ಯೋಗಿ ಜೀವನದಲ್ಲಿ ವಿಚಲಿತನಾಗಲು ನಾನೇ ಕಾರಣ – ಲೂಸ್‌ ಮಾದ ಯೋಗಿ ತಂದೆ.

ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಕೇಸ್‌ನಲ್ಲಿ ದಿನದಿಂದ ದಿನಕ್ಕೆ ಬಹಳಷ್ಟು ಜನರ ಹೆಸರು ಕೇಳಿ ಬರ್ತಾ ಇದ್ದು, ನಟ ಲೂಸ್‌ ಮಾಡ ಯೋಗಿಗೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಸೋಟಿಸ್‌ ನೀಡುದ್ದು, ಶನಿವಾರ ನೋಟಿಸ್‌ ಸಿಕ್ಕಿದೆ ಎಂದು ಲೂಸ್‌ ಮಾಡ ಯೋಗಿ ತಂದ ಸಿದ್ದರಾಜು ತಿಳಿಸಿದ್ದಾರೆ. ಈ ವಿಚಾರವಾಗಿ ಯೋಗಿ ತಂದೆ ಸಿದ್ದರಾಜು ಶನಿವಾರ ನೋಟಿಸ್‌ ಸಿಕ್ಕಿದ್ದು , ನೋಟಿಸ್‌ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ.

ಯೋಗಿ ಜೀವನದಲ್ಲಿ ವಿಚಲಿತನಾಗಲು ನಾನೇ ಕಾರಣ ಅನಿಸುತ್ತೆ.ಬಂದ ಸಿನಿಮಾಗಳನೆಲ್ಲಾ ಒಪ್ಪಿಕೊಳ್ಳಲು ಬಲವಂತ ಮಾಡುತಿದ್ದೆ.ಸಾಲು ಸಾಲು ಸಿನಿಮಾ ಸೋಲಿನಿಂದ ಯೋಗಿಯನ್ನು ನೋವಿಗೆ ದೂಡಿತ್ತು ಅಷ್ಟೇ ಎಂದು ತಂದೆ ಸಿದ್ದರಾಜು ಹೇಳಿದ್ದಾರೆ. ಪೋಲಿಸರು ಯಾವ ಆಧಾರದ ಮೇಲೆ ನೋಟಿಸ್‌ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ.

ಈಗಾಗಲೇ ವಿಚಾರಣಗೆ ಹೋಗಿ ಬಂದಿದ್ದಾನೆ ಮತ್ತೆ ವಿಚಾರಣೆಗೆ ಕರೆದಿಲ್ಲ, ಬೇರೆಯಾರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ನನ್‌ ಮಗನಿಗೆ ಯಾವುದೇ ಡ್ರಗ್ಸ್‌ ಅಭ್ಯಾಸವಿಲ್ಲ ಎಂದು ತಾಯಿ ಅಂಬುಜಾ ಹೇಳಿದ್ದಾರೆ. ಯೋಗಿ ಯಾವಾಗಲೂ ಸೈಲೆಂಟ್‌ ಆಗಿ ಇರುತ್ತಾನೆ. ಅವನ ಬಗ್ಗೆ ನನಗೆ ಚೆನ್ನಾಗಿ ಗೊತ್ತು, ಈ ವಿಚಾರವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top