ರಾಷ್ಟ್ರ ಗೀತೆ ಹಾಡುವ ವೇಳೆ ಕಣ್ಣೀರಿಟ್ಟ RCB ಆಟಗಾರ

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಇಂದು ಆರಂಭವಾಗಿದ್ದು, ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿದೆ, ಮಳೆಯ ಅಡ್ಡಿಯ ನಡುವೆಯು ಮೊದಲ ದಿನದ ಪಂದ್ಯ ನಡೆದಿದ್ದು, ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ವೇಗದ ಬೌಲರ್ ಆರ್‍ಸಿಬಿ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ರಾಷ್ಟ್ರಗೀತೆಯ ವೇಳೆ ಕಣ್ಣೀರು ಹಾಕಿರೋ ಘಟನೆ ನಡೆದಿದೆ.

ಹೌದು ಪಂದ್ಯ ಆರಂಭಕ್ಕೂ ಮುನ್ನ ಎರಡು ತಂಡಗಳ ದೇಶದ ರಾಷ್ಟ್ರಗೀತೆ ಆಡುವ ವೇಳೆ ಭಾರತ ರಾಷ್ಟ್ರಗೀತೆ ಜನಗಣಮನ ಶುರುವಾಗುತ್ತಿದ್ದ ಮೊಹಮ್ಮದ್ ಸಿರಾಜ್ ಕಣ್ಣೀರು ಹಾಕಿದ್ದಾರೆ ಕಣ್ಣೀರು ಹಾಕಿದ ದೃಶ್ಯ ವೈರಲ್ ಆಗಿದ್ದು, ಈ ಬಗ್ಗೆ ಮೊಹಮ್ಮದ್ ಸಿರಾಜ್ ಹೇಳಿಕೆಯನ್ನು ನೀಡಿದ್ದಾರೆ.

ನಾನು ಭಾರತ ತಂಡಕ್ಕಾಗಿ ಟೆಸ್ಟ್ ಮಾದರಿಯಲ್ಲಿ ಆಡಬೇಕೆನ್ನುವುದು ನನ್ನ ತಂದೆಯ ಕನಸಾಗಿತ್ತು, ಇಂದು ಬದುಕಿದ್ದರೆ ನಾನು ಟೆಸ್ಟ್ ಆಡುವುದ ನೋಡಿ ಆನಂದಪಡುತ್ತಿದ್ದರು ಅದನ್ನು ನೆನಸಿಕೊಂಡು ಕಣ್ಣೀರುಬಂತು ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿರೋ ಮೊಹಮ್ಮದ್ ಸಿರಾಜ್ ಡೆವಿಡ್ ವಾರ್ನರ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದ್ರು.

ಐಪಿಎಲ್ ಇನ್ನೇನೂ ಮಾರ್ಚ್ ಅಂತ್ಯದಲ್ಲಿ ಶುರುವಾಗಲಿದ್ದು, ಈಗಾಗಲೇ ಬಿಸಿಸಿಐ ಐಪಿಎಲ್‍ನ ಎಲ್ಲಾ ಫ್ರಾಂಚೈಸಿಗಳಿಗೂ ತಮ್ಮ ತಂಡದ ಆಟಗಾರರನ್ನು ಜನವರಿ 21ರ ಒಳಗೆ ಬಿಡುಗಡೆ ಮಾಡಲು ಸೂಚಿದೆ, ಇದೀಗ ಫೆಬ್ರವರಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲ್ಲಿದ್ದು ಯಾವ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಅನ್ನೋದನ್ನ ನಾವ್ ಇವತ್ತು ನೋಡೋಣ ಚೆನ್ನೈ ಸೂಪರ್ ಕಿಂಗ್ಸ್ ಬಳಿ 0.15 ಕೋಟಿ ಮಾತ್ರ ಇದ್ರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ 16.5 ಕೋಟಿ ಇದೆ, ರಾಜಸ್ಥಾನ್ ರಾಯಲ್ಸ್ ಬಳಿ 14.75 ಕೋಟಿ, ಸನ್‍ರೈರ್ಸ್ ಹೈದರಬಾದ್ ಬಳಿ 10.1 ಕೋಟಿ,ಡೆಲ್ಲಿ ಕ್ಯಾಪಿಟಲ್ಸ್ ಬಳಿ 9 ಕೋಟಿ, ಕೆಕೆಆರ್ ಬಳಿ 8.5 ಕೋಟಿ, ಆರ್‍ಸಿಬಿ ಬಳಿ 6.4 ಕೋಟಿ ಮುಂಬೈ ತಂಡದಲ್ಲಿ 1.95 ಕೋಟಿ ಉಳಿದೆ. ಇದರ ಜೊತೆಯಲ್ಲಿ ತಂಡಗಳು ಯಾವ ಯಾವ ಆಟಗಾರನ್ನು ಕೈ ಬಿಡುಗಡೆ ಮಾಡಿ ಆ ಮೂಲಕ ತಂಡದಲ್ಲಿ ಮತ್ತಷ್ಟು ಹಣವನ್ನು ಉಳಿತಾಯ ಮಾಡುಕೊಳ್ಳುವ ಮೂಲಕ ಮಿನಿ ಆಕ್ಷನ್‍ಗೆ ತಯಾರಿಯನ್ನು ನಡೆಸುತ್ತಿವೆ ಎಲ್ಲಾ ಫ್ರಾಂಚೈಸಿಗಳು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top