ರಾಹುಲ್‌ ಅದ್ಭುತವಾಗಿ ಆಡೋಕೆ ಆ ನೀರು ಕಾರಣ – ಸುನಿಲ್‌ ಗವಾಸ್ಕರ್‌

ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರು ಅದ್ಭುತವಾದ ಪ್ರದರ್ಶನವನ್ನು ನೀಡ್ತಾ ಇದ್ದಾರೆ. ನಿನ್ನೆಯ ಪಂದ್ಯದಲ್ಲಿ ಆರ್‌ ಆರ್‌ ವಿರುದ್ಧ ಹೈದರಬಾದ್‌ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕನ್ನಡಿಗ ಮನಿಷ್‌ ಪಾಂಡೆ ಅಮೋಘ 83 ರನ್‌ಗಳನ್ನು ಸಿಡಿಸೋ ಮೂಲಕ ತಂಡದ ಗೆಲುವಿಗೆ ಕಾರಣಕರ್ತನಾಗಿದ್ದು, ಜೊತೆಗೆ ಹೈದರಬಾದ್‌ ತಂಡದ ಪ್ಲೇ ಆಫ್‌ ಕನಸನ್ನು ಜೀವಂತವಾಗಿಸಿದ್ದಾರೆ. ಇನ್ನು ಆರ್‌ಆರ್‌ ತಂಡದಲ್ಲಿರೋ ಕನ್ನಡಿಗ ಶ್ರೇಯಸ್‌ ಗೋಪಾಲ್‌ ಉತ್ತಮ ಬೌಲಿಂಗ್‌ ಮಾಡೋ ಮೂಲಕ ತಂಡಕ್ಕೆ ಬಲ ನೀಡ್ತಾ ಇದ್ದಾರೆ. ಇನ್ನು ಇತ್ತ ಆರ್‌ಸಿಬಿ ತಂಡದಲ್ಲಿ ದೇವದತ್‌ ಪಡಿಕಲ್‌ ತಂಡಕ್ಕೆ ಬೆಸ್ಟ್‌ ಓಪನಿಂಗ್‌ ತಂದುಕೊಡುವ ಮೂಲಕ ಉತ್ತಮ ಸ್ಕೋರ್‌ ಮಾಡಲು ಭದ್ರ ಬುನಾದಿ ಹಾಕಿ ಕೊಡ್ತಾ ಇದ್ರೆ, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಪ್ರಸಿಧ್‌ ಕೃಷ್ಣ ಕೆಕೆಆರ್‌ ತಂಡದಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇದ್ದಾರೆ.

ಇನ್ನು ಐದು ಜನ ಕನ್ನಡಿಗರೆ ಇರೋ ಪಂಜಾಬ್‌ ತಂಡದಲ್ಲಿ ಕನ್ನಡಿಗರ ಕಮಾಲ್‌ ಜೋರಾಗೆ ನಡೀತಾ ಇದೆ. ಒಂದು ಕಡೆ ಕನ್ನಡಿಗ ಕೆಎಲ್‌ ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನದ ನೀಡೋ ಮೂಲಕ ಅತಿ ಹೆಚ್ಚು ರನ್‌ ಬಾರಿ ಆರೆಂಜ್‌ ಕ್ಯಾಪ್‌ ತೊಟ್ಟು ಆಡುತ್ತಿದಾರೆ. ಜೊತೆಯಲ್ಲಿ ಬೆಸ್ಟ್‌ ಕ್ಯಾಪ್ಟನ್‌ ಶಿಪ್‌ ನಡೆಸುತ್ತಿದ್ರೆ, ರಾಹುಲ್‌ಗೆ ಮಾಯಾಂಕ್‌ ಅಗರ್‌ವಾಸ್‌ ಸಾಥ್‌ ನೀಡೋ ಮೂಲಕ ಉತ್ತಮ ಪ್ರದರ್ಶನ ನೀಡ್ತಾ ಇದ್ದಾರೆ. ಇನ್ನು ಕನ್ನಡಿಗ ಅನಿಲ್‌ ಕುಂಬ್ಳೆ ಮಾರ್ಗದರ್ಶನದಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇರೋ ಪಂಜಾಬ್‌ ತಂಡ ಈಗಾಗಲೇ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗಾಗಿ ಸಖತ್‌ ಫೈಟ್‌ ನೀಡ್ತಾ ಇದೆ. ಹೀಗಿರುವಾಗಲೇ ಇದೀಗ ಟೀಂ ಇಂಡಿಯಾದ ಲೆಜೆಂಡರಿ ಆಟಗಾರ ಸುನಿಲ್‌ ಗವಾಸ್ಕರ್‌ ಕೆಎಲ್‌ ರಾಹುಲ್‌ ಮತ್ತು ಕರ್ನಾಟಕದ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಸುನೀಲ್‌ ಗವಾಸ್ಕರ್‌ ಕಾಮೆಂಟರಿ ವೇಳೆ ಮಾತನಾಡಿದ್ದು, ಕೆಎಲ್‌ ರಾಹುಲ್‌ ಬಗ್ಗೆ ಮಾತನಾಡುತ್ತಾ ಐಪಿಎಲ್‌ನಲ್ಲಿ ರಾಹುಲ್‌ ಉತ್ತಮವಾಗಿ ಆಡಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಬೆಂಗಳೂರಿನ ನೀರು ಎಂದು ಗವಾಸ್ಕರ್‌ ಹೇಳಿದ್ದಾರೆ. ಕೇವಲ ರಾಹುಲ್‌ ಮಾತ್ರವಲ್ಲ ಬೆಂಗಳೂರಿನ ನೀರು ಕುಡಿದ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡ್ತಾ ಇದ್ದಾರೆ. ಬೆಂಗಳೂರು ಹಲವಾರು ವಿಶ್ವ ಪ್ರಸಿದ್ಧ ಕ್ರೀಡಾಪಟುಗಳನ್ನು ನೀಡಿದೆ. ಬರೀ ಕ್ರಿಕೆಟ್‌ ಮಾತ್ರವಲ್ಲ ಎಲ್ಲಾ ಕ್ರೇತ್ರದಲ್ಲೂ ಉತ್ತಮ ಆಟಗಾರರನನ್ನು ನೀಡಿದೆ. ಪ್ರಕಾಶ್‌ ಪಡುಕೋಣೆ ನನ್ನ ನೆಚ್ಚಿನ ಕ್ರೀಡಾಪಡು, ಗುಂಡಪ್ಪ ವಿಶ್ವನಾಥ್‌,ಎರಪಲ್ಲಿ ಪ್ರಸನ್ನ,ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಾವಗಲ್‌ ಶ್ರೀನಾಥ್‌ ರೀತಿಯ ವಿಶ್ವಮಟ್ಟದ ಕ್ರೀಡಾಪಟುಗಳನ್ನು ಬೆಂಗಳೂರು ,ಕರ್ನಾಟಕ ಹುಟ್ಟುಹಾಕಿದೆ. ಇವರೆಲ್ಲಾ ಉತ್ತಮವಾಗಿ ಆಡಲು ಕರ್ನಾಟಕದ ಬೆಂಗಳೂರಿನ ನೀರೇ ಕಾರಣ ಅಂತ ಹೇಳುವ ಮೂಲಕ ಬೆಂಗಳೂರನ್ನು ಹಾಡಿಹೊಗಳಿದ್ದಾರೆ.

ಸುನೀಲ್‌ ಗವಾಸ್ಕರ್‌ ಅವರ ಈ ಪ್ರಶಂಸೆ ಬಗ್ಗೆ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top