ರಾಣಾ ದಗ್ಗುಬಾಟಿಗೆ ಕಿಡ್ನಿ ದಾನ ಮಾಡಿದ ಹೆತ್ತ ತಾಯಿ..!

ಟಾಲಿವುಡ್‍ನ ಟ್ಯಾಲೆಂಟೆಡ್ ನಟ ರಾಣಾ ದಗ್ಗುಬಾಟಿ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವನಾಗಿ ಮಿಂಚಿ ತಮ್ಮದೇ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ, ರಾಣಾ ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ, ನಾಯಕ ನಟನಾಗಿ ಖಳನಟನಾಗಿ ಮಿಂಚಿರೋ ರಾಣಾ ಸದ್ಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಣಾ ಹೈದರಾಬಾದ್ ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆದ್ರು ಅಷ್ಟೇನೂ ಚೇತರಿಕೆ ಕಂಡಿರಲಿಲ್ಲ, ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚಿಕಾಗೋಗೆ ಕುಟುಂಬದವರ ಜೊತೆ ತೆರಳಿದ್ರು, ಕಿಡ್ನಿ ಸಮಸ್ಯೆಯಿಂದಾಗಿ ರಾಣಾ ಅವರ ಕಿಡ್ನಿಯನ್ನು ಕಸಿಮಾಡುವ ಅಗತ್ಯವಿತ್ತು ಈ ಕಾರಣಕ್ಕಾಗಿ ರಾಣಾ ಅವರ ತಾಯಿ ತಮ್ಮ ಮೂತ್ರಪಿಂಡವನ್ನು ರಾಣಾಗಾಗಿ ದಾನಮಾಡಿದ್ದಾರೆ.

ಸದ್ಯ ಚಿಕಿತ್ಸೆ ಯಶಸ್ವಿಯಾಗಿದ್ದು ರಾಣಾ ಚೇತರಿಕೆ ಕಾಣುತಿದ್ದಾರೆ, ಈ ವಿಷಯ ತಿಳಿದ ಕುಟುಂಬಸ್ಥರ ಮುಖದಲ್ಲಿ ನಗು ಮೂಡಿದ್ದು, ರಾಣಾ ದಗ್ಗುಬಾಟಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಡಾಕ್ಟರ್ ಸೂಚಿಸಿದ್ದಾರೆ. ವಿರಾಟ ಪರ್ವಂ ಚಿತ್ರದಲ್ಲಿ ಸದ್ಯ ಅಭಿನಯಿಸುತ್ತಿರುವ ರಾಣಾ ಮುಂದಿನ ಪ್ರಾಜೆಕ್ಟ್ ಗಳು ಆರೋಗ್ಯದಿಂದ ಚೇತರಿಕೆ ಕಂಡ ನಂತರದಲ್ಲಿ ಶುರುವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top