ರಹಾನೆ ಯಡವಟ್ಟಿನಿಂದ ಮಿಸ್ ಆಯ್ತು ವಿರಾಟ್ ಕೊಹ್ಲಿ ಆ ದಾಖಲೆ..

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಅಡಿಲೇಡ್‍ನಲ್ಲಿ ಆರಂಭವಾಗಿದ್ದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 233ರನ್‍ಗಳ ಗೌರವಯುವ ಮೊತ್ತವನ್ನು ಪೇರಿಸಿದೆ,ಪ್ರಾರಂಭದಲ್ಲಿ ಉತ್ತಮ ಆರಂಭ ದೊರೆಯಲು ತಿಣುಕಾಡಿದ ಟೀಂ ಇಂಡಿಯಾ ಕೊಹ್ಲಿ, ಪೂಜಾರ ಮತ್ತು ರಹಾನೆ ಅವರ ತಾಳ್ಮೆಯ ಆಟದಿಂದ ಉತ್ತಮ ಮೊತ್ತ ಕಲೆಹಾಕಿದೆ. ಆದ್ರೆ ಇದೀಗ ನಾವ್ ಹೇಳ್ತಾ ಇರೋದು ಟಾಸ್ ವಿಚಾರವಾಗಿ, ಹೌದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದುವರೆಗೂ ಟಾಸ್ ಗೆದ್ದ ಪಂದ್ಯಗಳ್ಲಿ ಸೋಲನ್ನೇ ಕಂಡಿಲ್ಲ, ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ಇದುವರೆಗೂ ಒಟ್ಟು 26 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ ಅದರಲ್ಲಿ ಒಟ್ಟು 21 ಪಂದ್ಯಗಳನ್ನು ಗೆದ್ದು ಬೀಗಿದ್ರೆ 4 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಹೀಗಾಗಿ ಟಾಸ್ ಗೆದ್ದ ಈವರೆಗಿನ ಪಂದ್ಯಗಳ ಫಲಿತಾಂಶ ನೋಡಿದ್ರೆ ಮೊದಲ ಟೆಸ್ಟ್ ಪಂದ್ಯವೂ ತಂಡಕ್ಕೆ ಪೂರಕವಾಗಿರಲಿದೆ ಅಂತ ಹೇಳಲಾಗುತ್ತಿದೆ, ಇನ್ನು ವಿದೇಶದಲ್ಲಿಯೂ ವಿರಾಟ್ 10 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದಿದ್ರೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಇನ್ನು ಇದು ಆಸ್ಟ್ರೇಲಿಯಾಗೂ ಹೊರತಾಗಿಲ್ಲ, ಆಸ್ಟ್ರೇಲಿಯಾ ಇದುವರೆಗೂ 7 ಪಿಂಕ್ ಬಾಲ್ ಪಂದ್ಯಗಳನ್ನು ಆಡಿದ್ದು 7ರಲ್ಲಿ ಏಳು ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು ಬೀಗಿದೆ.

ಇನ್ನು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸೋ ಮೂಲಕ ಎರಡು ದಾಖಲೆ ಬರೆಯುವ ಕನಸು ಭಗ್ನವಾಗಿದೆ. ಹೌದು ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ 74ರನ್ ಗಳಿಸಿರುವ ವೇಳೆ, ರಹಾನೆ ಮಾಡಿದ ಯಡವಟ್ಟಿನಿಂದಾಗಿ ಶತಕದಿಂದ ವಿರಾಟ್ ಕೊಹ್ಲಿ ವಂಚಿತರಾದ್ರು, ಇನ್ನು ವಿರಾಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಮಾಡಬೇಕೆಂದಿದ್ದ ಎರಡು ದಾಖಲೆಗಳು ಹಾಗೆ ಉಳಿದುಕೊಂಡವು, ಹೌದು ವಿರಾಟ್ ಪ್ರತಿ ವರ್ಷವೂ ತಮ್ಮ ಖಾತೆಯಲ್ಲಿ ಒಂದು ಶತಕವನ್ನು ಸೇರಿಸಿಕೊಳ್ಳುತ್ತಿದ್ದರು, ಆದ್ರೆ ಈ ವರ್ಷ ಒಂದು ಶತಕವಿಲ್ಲದೇ ವರ್ಷವನ್ನು ಮುಗಿಸುವ ಮೂಲಕ ಸತತವಾಗಿ ಮಾಡಿಕೊಂಡು ಬಂದಿದ್ದ ದಾಖಲೆ ಈ ವರ್ಷ ಅಂತ್ಯವಗುತ್ತಿದ್ರೆ, ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆ ಒಂದು ದಾಖಲೆಯನ್ನು ಮುರಿಯುವಲ್ಲಿ ಸದ್ಯ ವಿಫಲರಾಗಿದ್ದಾರೆ. ಹೌದು ಸಚಿನ್ ಆಸ್ಟ್ರೇಲಿಯಾ ನೆಲದಲ್ಲಿ ಇದುವರೆಗೂ ಒಟ್ಟು 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 6 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ, ಆದ್ರೆ ವಿರಾಟ್ ಸದ್ಯ 12 ಟೆಸ್ಟ್ ಪಂದ್ಯಗಳನ್ನು ಆಡಿ ಅದರಲ್ಲಿ 6 ಶತಕ ಸಿಡಿಸೋ ಮೂಲಕ ಸಚಿನ್ ದಾಖಲೆಯನ್ನು ಸಮವಾಗಿಸಿಕೊಂಡಿದ್ದಾರೆ, ಇಂದಿನ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಸಚಿನ್ ಅವರ ದಾಖಲೆ ಸರಿಗಟ್ಟುವ ತಯಾರಿಯಲ್ಲಿ ಇದ್ರು ಆದ್ರೆ ಬೇಡದ ರನ್ ಕದಿಯಲು ಹೋಗಿ 74ರನ್‍ಗೆ ಔಟ್ ಆಗುವ ಮೂಲಕ ಎರಡು ದಾಖಲೆಗಳನ್ನು ನಿರ್ಮಿಸುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್‍ಗಳ ಪ್ರದರ್ಶನ ಹೇಗಿತ್ತು, ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top