ರೈನಾ ವಿರುದ್ಧ ಕಿಡಿಕಾರಿದ ಶ್ರೀನಿವಾಸನ್‌..!

ಸುರೇಶ್‌ ರೈನಾ ಐಪಿಎಲ್‌ ನಿಂದ ಹೊರಬಂದಿದ್ದು, ಇದೀಗ ಚೆನ್ನೈ ತಂದಡದಲ್ಲಿ ಬಿರುಕು ಕಾಣಿಸಿಕೊಂಡಿದ್ಯ ಅನ್ನೋ ಅನುಮಾನಗಳು ಹುಟ್ಟುಕೊಂಡಿದೆ. ಚೆನ್ನೈ ತಂಡದಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡ ಬೆನ್ನಲ್ಲೇ ಐಪಿಎಲ್‌ನಿಂದ ಹೊರಬಂದ ಸುರೇಶ್‌ ರೈನಾಗೆ ಈಗ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕ, ಬಿಸಿಸಿಐ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್‌ ಕಿಡಿಕಾರಿದ್ದಾರೆ.

ʻ ಅಹಂ ಹೆಚ್ಚಾದಾಗ ಇತಹವು ನಡೆಯುತ್ತವೆ. ಧೋನಿ ರೀತಿಯೇ ಬಾಲ್ಕನಿ ರೂಂ ಬೇಕೆಂದು ರೈನಾ ಬೇಡಿಕೆಯಿತ್ತು. ಈಗ ಮುನಿಸಿಕೊಂಡು ಹೋಗಿದ್ದಾರೆ. ರೈನಾಗೆ ಪಶ್ಚಾತಾಪ ಆಗಲಿದೆ, ಆತನಿಗೆ ದೊಡ್ಡ ನಷ್ಟ ಆಗಲಿದೆ, ಚೆನ್ನೈ ತಂಡದಿಂದ ಬರುವ ಎಲ್ಲಾ ಹಣವನ್ನೂ ಕಳೆದುಕೊಂಡು ಆತನಿಗೆ ನಿರಾಸೆ ಕಾಡಲಿದೆʼ ಎಂದು ಶ್ರೀನಿವಾಸನ್‌ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ವೇಳೆ ಸುರೇಶ್‌ ರೈನಾ ವಿರುದ್ಧ ಕಿಡಿಕಾರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top