ರಾಜ್ಯದ ಜನರಿಗೆ ನಮ್ಮ ತಂದೆ ಏನೂ ಮೋಸ ಮಾಡಿದ್ದಾರೆ – ನಿಖಿಲ್‌ ಕುಮಾರಸ್ವಾಮಿ ಕಣ್ಣೀರು..

15 ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ನಂತರ ನಿಖಿಲ್‌ ಕುಮಾರಸ್ವಾಮಿ ರಾಜ್ಯದ ಜನತೆ ಬಳಿ ನಮ್ಮ ತಂದೆ ರಾಜ್ಯದ ಜನರಿಗೆ ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಕೆ.ಆರ್‌ ಪೇಟೆಯಲ್ಲಿ ಜೆಡಿಎಸ್‌ ಸೋಲಿಗೆ ನಿಖಿಲ್‌ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಈ ಫಲಿತಾಂಶವನ್ನು ನಾವೂ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು ಜನ ನಮ್ಮ ಕೈ ಹಿಡಿಯಲಿಲ್ಲ ನಮ್ಮ ತಂದೆ ಮಾಡಿದ ಅನ್ಯಾಯವಾದ್ರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಫಲಿತಾಂಶ ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿ ಉಪಚುನಾವಣೆಗೆ ಬಂದೆವು ಆದ್ರೆ ರಾಜ್ಯದ ಜನರು ಕುಮಾರಣ್ಣನವರ ಕೈ ಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

ಕುಮಾರಣ್ಣನ ಆರೋಗ್ಯ ಸ್ಥಿತಿ ಹೇಳಲು ಇಷ್ಟಪಡಲ್ಲ, ಏಕೆಂದ್ರೆ ಕನಿಕರದಿಂದ ಮತ ಪಡೆಯುವ ನೀಚರು ನಾವಲ್ಲ. ಕುಮಾರಸ್ವಾಮಿಯವರು ಕಳೆದ 4-5 ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ನಮ್ಮ ತಂದೆ ಒಬ್ಬರೇ ಮನೆಯಲ್ಲಿದ್ದಾರೆ. ಮಗನಾಗಿ ನನ್ನ ತಂದೆ ಮೇಲೆ ನನಗೆ ಕಾಳಜಿ ಇದೆ. ನನ್ನ ತಂದೆ ಎರಡನೇ ಬಾರಿಗೆ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 14 ದಿನಗಳ ಕಾಲ ಚುನಾವಣಾ ಪ್ರಚಾರದ ವೇಳೆ ಅವರು ಒಂದು ಕ್ಷಣ ಮಲಗಲಿಲ್ಲ 15 ಕ್ಷೇತ್ರದ ಜನ ಅನರ್ಹರಿಗೆ ಪಾಠ ಕಲಿಸುತ್ತಾರೆ ಅಂತ ನನ್ನ ಬಳಿ ಹೇಳುತ್ತಿದ್ದರು, ಇದು ಅನರ್ಹರ ಗೆಲುವು ಇರಬಹುದು ಆದರೆ ಮತದಾರರು ಸೋತಿದ್ದಾರೆ ಎಂದು ನಿಖಿಲ್‌ ಬೇಸರ ವ್ಯಕ್ತಪಡಿಸಿದ್ರು.
ಇನ್ನು ನಮ್ಮ ತಂದೆ ನೀನು ನಟನಾಗಿದ್ದೀಯಾ ನಿನ್ನನ್ನು ರಾಜಕೀಯಕ್ಕೆ ಎಳಿಯಬೇಕಾ ಎಂದು ಹೇಳಿದ್ದರು. ಆದ್ರೆ ನಮ್ಮದು ಪ್ರಾದೇಶಿಕ ಪಕ್ಷ ಬಿಜೆಪಿಯವರ ರೀತಿ ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಚುನಾವಣೆ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇಲ್ಲ, ನಮ್ಮದು ಬಡವರ, ರೈತರ, ಕಾರ್ಯಕರ್ತರ ಪಕ್ಷ. ನಮ್ಮನ್ನು ನಂಬಿರುವ ಜೆಡಿಎಸ್‌ ಕಾರ್ಯಕರ್ತರಿಗಾಗಿ ಏನಾದ್ರೂ ಆಗಲಿ ಅವರಿಗಾಗಿ ನಾನು ನನ್ನ ರಾಜಕಾರಣ ಮುಂದುವರೆಸುತ್ತೇನೆ ಅಂತ ಹೇಳಿದ ನಿಖಿಲ್‌ ನಾನು ಮಂಡ್ಯದಲ್ಲಿ ಚುನಾವಣೆ ನಿಲ್ಲುವ ವಿಷಯ ನನಗೆ ಗೊತ್ತೇ ಇರಲಿಲ್ಲ, ಅಲ್ಲಿನ 8 ಜನ ಶಾಸಕರು ಎಂಎಲ್‌ಸಿಗಳು ಒತ್ತಾಯದಿಂದ ಸ್ಪರ್ಧಿಸಿದೆ, ಆದರೆ ಚುನಾವಣೆಯಲ್ಲಿ ಸೋತೆ ಎಂಬ ದುಃಖ ಭಾವನೆ ನನಗಿಲ್ಲ, ಚುನಾವಣೆಯಿಂದ ಅನೇಕ ಪಾಠಗಳನ್ನು ಕಲಿತ್ತಿದ್ದೇನೆ. ಗೆದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ,

ನನ್ನ ಮೇಲೆ ಐದು ಮುಕ್ಕಾಲು ಲಕ್ಷ ಮಂಡ್ಯದಲ್ಲಿ ಮತಹಾಕಿದ ಜನರ ಋಣ ಈಗ ನನ್ನ ಮೇಲಿದೆ. ಮಂಡ್ಯವನ್ನು ಬಿಟ್ಟು ನಾನು ಎಂದು ಹೋಗುವುದಿಲ್ಲ ಮಂಡ್ಯದಲ್ಲಿಯೇ ನಾನು ಇರುತ್ತೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top