ರಾಮಾಂಜನೇಯಾರಾದ ದರ್ಶನ್‌ ಸುದೀಪ್‌- ಇದು ಸಿನಿಮಾ ಪೋಸ್ಟರ್‌ ಏನೂ..?

ಸ್ಯಾಂಡಲ್‌ವುಡ್‌ನಲ್ಲಿ ವಿಷ್ಣು ದಾದಾ ಮತ್ತು ಅಂಬರೀಷ್‌ ಇಬ್ಬರು ಕುಚಿಕು ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ಅವರನ್ನು ಬಿಟ್ಟರೇ ದರ್ಶನ್‌ ಮತ್ತು ಸುದೀಪ್‌ ಸ್ಯಾಂಡಲ್‌ವುಡ್‌ನ ಕುಚಿಕು ಗೆಳೆಯರು ಅಂತಾನೇ ಒಂದು ಕಾಲದಲ್ಲಿ ಹೇಳಲಾಗುತ್ತಿತ್ತು. ಸದ್ಯ ಇಬ್ಬರ ನಡುವೆ ಮನಸ್ತಾ ಉಂಟಾಗಿ ಈ ಕುಚಿಕು ಗೆಳೆಯರು ದೂರವಾಗಿದ್ದಾರೆ. ಈ ಇಬ್ಬರು ಸ್ಟಾರ್‌ಗಳು ದೂರವಾಗಿದ್ದರಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ಒಂದುಷ್ಟು ಜನ ಅವರ ಕುಚಿಕು ಗೆಳೆತನವನ್ನು ಮಿಸ್‌ ಮಾಡಿಕೊಳ್ತಿದ್ರೆ, ಇತ್ತ ಅಭಿಮಾನಿಗಳು ಇವರಿಬ್ಬರನ್ನು ಮತ್ತೆ ಒಟ್ಟಿಗೆ ನೋಡ ಬೇಕು ಅಂತ ಬಯಸುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲೂ ಸಹ ದರ್ಶನ್‌ ಮತ್ತು ಸುದೀಪ್‌ ಒಂದಾಗ ಬೇಕು ಆಗ ಸ್ಯಾಂಡಲ್‌ವುಡ್‌ನಲ್ಲಿ ಒಂದು ಹವಾ ಇರುತ್ತೆ ಅನ್ನೋ ಮಾತುಗಳು ಆಗಾಗೇ ಸೋಶಿಯಲ್‌ ಮೀಡಿಯಾದಲ್ಲಿ ಕೇಳಿ ಬರ್ತಾನೆ ಇರುತ್ತೆ. ಇನ್ನು ಇವರಿಬ್ಬರು ಜೊತೆಯಲ್ಲಿರೋ ಫೋಟೋಗಳು ಸಹ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತೆ.

ಇದೀಗ ಅಂತಹದ್ದೇ ಒಂದು ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ಫೋಟೋದಲ್ಲಿ ದರ್ಶನ್‌ ಮತ್ತು ಸುದೀಪ್‌ ರಾಮ-ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ ಅಂತ ಅಭಿಮಾನಿಗಳು ಖುಷಿಯಲ್ಲಿ ಪ್ರಶ್ನೆಗಳನ್ನು ಕೇಳ್ತಿದ್ದಾರೆ, ಆದ್ರೆ ಈ ರೀತಿ ರಾಮ ಆಂಜನೇಯರಾಗಿ ದರ್ಶನ್‌, ಸುದೀಪ್‌ ಕಾಣಿಸಿಕೊಂಡಿದ್ದು ಯಾವುದೋ ಸಿನಿಮಾಗಾಗಿಲ್ಲ ಬದಲಿಗೆ ಕಲಾವಿದನ ಕೈ ಚಳಕದಿಂದ ಈ ಒಂದು ಫೋಟೋ ಮೂಡಿ ಬಂದಿದೆ , ಇಲ್ಲಿ ದರ್ಶನ್‌ ರಾಮನಾಗಿ ಕಾಣಿಸಿಕೊಂಡಿದ್ರೆ ಸುದೀಪ್‌ ಆಂಜನೇಯನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ರೀತಿ ರಾಮಾಂಜನೇಯ ಫೋಟೋ ಕ್ರಿಯೇಟ್‌ ಮಾಡಿರೋ ಕಲಾವಿದ ಕರಣ್‌ ಆಚಾರ್ಯ, ಇನ್ನು ಕರಣ್‌ ಆಚಾರ್ಯ ಅದೆಷ್ಟೋ ಫೋಟೋಗಳಿಗೆ ನಮ್ಮ ಕಲ್ಪನೆಗೂ ಮೀರಿದ ರೀತಿಯಲ್ಲಿ ಜೀವ ತುಂಬುವ ಕೆಲಸವನ್ನು ಮಾಡುತ್ತಿದ್ದರು, ಇದೀಗ ಅಭಿಮಾನಿಯೊಬ್ಬರು ದರ್ಶನ್‌ ಮತ್ತು ಸುದೀಪ್‌ ಒಟ್ಟಿಗೆ ಇರೋ ಫೋಟೋ ಕಳುಹಿಸಿ ಈ ಫೋಟೋವನ್ನು ರಾಮಾಂಜನೇಯಾ ಮಾಡಿ ಎಂದು ಮನವಿಮಾಡಿಕೊಂಡಿದ್ದರು. ಅಭಿಮಾನಿಯ ಮನವಿಯನ್ನು ಸ್ವೀಕರಿಸಿದ್ದ ಕರಣ್‌ ಆಚಾರ್ಯ ದರ್ಶನ್‌ ಮತ್ತು ಸುದೀಪ್‌ ಒಟ್ಟಿಗೆ ಇರೋ ಫೋಟೋಗೆ ಜೀವ ತುಂಬಿದ್ದು ರಾಮಾಂಜನೇಯಾರಾಗಿ ದರ್ಶನ್‌ ಮತ್ತು ಸುದೀಪ್‌ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈ ಫೋಟೋಗೆ ಇದೀಗ ಅಭಿಮಾನಿಗಳು ಫಿದಾ ಆಗಿದ್ದು, ಇದೇ ರೀತಿ ತೆಲುಗು ಮತ್ತು ತಮಿಳಿನ ಕೆಲ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ನಟರ ಫೋಟೊ ಕಳುಹಿಸಿ ಈ ಜೋಡಿಯನ್ನು ಒಂದು ಮಾಡಿ ಅನ್ನೋ ಮನವಿಯನ್ನು ಕಳುಹಿಸುತ್ತಿದ್ದಾರಂತೆ.

ಅದೇನೇ ಇದ್ರು ಕಳೆದ ಕೆಲವು ಸಮಯಗಳ ಹಿಂದೆ ದರ್ಶನ್‌ ಟ್ವೀಟ್‌ ಮಾಡಿ ನಾನು ಮತ್ತು ಸುದೀಪ್‌ ಇನ್ನು ಮುಂದೆ ಸ್ನೇಹಿತರಲ್ಲ , ಇಂಡಸ್ಟ್ರಿಗಾಗಿ ಕೆಲಸ ಮಾಡೋ ನಟರು ಅಂತ ಹೇಳಿ ಟ್ವೀಟ್‌ ಮಾಡುವ ಮೂಲಕ ಇಬ್ಬರು ಅಭಿಮಾನಿಗಳಿಗೂ ಶಾಕ್‌ ನೀಡಿದ್ರು. ಇದೀಗ ಈ ಇಬ್ಬರನ್ನು ಕರಣ್‌ ಆಚಾರ್ಯ ರಾಮಾಂಜನೇಯರನ್ನಾಗಿ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಈ ಫೋಟೋ ನೋಡಿದ ಅಭಿಮಾನಿಗಳು ಇನ್ನು ಮುಂದೆಯಾದ್ರು ಈ ಇಬ್ಬರು ಸ್ಟಾರ್‌ ನಟರು ಒಂದಾಗಿ ಒಟ್ಟಾಗಿ ಸಿನಿಮಾ ಮಾಡಲಿ ಅಂತ ಅನ್ನುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top