ರಹಾನೆ ಒಬ್ಬ ಉತ್ತಮ ನಾಯಕ ಎಂದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ಆಟಗಾರ, ಮಿಸ್ಟರ್ ಐಪಿಎಲ್ ಮತ್ತೆ ಸುದ್ದಿಯಲ್ಲಿ ಇದ್ದಾರೆ, ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಸುರೇಶ್ ರೈನಾ, ಇದೀಗ ದೇಶೀ ಕ್ರಿಕೆಟ್‍ಗೆ ಮರಳೋದಾಗಿ ಕೂಡ ಹೇಳಿದ್ರು, ಇನ್ನು ಮುಂದಿನ ಐಪಿಎಲ್‍ನಲ್ಲಿ ಲಭ್ಯವಿರೋದಾಗಿಯು ಹೇಳಿಕೊಂಡಿದ್ರು, ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಒಪ್ಪಂದವನ್ನು ಮುರಿದುಕೊಂಡಿರೋ ಸುರೇಶ್ ರೈನಾ ಐಪಿಎಲ್ ಬಿಡ್ಡಿಂಗ್‍ಗಾಗಿ ಎದುರು ನೋಡುತ್ತಿದ್ದಾರೆ. ಇದೀಗ ಸುರೇಶ್ ರೈನಾಗೆ ಇದೆಲ್ಲದರ ನಡುವೆ ವಿಶಿಷ್ಟ ಗೌರವೊಂದು ಲಭ್ಯವಾಗುತ್ತಿದೆ. ಹೌದು ಉತ್ತರ ಪ್ರದೇಶ ಕ್ರಿಕೆಟ್ ಬೋರ್ಡ್ ಇದೀಗ ಸುರೇಶ್ ರೈನಾ ಅವರ ಕ್ರಿಕೆಟ್ ಸಾಧನೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಉತ್ತರ ಪ್ರದೇಶದ ಗ್ರೀನ್ ಪಾರ್ಕ್ ಮೈದಾನದಲ್ಲಿ ಪೆವಿಲಿಯನ್‍ಗೆ ಸುರೇಶ್ ರೈನಾ ಹೆಸರಿಡಲು ಮುಂದಾಗಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನ ಪೆವಿಲಿಯನ್‍ಗೆ ಸುರೇಶ್ ರೈನಾ ಹೆಸರಿಡಲು ಈಗಾಗಲೇ ಉತ್ತರ ಪ್ರದೇಶ ಕ್ರಿಕೆಟ್ ಬೋರ್ಡ್ ಸರ್ಕಾರಕ್ಕೆ ಶಿಫಾರಸ್ಸು ಕೂಡ ಮಾಡಿದೆ , ಆ ಮೂಲಕ ಸುರೇಶ್ ರೈನಾ ಅವರಿಗೆ ಗೌರವ ಸಲ್ಲಿಸಲು ಯುಪಿ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು,ಈಗಾಗಲೇ ಟೀಂ ಇಂಡಿಯಾದ 11ರ ಬಳಗವನ್ನು ಪ್ರಕಟಿಸಿಯಾಗಿದೆ, ಇದೀಗ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಲಭ್ಯತೆ ನಡುವೆ ಅಜಿಂಕ್ಯ ರಹಾನೆ ಉತ್ತಮವಾಗಿ ಟೀಂಇಂಡಿಯಾವನ್ನು ಮುನ್ನಡೆಸಲಿದ್ದಾರೆ ಅಂತ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ರಹಾನೆ ಹಾಗೂ ನಾನು ಕೆಲವು ವರ್ಷಗಳಿಂದ ಒಟ್ಟಿಗೆ ಆಡಿದ್ದೇವೆ, ಪರಸ್ಪರ ಹೊಂದಾಣಿಕೆಯನ್ನು ಕಂಡಿದ್ದೇವೆ, ಎರಡು ಅಭ್ಯಾಸ ಪಂದ್ಯದಲ್ಲಿ ರಹಾನೆ ಉತ್ತಮ ಪ್ರದರ್ಶನ ನೀಡಿದ್ದಾರೆ, ಅವರಿಗೆ ತಂಡದ ಸಾಮಥ್ರ್ಯದ ಬಗ್ಗೆ ಅರಿವಿದ್ದು, ತಂಡವನ್ನು ಯಾವ ರೀತಿ ಮುನ್ನೆಡೆಸಿದ್ರೆ ಉತ್ತಮ ಎಂಬುದು ಅವರು ಅರಿತಿದ್ದಾರೆ. ನಾವಿಬ್ಬರೂ ಆಟದಲ್ಲಿ ಒಟ್ಟಿಗೆ ಇದ್ದು, ನನ್ನ ಅನುಪಸ್ಥಿತಿಯಲ್ಲಿ ರಹಾನೆ ಅಧ್ಬುತ ಪ್ರದರ್ಶನ ನೀಡಲಿದ್ದಾರೆ. ನಾಯಕನಾಗಿ ಮತ್ತು ಆಟರಗಾರನಾಗಿ ನನ್ನ ಸಾಮಥ್ರ್ಯ ಮೀರಿ ಉತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇನೆ, ಆದಾದ ಬಳಿಕ ರಹಾನೆ ಉತ್ತಮ ಪ್ರದರ್ಶನವನ್ನು ಮುಂದುವರೆಸಲಿದ್ದಾರೆ ಅನ್ನೋ ಸಂಪೂರ್ಣ ನಂಬಿಕೆಯಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿ ಮತ್ತೆ ದೇಶೀ ಕ್ರಿಕೆಟ್‍ಗೆ ಅನೇಕ ಕ್ರಿಕೆಟರ್‍ಗಳು ಮರಳುತ್ತಿದ್ದಾರೆ, ಇದೀಗ ಅವರ ಸಾಲಿಗೆ ಅಂಬಟಿ ರಾಯುಡು ಕೂಡ ಸೇರಿಕೊಂಡಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ರಾಯುಡು ಇದೀಗ ಮತ್ತೆ ಕ್ರಿಕೆಟ್‍ಗೆ ಮರಳುತ್ತಿದ್ದಾರೆ. ಜನವರಿ 10 ರಿಮದ ನಡೆಯಲಿರೋ ಸಯ್ಯದ್ ಮುಷ್ತಕ್ ಅಲಿ ಟ್ರೋಫಿಯಲ್ಲಿ ಪಾಲ್ಗೊಳಲು ರೆಡಿಯಾಗುತ್ತಿದ್ದಾರೆ, ಆದ್ರೆ ಈ ಬಾರಿ ಅವರು ಹೈದರಬಾದ್ ತಂಡವನ್ನು ತೊರೆದು ಆಂಧ್ರ ತಂಡದ ಪರ ಆಡಲಿದ್ದಾರೆ. ಆ ಮೂಲಕ ಮತ್ತ ದೇಶೀ ಕ್ರಿಕೆಟ್‍ಗೆ ಮರಳುತ್ತಿದ್ದಾರೆ.

ನಿಮ್ಮ ಪ್ರಕಾರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ರಹಾನೆ ಉತ್ತಮವಾಗಿ ನಾಯಕತ್ವ ನಿಭಾಯಿಸುತ್ತಾರಾ ನಿಮ್ಮ ಅನಿಸಿಕೆ ಏನೂ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top