ರೀ ರಿಲೀಸ್‌ ಆಗ್ತಿದೆ ಲವ್‌ ಮಾಕ್‌ಟೇಲ್‌ ಸಿನಿಮಾ

ಲವ್‌ ಮಾಕ್‌ಟೇಲ್‌.. ಕನ್ನಡದ ಈ ವರ್ಷದ ಸೂಪರ್‌ ಹಿಟ್‌ ಸಿನಿಮಾ, ಲಾಕ್‌ಡೌನ್‌ ಗೂ ಮುಂಚೆ ರಿಲೀಸ್‌ ಆಗಿದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಸಿನಿರಸಿಕರನ್ನು ಮೋಡಿ ಮಾಡಿತ್ತು, ಡಾರ್ಲಿಂಗ್‌ ಕೃಷ್ಣ .. ಲಾಕ್‌ಡೌನ್‌ನಿಂದ ಚಿತ್ರಮಂದಿಗಳು ಬಂದ್‌ ಆದ ನಂತರ ಈ ಸಿನಿಮಾ ಓಟಿಟಿಯಲ್ಲೂ ಸಖತ್‌ ಸೌಂಡ್‌ ಮಾಡ್ತು, ಈಗಾಗಲೇ ಡಾರ್ಲಿಂಗ್‌ ಕೃಷ್ಣ ಲವ್‌ ಮಾಕ್‌ಟೇಲ್‌ ಸಿನಿಮಾದ ಸೀಕ್ವೆಲ್‌ ತಯಾರಿಯಲ್ಲಿ ತೊಡಗಿದ್ದು, ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್‌ ಮುಕ್ತಾಯವಾಗಿದೆ.

ಹೀಗಿರುವಾಗ ಇದೀಗ ಲವ್‌ಮಾಕ್‌ಟೇಲ್‌ ಸಿನಿಮಾ ರೀರಿಲೀಸ್‌ ಮಾಡೋ ಪ್ಲಾನ್‌ನಲ್ಲಿ ಇದ್ದಾರೆ. ಮಿಲನ ಮತ್ತು ಡಾರ್ಲಿಂಗ್‌ ಕೃಷ್ಣ, ಹೌದು ಅನ್‌ಲಾಕ್‌ 5.೦ನಿಂದ ಈಗಾಗಲೇ ಅಕ್ಟೋಬರ್‌ 15 ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದ್ದು, ಕೆಲವೊಂದಿಷ್ಟು ನಿಯಾಮವಳಿಗಳನ್ನು ಅನುಸರಿಸಿ ಥಿಯೇಟರ್‌ ಓಪನ್‌ಗೆ ಅನುಮತಿ ದೊರೆತಿದೆ. ಇನ್ನು ಥಿಯೇಟರ್‌ ಓಪನ್‌ ಆದ್ರು, ಸಿನಿಮಾ ರಿಲೀಸ್‌ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದು, ಚಿತ್ರಮಂದಿರದ ಕಡೆಗೆ ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಅನ್ನೋ ಅನುಮಾನಗಳು ಶುರುವಾಗಿದೆ. ಇನ್ನು ಹಳೇಯ ಹಿಟ್‌ ಸಿನಿಮಾಗಳನ್ನು ರಿ ರಿಲೀಸ್‌ ಮಾಡಿದ್ರೆ ಪ್ರೇಕ್ಷಕರನ್ನು ಥಿಯೇಟರ್‌ ಕಡೆ ಬರುವಂತೆ ಮಾಡಬಹುದು ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಇದೀಗ ಲವ್‌ಮಾಕ್‌ಟೇಲ್‌ ಸಿನಿಮಾವನ್ನು ರಿ ರಿಲೀಸ್‌ ಮಾಡೋ ಮೂಲಕ ಶುಭಾರಂಭ ಮಾಡಲು ಡಾರ್ಲಿಂಗ್‌ ಕೃಷ್ಣ ಮನಸ್ಸು ಮಾಡಿದ್ದಾರೆ. ಇದರಂತೆ ಅಕ್ಟೋಬರ್‌ 16ರಂದು ಸಿನಿಮಾ ರಿ ರಿಲೀಸ್‌ ಆಗ್ತಾ ಇದ್ದು, ಕೆಲವು ಪ್ರಮುಖ ಥಿಯೇಟರ್‌ಗಳಲ್ಲಿ ಲವ್‌ಮಾಕ್‌ಟೇಲ್‌ ಪ್ರದರ್ಶನ ಕಾಣಲಿದೆ. ಈಗಾಗಲೇ ಜನರನ್ನು ಮೋಡಿ ಮಾಡಿರೋ ಲವ್‌ಮಾಕ್‌ಟೇಲ್‌ ಸಿನಿಮಾ ಲಾಕ್‌ಡೌನ್‌ ನಂತರ ಮೊದಲ ಬಾರಿ ಥಿಯೇಟರ್‌ ಓಪನ್‌ ಆಗ್ತಾ ಇದ್ದು..ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾ ಕಾದುನೋಡಬೇಕು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top