ರಾಜಕೀಯ ಪಕ್ಷ ಸ್ಥಾಪನೆ ಮಾಡೋಲ್ಲ ಎಂದ ರಜಿನಿ ಕಾಂತ್‌..

ಸೂಪರ್‌ ಸ್ಟಾರ್‌ ರಜಿನಿ ಕಾಂತ್‌ ಹೊಸ ರಾಜಕೀಯ ಪಕ್ಷ ಕಟ್ಟಲಿದ್ದಾರೆ ಅನ್ನೋ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆಯಾಗಿದೆ. ರಜಿನಿ ಈ ಹಿಂದೆ ಡಿಸೆಂಬರ್‌ 31ರಂದು ರಾಜಕೀಯ ಪಕ್ಷದ ವಿಚಾರವಾಗಿ ಮಹತ್ವದ ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ರು. ಈ ವಿಚಾರವಾಗಿ ಅಭಿಮಾನಿಗಳು ಸಖತ್‌ ಕುತೂಹಲದಿಂದ ಕಾಯುತ್ತಿದ್ದರು, ಇದೀಗ ರಜಿನಿ ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಆಗಿ ಬಂದ ನಂತರ ಟ್ವೀಟ್‌ ಮಾಡಿದ್ದು ಆರೋಗ್ಯ ಸಮಸ್ಯೆ ಎದುರಾಗಿರುವುದರಿಂದ ತಾನು ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸುದೀರ್ಘವಾಗಿ ಟ್ವೀಟ್‌ ಮಾಡಿರೋ ರಜಿನಿ ಕಾಂತ್‌ ರಾಜಕೀಯ ಪಕ್ಷ ಸ್ಥಾಪನೆ ವಿಚಾರವಾಗಿ ಹಿಂದೆ ಸರಿಯಲು ಇತ್ತಿಚೆಗೆ ತಮ್ಮ ಆರೋಗ್ಯ ಕೈಗೊಟ್ಟಿದ್ದು ಕಾರಣ ಅನ್ನೋದನ್ನ ಹೇಳಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ ೨೫ರಂದು ರಜಿನಿ ಕಾಂತ್‌ ರಕ್ತದೊತ್ತಡದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದರು . ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಆಗಿದ್ದ ಅವರಿಗೆ ಒಂದು ವಾರಗಳ ರೆಸ್ಟ್‌ಗೆ ಸೂಚನೆ ನೀಡಲಾಗಿತ್ತು, ಇದೀಗ ತಾವೂ ರಾಜಕೀಯ ಪಕ್ಷ ಸ್ಥಾಪನೆ ವಿಚಾರದಿಂದ ಹಿಂದೆ ಸರಿದಿರೋ ಬಗ್ಗೆ ಟ್ವೀಟ್‌ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top