟಗಾರನನ್ನು ನೋಡೋದಾದ್ರೆ ಆಲ್‌ರೌಂಡರ್‌ ಪವನ್‌ ನೇಗಿಯನ್ನು ತಂಡದಿಂದ ಕೈ ಬಿಡುವ ಸಾಧ್ಯತೆಗಳಿವೆ, ಪವನ್‌ ನೇಗಿಗೆ ಈ ಬಾರಿಯ ಐಪಿಎಲ್‌ನಲ್ಲಿ ತಂಡದಲ್ಲಿ ಆಡುವ ಅವಕಾಶಗಳು ಸಿಗಲಿಲ್ಲ, ಇನ್ನು ಹೆಚ್ಚುವರಿ ಫಿಲ್ಡರ್‌ ಆಗಿ ಮಾತ್ರಕ್ಕೆ ಕಣಕ್ಕೆ ಇಳಿದಿದ್ರು, ಇನ್ನು ಕಳೆದ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿರಲಿಲ್ಲ, ಸದ್ಯ ತಂಡದಲ್ಲಿ ಸುಂದರ್‌ ಮತ್ತು ಯುವ ಪ್ರತಿಭೆ ಶಹಬಾಜ್‌ ಅಹಮ್ಮದ್‌ ಭರವಷೆಯನ್ನು ಮೂಡಿಸಿರೋದ್ರಿಂದ ಮುಂದಿನ ಐಪಿಎಲ್‌ನಲ್ಲಿ ಪವನ್‌ ನೇಗಿ ತಂಡದಲ್ಲಿ ಉಳಿದುಕೊಳ್ಳುವುದು ಕಷ್ಟಸಾಧ್ಯವಾಗಿದೆ.

5

ಕೊನೆಯ ಆಟಗಾರ ಯಾರು ಅಂತ ನೋಡೋದಾದ್ರೆ, ವೇಗದ ಬೌಲರ್‌ ಡೇಲ್‌ಸ್ಟೇನ್‌..ಹೌದು ಈ ಬಾರಿ ಆರ್‌ಸಿಬಿ ಪರ ಡೇಲ್‌ ಸ್ಟೇನ್‌ ಕಮಾಲ್‌ ಮಾಡಲಿದ್ದಾರೆ ಅಂತಾನೇ ಹೇಳಲಾಗುತ್ತಿತ್ತು, ಆದ್ರೆ ಸ್ಟೇನ್‌ ತಂಡಕ್ಕೆ ಉತ್ತಮ ವಿಕೆಟ್‌ ತಂದುಕೊಡುವಲ್ಲಿ ಮತ್ತು ರನ್‌ ಕಟ್ಟಿಹಾಕುವಲ್ಲಿ ಯಾವುದೇ ಪ್ರಮುಖ ಪಾತ್ರವನ್ನು ವಹಿಸುವುದರಲ್ಲಿ ವಿಫಲವಾಗಿದ್ದು, ತಾವು ಪಡೆದ ಅವಕಾಶದಲ್ಲಿ ಸ್ಟೇನ್‌ ಅನುಭವಿ ಬೌಲರ್‌ ಅನ್ನೋದನ್ನು ಮರೆತು ಕಳಪೆ ಪ್ರದರ್ಶನ ನೀಡಿದ್ದು ಮುಂದಿನ ಐಪಿಎಲ್‌ನಲ್ಲಿ ಹರಾಜಿನಿಂದ ಡೇಲ್‌ ಸ್ಟೇನ್‌ ಅವರನ್ನು ಕೈಬಿಡುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿದೆ.

ಈ ಐದು ಆಟಗಾರರು ಮುಂದಿನ ಐಪಿಎಲ್‌ 2021ರಲ್ಲಿ ಆರ್‌ಸಿಬಿ ತಂಡದಿಂದ ಹೊರಹೋಗಲಿದ್ದು , ನಿಮ್ಮ ಪ್ರಕಾರ ಆರ್‌ಸಿಬಿ ಪ್ರಾಂಚೈಸಿಗಳು ಯಾವ ಆಟಗಾರರನ್ನು ತಂಡದಿಂದ ಕೈಬಿಡಬೇಕು ಹಾಗೂ ಮುಂದಿನ ಹರಾಜು ಪ್ರಕ್ರಿಯಲ್ಲಿ ಯಾವ ಆಟಗಾರರನ್ನು ತಂಡಕ್ಕೆ ತೆಗೆದುಕೊಳ್ಳುವ ಮೂಲಕ ತಂಡವನ್ನು ಬಲಪಡಿಸಿಕೊಂಡು ಕಪ್‌ ಗೆಲ್ಲ ಬೇಕು ನಮಗೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top