ರಾತ್ರಿ ಹಾಲಿನಲ್ಲಿ ಖರ್ಜೂರವನ್ನು ಹೀಗೆ ಮಾಡಿ ಸೇವಿಸಿ ನೋಡಿ!

ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಅನ್ನೋ ಆಸೆ ಇದ್ದೇ ಇರುತ್ತದೆ.. ಪ್ರತಿದಿನ ಮನೆಯಲ್ಲಿಯೇ ಕೆಲವೊಂದು ಮದ್ದುಗಳನ್ನು ಮಾಡಿಕೊಂಡ್ರೆ ಆರೋಗ್ಯ ಉತ್ತಮವಾಗಿ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ, ಅಂತಹದರಲ್ಲಿ ಖರ್ಜೂರವೂ ಒಂದು, ನೈಸರ್ಗಿಕವಾಗೇ ಸಿಹಿ ಅಂಶವನ್ನು ಹೊಂದಿರುವ ಖರ್ಜೂರದಲ್ಲಿ ಯಾವೆಲ್ಲಾ ಆರೋಗ್ಯ ಗುಣಗಳಿವೆ ಅನ್ನೋದನ್ನ ಇವತ್ತು ನಾವ್ ಹೇಳ್ತೀವಿ.. ಈ ಕೆಳಗಿನ ಅಂಶಗಳನ್ನು ನೀವೂ ಅನುಸರಿಸಿದ್ರೆ ನಿಮ್ಮ ಆರೋಗ್ಯವೂ ಕೂಡ ಭಾಗ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

1.ಖರ್ಜೂರವನ್ನು ತಿನ್ನುವುದರಿಂದ ಮಲಬದ್ಧತೆ, ಲೈಂಗಿಕ ಸಮಸ್ಯೆಗಳಿಗೆ ಇದು ಒಂದೊಳ್ಳೇ ಮದ್ದು ಅಂತಾನೇ ಹೇಳಬಹುದು.

2.ರಕ್ತ ಹೀನತೆಯಿಂದ ಬಳಲುತ್ತಿರುವ ವ್ಯಕ್ತಿ ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಸಮಸ್ಯೆಯನ್ನು ಬಹುಬೇಗ ಗುಣಪಡಿಸಿಕೊಳ್ಳಬಹುದು.

3.ಕಣ್ಣಿನ ಸಮಸ್ಯೆಗೆ ಖರ್ಜೂರ ಒಂದು ಒಳ್ಳೇ ಮದ್ದು, ಖರ್ಜೂರ ತಿನ್ನಲು ರುಚಿ ಮಾತ್ರವಲ್ಲದೆ ಪ್ರೋಟೀನ್, ಕಾರ್ಬಹೈಡ್ರೇಟ್, ನಾರಿನಂಶ, ಕೊಬ್ಬಿನಂಶ, ಕ್ಯಾಲ್ಸಿಯಂ, ಕಬ್ಬಿಣ ಅಂಶ, ಸೋಡಿಯಂ, ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಎ’ ಅಂಶಗಳನ್ನು ತನ್ನಲ್ಲಿ ಒಳಗೊಂಡಿರುವುದು. ದೇಹಕ್ಕೆ ಬೇಕಾಗಿರುವ ಕರಗುವ ಮತ್ತು ಕರಗದಿರುವ ನಾರಿನ ಅಂಶಗಳು ಮತ್ತು ಕ್ಯಾಲೋರಿಗಳು, ಇತರ ಡ್ರೈ ಫ್ರೂಟ್ಸ್ ಗಳಿಗೆ ಹೋಲಿಸಿದರೆ ಖರ್ಜೂರದಲ್ಲಿ ಹೆಚ್ಚಿರುವುದರಿಂದ ಇದು ನಮ್ಮ ಕಣ್ಣಿನ ರೆಟೀನಾವನ್ನು ಉತ್ತಮವಾಗಿರಿಸುತ್ತದೆ.

5.ಪ್ರತಿದಿನ ಎರಡರಿಂದ ಮೂರು ಖರ್ಜೂರವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕರುಳಿನ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು.

5.ರಾತ್ರಿ ಮಲಗುವಾಗ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಅದರ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಕರುಳಿನ ಕೆಲಸಗಳು ಸರಾಗವಾಗಿ ನಡೆಯುತ್ತವೆ, ಅಲ್ಲದೇ ಮಲಬದ್ಧತೆಯು ಸಹ ಕಡಿಮೆಯಾಗುತ್ತದೆ.

6.ಗರ್ಭಿಣಿಯರು ಈ ಸಮಯದಲ್ಲಿ ಖರ್ಜೂರವನ್ನು ತಿನ್ನುವದರಿಂದ ಹೆರಿಗೆ ನೋವಿನ ಅನುಭವ ಕಡಿಮೆಯಾಗುತ್ತದೆ.ಅಲ್ಲದೇ ರಕ್ತಸ್ರಾವವಾಗುವುದನ್ನು ಸಹ ಇದು ತಡೆಯುತ್ತದೆ.

7.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದರಿಂದ ಅದು ನಮ್ಮ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿ ಇಡಲು ಸಹಾಯವನ್ನು ಮಾಡುತ್ತದೆ.

8.ಹೃದಯ ಸಂಬಂಧಿ ಸಮಸ್ಯೆ ಇರುವವರು ಪ್ರತಿದಿನ ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.

9.ಈ ಹಣ್ಣಿನಲ್ಲಿ ಸುಕ್ರೋಸ್, ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶಗಳನ್ನು ಹೊಂದಿರುವುದರಿಂದ ಇದನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ನಮ್ಮ ದೇಹದ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.

10.ಪ್ರತಿದಿನ ರಾತ್ರಿ ಹಾಲಿನಲ್ಲಿ ಖರ್ಜೂರ ಬೆರಸಿ ಅದನ್ನು ಬೆಳಗ್ಗೆ ಅದಕ್ಕೆ ಏಲಕ್ಕಿಯನ್ನು ಬೆರೆಸಿ ಕುಡಿಯುವುದರಿಂದ ಪ್ರತಿಯೊಬ್ಬರಲ್ಲಿಯೂ ಲೈಂಗಿಕ ಆಸಕ್ತಿಯನ್ನು ಇದು ಹೆಚ್ಚಿಸುತ್ತದೆ.

11.ಪ್ರತಿದಿನ ಎರಡರಿಂದ ಮೂರು ಖರ್ಜೂರವನ್ನು ಸೇವನೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಗೆ ಬಗೆಹರಿಯುತ್ತದೆ, ಇದು ಕೂದಲಿನ ಬುಡವನ್ನು ಗಟ್ಟಿಮಾಡುವಲ್ಲಿ ಸಹಕಾರಿಯಾಗುತ್ತದೆ.

ಈ ರೀತಿ ಮನೆಯಲ್ಲಿಯೇ ನಮ್ಮ ಆರೋಗ್ಯಕ್ಕೆ ಬೇಕಾಗುವ ಅಂಶಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸಿದ್ರೆ ನಮ್ಮ ಆರೋಗ್ಯ ಭಾಗ್ಯವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top