‘ರಾಜೀವ’ನಾಗಿ ಬಂದ ಮಯೂರ್ ಪಟೇಲ್ !

ಸ್ಲಂ’ ಚಿತ್ರದ ನಂತರ ನಟ ಮಯೂರ್ ಪಟೇಲ್ ಯಾವ ಚಿತ್ರದಲ್ಲೂ ಅಭಿನಯಿಸಿರಲಿಲ್ಲ. ಈಗ ಅವರು ‘ರಾಜೀವ’ ಚಿತ್ರದ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಯುವ ರೈತನಾಗಿ ಕಾಣಿಸಿಕೊಂಡಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.ಆರ್.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎಂ.ರಮೇಶ್, ರಾಘವೇಂದ್ರ ರೆಡ್ಡಿ ಹಾಗೂ ಕಿರಣ್ ನಿರ್ಮಿಸುತ್ತಿರುವ ‘ರಾಜೀವ’ ಚಿತ್ರದಲ್ಲಿ ರೈತರ ಬದುಕು-ಬವಣೆಗಳನ್ನು ತೋರಿಸಲಾಗಿದ್ದು, ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.ಚಿತ್ರದ ನಾಯಕ ರಾಜೀವ, ಐ.ಎ.ಎಸ್ ಮುಗಿಸಿ, ರೈತ ವೃತ್ತಿಗೆ ಬಂದು ಯುವ ರೈತನಾಗಿರುತ್ತಾನೆ . ಅವರಿಗೆ ನಾಯಕಿಯಾಗಿ ಅಕ್ಷತಾ ನಟಿಸಿದ್ದು, ಪ್ಲೈಯಿಂಗ್ ಕಿಂಗ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ಇವರು ಈಗಾಗಲೇ ‘ಮರ್ಮಾಂಗ’ ಎನ್ನುವ ಕಿರು ಚಿತ್ರವನ್ನು ನಟಿಸಿ ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಬಹು ಮೆಚ್ಚುಗೆಯನ್ನು ಪಡೆದಿತ್ತು.


‘ಮಣಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಯೂರ್ ಗೆ ಹೇಳಿಕೊಳ್ಳುವಂತ ಗೆಲುವು ಸಿಕ್ಕಿರಲಿಲ್ಲ. ಈಗಾಗಲೇ ‘ಮಣಿ’, ‘ನಿನ್ನದೇ ನೆನಪು’, ‘ಪ್ಯಾಸೆಂಜರ್’, ‘ಉಡೀಸ್’, ‘ಸ್ಟೂಡೆಂಟ್’, ‘ಲವ್ ಸ್ಟೋರಿ’ ಸಿನಿಮಾಗಳಿಂದ ಗಮನ ಸೆಳೆದ ನಟ ಅವರಿಗೆ ‘ರಾಜೀವ’ ಗೆಲುವನ್ನು ತಂದು ಕೊಡುವನೋ ಎಂದು ಕಾದು ನೋಡಬೇಕಿದೆ.

ಈ ಚಿತ್ರವನ್ನು ಪ್ಲೈಯಿಂಗ್‌ ಕಿಂಗ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ.
ದೇಶದ ಬೆನ್ನೆಲುಬಾಗಿರುವ ರೈತನ ಕುರಿತ ಕಥೆ ಈ ಚಿತ್ರದಲ್ಲಿ ಇರಲಿದ್ದು, ಮಯೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿಲ್‌ ಎಂಬುವವರು ಸಂಗೀತ ನೀಡಿದ್ದು, ಡಾ||ವಿ.ನಾಗೇಂದ್ರ ಪ್ರಸಾದ್ ಚಿತ್ರದ ಎಲ್ಲಾ ಹಾಡುಗಳಿಗೆ
ಸಾಹಿತ್ಯ ಬರೆದಿದ್ದಾರೆ.ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top