ರಚಿತಾ ರಾಮ್‌ ಹೊಸ ಸಿನಿಮಾಗೆ ʻಕಸ್ತೂರಿ ನಿವಾಸ ʼಟೈಟಲ್‌

ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಹೊಸ ಸಿನಿಮಾ ಅನೌನ್ಸ್‌ ಆಗಿದ್ದು, ಚಿತ್ರದ ಟೈಟಲ್‌ ಅಣ್ಣಾವ್ರ ಗೊಲ್ಡನ್‌ ಮೂವಿ ʻಕಸ್ತೂರಿ ನಿವಾಸʼ ಟೈಟಲ್‌ ಇಡಲಾಗಿದೆ. ಕಸ್ತೂರಿ ನಿವಾಸ ಕನ್ನಡ ಸಿನಿರಂಗದ ಮಹೋನ್ನತ ಸಿನಿಮಾ, ಈ ಎವರ್‌ಗ್ರೀನ್‌ ಸಿನಿಮಾದ ಟೈಟಲ್‌ ಈಗ ರಚಿತಾ ರಾಮ್‌ ಸಿನಿಮಾಗೆ ಇಡಲಾಗಿದ್ದು, ಇನ್ನೊಂದು ವಿಶೇಷವಂದರೆ ಈ ಸಿನಿಮಾ ಡೈರೆಕ್ಷನ್‌ ಮಾಡ್ತಾ ಇರೋದು ಡಿಫರೆಂಟ್‌ ಡೈರೆಕ್ಟರ್‌ ದಿನೇಶ್‌ ಬಾಬು, ದಿನೇಶ್‌ ಬಾಬು ಅವರಿಗೆ ʻಕಸ್ತೂರಿ ನಿವಾಸʼ ೫೦ನೇ ನಿರ್ದೇಶನದ ಸಿನಿಮಾವಾಗಿದ್ದು, ಈ ಕಾರಣಕ್ಕಾಗಿ ಎರಡು ರೀತಿಯಲ್ಲಿ ಈ ಸಿನಿಮಾ ಮಹತ್ವ ಪಡೆದುಕೊಂಡಿದೆ.

ಒಂದು ಕಡೆ ಅಣ್ಣಾವ್ರ ʻಕಸ್ತೂರಿ ನಿವಾಸʼ ಟೈಟಲ್‌ ಆದ್ರೆ ಇನ್ನೊಂದು ಕಡೆ ದಿನೇಶ್‌ ಬಾಬು ಅವರ ನಿರ್ದೇಶನದ ೫೦ನೇ ಸಿನಿಮಾ ಆಗಿದ್ದು ಸ್ಯಾಂಡಲ್‌ವುಡ್‌ನಲ್ಲಿ ಮಹತ್ವ ಪಡೆದುಕೊಂಡಿದೆ. ಇನ್ನು ರಚಿತಾ ರಾಮ್‌ ಈ ಚಿತ್ರಕ್ಕೆ ಫೈನಲ್‌ ಆಗಿದ್ದು, ಉಳಿದ ಕಲಾವಿದರು ಫೈನಲ್‌ ಆಗಬೇಕಾಗಿದೆ. ಇನ್ನು ಈ ಚಿತ್ರಕ್ಕೆ ರವೀಶ್‌ ಹಾಗೂ ರೂಬನ್‌ ರಾಜ್‌ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top