
ಅಕ್ಟೋಬರ್ ೨ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತರಕೈ ಇಂದು ಕೊನೆಯುಸಿರೆಳೆದಿದ್ದಾರೆ. ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಪಟ್ಟು ಬಿದ್ದಿತ್ತು, ಆಸ್ಪತ್ರೆಗೆ ದಾಖಲಿಸಿದ ನಂತರ ಕೋಮಾಗೆ ಜಾರಿದ್ದ ನಜೀಬ್ ಇಂದು ಇಹಲೋಕ ತೆಜಿಸಿದ್ದಾರೆ. ನಜೀಬ್ ತರಕೈ ಕೋಮಾಗೆ ಜಾರಿದ ವೇಳೆ ಅವರ ಅಭಿಮಾನಿಗಳು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಒತ್ತಾಯ ಮಾಡಿದ್ರು, ಆದ್ರೆ ನಜೀಬ್ ಕೋಮಾಗೆ ಹೋದವರು ಮತ್ತೆ ವಾಪಾಸ್ ಬರಲೇ ಇಲ್ಲ, ನಜೀಬ್ ತರಕೈ ನಿಧನದಿಂದ ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ಗೆ ತುಂಬಲಾರದ ನಷ್ಟವಾಗಿದ್ದು, ಅಭಿಮಾನಿಗಳಿಗೆ ನೋವುಟಾಂಗಿದೆ.