ರಿವೀಲ್‌ ಆಯ್ತು ರಾಬರ್ಟ್‌ ಚಿತ್ರದ ದರ್ಶನ್‌ ಲುಕ್‌..!

ರಾಬರ್ಟ್‌ ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾ, ಈಗಾಗಲೇ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರೋ ಚಿತ್ರತಂಡ. ಈಗಾಗಲೇ ಚಿತ್ರದ ಅನೇಕ ಪೋಷನ್‌ಗಳನ್ನು ಕಂಪ್ಲೀಟ್‌ ಮಾಡಿದ್ದು, ಸದ್ಯ ಕಾಶಿಯಲ್ಲಿ ಬೀಡು ಬಿಟ್ಟಿರೋ ಚಿತ್ರತಂಡ, ಚಿತ್ರದ ಪ್ರಮುಖ ಪೋಷನ್‌ ಒಂದರ ಶೂಟಿಂಗ್‌ನಲ್ಲಿ ತೊಡಗಿಕೊಂಡಿದೆ. ಇನ್ನು ಚಿತ್ರದ ಶೂಟಿಂಗ್‌ ಸಮಯದ ಕೆಲವೊಂದು ಫೋಟೋಗಳು ಈಗ ಲೀಕ್‌ ಆಗಿದ್ದು. ಫೋಟೋದಲ್ಲಿ ದರ್ಶನ್‌ ಶಾಲ್‌ ಹೊದ್ದುಕೊಂಡು ನಡೆದು ಹೋಗುತ್ತಿರೋ ಫೋಟೋ ಒಂದು ಈಗ ವೈರಲ್‌ ಆಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕ್ಯೂರ್ಯಾಸಿಟಿ ಹೆಚ್ಚಿಸಿದೆ.

ಇನ್ನು ರಾಬರ್ಟ್‌ ಚಿತ್ರತಂಡ ಇದು ವರೆಗೂ ಚಿತ್ರದ ಸ್ಥಳದಲ್ಲಿ ಮೊಬೈಲ್‌ ನಿಷೇಧ ಕೂಡ ಮಾಡಿತ್ತು, ಆದ್ರೆ ಕಾಶಿಯಲ್ಲಿನ ಶೂಟಿಂಗ್‌ ವೇಳೆಯ ಈ ಫೋಟೋ ಸದ್ಯ ಲೀಕ್‌ ಆಗಿದ್ದು ಚಿತ್ರದ ಬಗ್ಗೆ ಟಾಕ್‌ ಶುರುವಾಗಲು ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top