ರಸ್ತೆ ಬದಿ BMW ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಹೋದ ಮುಂದೇನಾಯ್ತು ಗೊತ್ತಾ.?

ರೋಡ್ ಸೈಡ್ ನಲ್ಲಿ ಸೂ..ಸೂ ಮಾಡಲು ಹೋಗಿ 40ಲಕ್ಷ ಬೆಲೆಯ ಕಾರ್ ಕಳಕೊಂಡ ಘಟನೆ ನೊಯ್ಡಾದಲ್ಲಿ ನಡೆದಿದೆ ಪಾರ್ಟಿಗೆಂದು ಹೋಗಿದ್ದ ವ್ಯಕ್ತಿಯೊಬ್ಬ ಪಾರ್ಟಿ ಮುಗಿಸಿಕೊಂಡು ಬರುವ ವೇಳೆ ಆ ವ್ಯಕ್ತಿಗೆ ಮೂತ್ರ ವಿಸರ್ಜನೆಗೆ ಅವಸರವಾಗಿದ್ದು , ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿದ್ದ ರಿಶಬ್ ಎಂಬ‌ ವ್ಯಕ್ತಿ ಕಾರನ್ನು ರಸ್ತೆ ಬದಿಯಲ್ಲಿಯೇ ಬಿಟ್ಟು ಮೂತ್ರ ವಿಸರ್ಜನೆ ಮಾಡಲು ಹೋಗಿದ್ದಾನೆ.ಆದ್ರೆ ಮರಳಿ ಬಂದಾಗ ಆತನಿಗೆ ಶಾಕ್ ಕಾದಿತ್ತು,ತಾನು ಚಾಲನೆ ಮಾಡಿಕೊಂಡು ಬಂದಿದ್ದ BMW ಕಾರನ್ನು ಕುಡಿದ ಅಮಲಿನಲಿದ್ದ ರಿಶಬ್ ಕಾರಿನಲ್ಲಿಯೇ ಕೀ ಬಿಟ್ಟು ,ರಸ್ತೆ ಬದಿ ಕಾರನ್ನು ನಿಲ್ಲಿಸಿ ಸ್ವಲ್ಪ ದೂರ ಮೂತ್ರವಿಜರ್ಜನೆಗೆ ಹೋಗಿದ್ದಾನೆ,ಮರಳಿ ಬಂದು ನೋಡುವ ವೇಳೆ ಆತ ನಿಲ್ಲಿಸಿದ್ದ‌ ಕಾರನ್ನು ಅಪರಿಚಿತ ಗ್ಯಾಂಗ್ ಒಂದು ತೆಗೆದುಕೊಂಡು ಹೋಗಿತ್ತು,ಇನ್ನು ಕುಡಿದ‌ ಅಮಲಿನಲ್ಲಿದ್ದ ರಿಶಬ್ ಕುಡಿದ ಮತ್ತು ಇಳಿದರು ಶಾಕ್ ನಿಂದ ಹೊರ ಬಂದಿರಲಿಲ್ಲ,ಇನ್ನು ಈ ವಿಚಾರವಾಗಿ ಪೊಲೀಸರಿಗೆ ತಕ್ಷಣವೇ ದೂರು ನೀಡಿದ್ದು, ಕಾರು ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ..ಇನ್ನು ಇಷ್ಟೆಲ್ಲ ಘಟನೆ ನಡೆದಾಗ‌ ತಿಳಿದು ಬಂದ ವಿಷಯವೇನೆಂದರೆ, ರಿಶಬ್ BMW ಕಾರನ್ನು ಪಾರ್ಟಿಗೆ ಹೋಗಲೆಂದು ತನ್ನ ಸಂಬಂಧಿಕನ ಬಳಿ ಕಾರನ್ನು ತೆಗೆದುಕೊಂಡು ಬಂದದ್ದು , ಆ ಕಾರಿನ 40ಲಕ್ಷ ಸಾಲ ಇನ್ನಿಯೂ ತೀರಿರಲಿಲ್ಲವಂತೆ, ಅಷ್ಟೆ ಅಲ್ಲದೇ ಕಾರು ಕಳೆದುಕಲಕೊಂಡ ರಿಶಭ್ ಕುಡಿದು ಗಾಡಿ ಓಡಿಸುತ್ತಿದ್ದಕ್ಕಾಗಿ‌ ಆತನ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಕೂಡ ಹಾಕಲಾಗಿದೆಯಂತೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top