
ಐಪಿಎಲ್ 2020ಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆರೇಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದ ಪಂಜಾಬ್ ತಂಡದ ನಾಯಕ ಟೀಂ ಇಂಡಿಯಾದ ಉಪನಾಯಕ ಕೆ ಎಲ್ ರಾಹುಲ್ ಮೊದಲ ಟಿ ೨೦ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಧವನ್ ಮತ್ತು ವಿರಾಟ್ ಕೊಹ್ಲಿಯ ವಿಕೆಟ್ ಬಹುಬೇಗನೆ ಕಳೆದುಕೊಂಡಿತು. ಇನ್ನು ಓಪನರ್ ಆಗಿ ಬಂದ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದ್ರು.
51ರನ್ಗಳಿಗೆ ವಿಕೆಟ್ಗೆ ಒಪ್ಪಿಸಿದ ರಾಹುಲ್ ನಂತರ ಮೂರನೇ ಏಕದಿನ ಪಂದ್ಯದಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಹಾರ್ಧಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಉತ್ತಮ ಮೊತ್ತ ಕಲೆಹಾಕುವಲ್ಲಿ ಪ್ರಯತ್ನಿಸಿದ್ರು ಪಾಂಡ್ಯ ದೊಡ್ಡ ಹೊಡೆತಕ್ಕೆ ಮುಂದಾದ ಕೂಡಲೇ ಔಟ್ ಆದ್ರು . ನಂತರ ಜಡೇಜಾ 23 ಎಸೆತಗಳಲ್ಲಿ44ರನ್ ಸಿಡಿಸೋ ಮೂಲಕ ಟೀಂ ಇಂಡಿಯಾಗೆ 20 ಓವರ್ಗಳಲ್ಲಿ 161ರನ್ ಕಲೆಹಾಕಲು ನೆರವಾದ್ರು.
ಇವತ್ತಿನ ಪಂದ್ಯದಲ್ಲಿ ರಾಹುಲ್ ಜಡೇಜಾ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.