ರೈನಾ ಭಾರತಕ್ಕೆ ವಾಪಾಸಾಗಲು ಅಸಲಿ ಕಾರಣ ತಿಳಿಸಿದ ಸ್ನೇಹಿತ..!

ಸುರೇಶ್ ರೈನಾ ನಿನ್ನೆ ದಿಡೀರ್ ಐಪಿಎಲ್‍ನಿಂದ ಹೊರಬಂದಿದ್ದು, ಭಾರತಕ್ಕೆ ವಾಪಾಸಾಗ್ತಿದ್ದಾರೆ. ಇದಕ್ಕೆ ಅಸಲಿ ಕಾರಣ ಈಗ ರೈನಾ ಸ್ನೇಹಿತ ತಿಳಿಸಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಐಪಿಎಲ್‍ನಿಂದ ಹೊರಬಂದಿದ್ದ ಸುರೇಶ್, ತಮ್ಮ ಫ್ಯಾಮಿಲಿಯಲ್ಲಿ ರೈನಾ ಮಾವನ ಮೇಲೆ ಅಮಾಮಿಕರು ದಾಳಿ ನಡೆಸಿದ ಪರಿಣಾಮ ಮಾವ ನಿಧನ ಹೊಂದಿದ್ರು, ಈ ಕಾರಣಕ್ಕೆ ರೈನಾ ಐಪಿಎಲ್‍ನಿಂದ ವಾಪಾಸ್ ಬಂದಿರಬಹುದು ಎಂದು ಹೇಳಲಾಗುತ್ತಿತ್ತು.

ಇದೀಗ ರೈನಾ ಸ್ನೇಹಿತ ರೈನಾ ಐಪಿಎಲ್‍ನಿಂದ ವಾಪಾಸಾತಿಗೆ ಕಾರಣ ಏನು ಅನ್ನೋದನ್ನು ಬಿಚ್ಚಿಟ್ಟಿದ್ದಾರೆ. ಸುರೇಶ್ ರೈನಾ `ಯುಎಇಗೆ’ ಬಂದಿಳಿದ ಕ್ಷಣದಿಂದ ತನ್ನ ಪತ್ನಿ ಹಾಗೂ ಮಕ್ಕಳ ಬಗ್ಗೆ ಚಿಂತಿತರಾಗಿದ್ದರು.ತಂಡದಲ್ಲಿ ಕೊರೋನಾ ದೃಢವಾಗುತ್ತಿದ್ದಂತೆ ಭಯದಲ್ಲಿ ರೈನಾ ಭಾತತಕ್ಕೆ ವಾಪಾಸಾಗಿದ್ದಾರೆ ಎಂದು ರೈನಾ ಸ್ನೇಹಿತ ಅಜಯ್ ಸೇಥಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top