ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಟಿಕ್ ಟಾಕ್ ಮಾಡಿ ಸತ್ತ ಯುವಕ..!

ಇತ್ತೀಚೆಗೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟಿಕ್‌ಟಾಕ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ಕಿರಣ್ ಎಂಬ ಹುಡುಗ ಇತ್ತೀಚೆಗೆ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದ, ಆದ್ರೆ ಆತ್ಮಹತ್ಯೆಗೆ ಕಾರಣ ಹುಡುಕಿದಾಗ ಆತ ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗಲಿಲ್ಲವೆಂದೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ, ಕಿರಣ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದೊಡ್ಡ ಸ್ಟಾರ್ ಆಗಬೇಕು ಅಂತ ಮಧ್ಯವರ್ತಿಗಳ ಸಹಾಯದಿಂದ ರಿಯಾಲಿಟಿ ಶೋಗೆ ಎಂಟ್ರಿಕೊಡಲು ಪ್ರಯತ್ನಿಸಿದ್ದಾನೆ, ಆದ್ರೆ ಕೊನೆ ಕ್ಷಣದಲ್ಲಿ ಮಧ್ಯವರ್ತಿಗಳು ನಿನಗೆ ಚಾನ್ಸ್ ಸಿಕ್ಕಿಲ್ಲ‌ ಮುಂದಿನ ಸಲ ಟ್ರೈ ಮಾಡು ಅಂತ ಹೇಳಿದ್ದಾರೆ.

ಇದರಿಂದ ಮನನೊಂದ ಕಿರಣ್ ಹೊಸಕೋಟೆಯ ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದು ಇದು ನನ್ನ ಲಾಸ್ಟ್ ಟಿಕ್ ಟಾಕ್ ನಾನು ನನ್ನ ತಂದೆ ತಾಯಿಗೆ ಒಬ್ಬನೆ ಮಗ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ‌ ಟಿಕ್‌ಟಾಕ್ ಮೂಲಕ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದು ಇಂತಹ ಘಟನೆಗಳು ಇನ್ನುಮುಂದೆ ನಡೆಯ ಬಾರದು ಅಂತ ಮೋಸದ ಜಾಲದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಕುಟುಂಬಸ್ಥರು ಮತ್ತು‌ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top