ಯುವಿ ಜೊತೆ ಸ್ಪರ್ಧೆ ಮಾಡಲ್ಲ ಎಂದ ದೇವದತ್ ಪಡಿಕಲ್..

ಐಪಿಎಲ್ 2020ಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರೋದು ಅಂದ್ರೆ ಅದು ದೇವದತ್ ಪಡಿಕಲ್,ಐಪಿಎಲ್‍ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸುತ್ತಿರೋ ಪಡಿಕಲ್ ಐಪಿಎಲ್‍ನಲ್ಲಿ ಈಗಾಗಲೇ ಎರಡು ದಾಖಲೆಗಳನ್ನು ಬರೆದಿದ್ದಾರೆ. ಇನ್ನು ಪಡಿಕಲ್ ಬ್ಯಾಟಿಂಗ್ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ ಕ್ರಿಕೆಟ್ ದಿಗ್ಗಜರು, ಇನ್ನು ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಜೊತೆಯಾಟ ನೋಡಿ ಟ್ವೀಟ್ ಮಾಡಿದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದುಗೂ ಇರುತ್ತದೆ.

ಕಳೆದ ಎಂಟು ವರ್ಷದಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬೋದಕ್ಕೆ ಆಗಲ್ಲ ಎಂದು ಹೇಳಿ, ಪಡಿಕಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕು ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಎಂಬುದು ನೋಡಬೇಕು ಎಂದು ಟ್ವೀಟ್ ಮಾಡಿ ತಮ್ಮ ಅನಿಸಿಕೆಯನ್ನು ಯುವರಾಜ್ ಸಿಂಗ್ ತಿಳಿಸಿದ್ರು.

ಇದೀಗ ಯುವರಾಜ್ ಸಿಂಗ್ ಅವರ ಟ್ವೀಟ್‍ಗೆ ರೀ ಟ್ವೀಟ್ ಮಾಡಿರೋ ದೇವದತ್ ಪಡಿಕಲ್, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಪ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ. ಬನ್ನಿ ಎಂದು ರೀ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸೀನಿಯರ್ ಪ್ಲೇಯರ್ ಆಹ್ವಾನವನ್ನು ನಯವಾಗಿ ಸ್ವೀಕರಿಸುವ ಮೂಲಕ ತಾನೊಬ್ಬ ಪ್ರಬುದ್ಧ ಆಟಗಾರ ಅನ್ನೋದನ್ನ ಸಾಭೀತು ಪಡಿಸಿದ್ದಾರೆ. ಹಾಗಾದ್ರೆ ಯುವಿ ಜೊತೆ ದೇವದತ್ ಪಡಿಕಲ್ ಸ್ಪರ್ಧೆಗೆ ಇಳಿಯಬೇಕಾ..ಪಡಿಕಲ್ ನಿರ್ಧಾರ ಸರಿ ಇದ್ಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top