ಯುವರಾಜ್ ಸಿಂಗ್ ಆಸೆಗೆ ತಣ್ಣೀರು ಎರಚಿದ ಬಿಸಿಸಿಐ

ಜನವರಿಯಲ್ಲಿ ನಡೆಯಲಿರೋ ದೇಶೀ ಕ್ರಿಕೆಟ್ ಸಯ್ಯದ್ ಮುಷ್ತಕ್ ಅಲಿ ಟ್ರೋಫಿಗೆ ಮರಳುವ ಮೂಲಕ ಕ್ರಿಕೆಟ್ ಜಗತ್ತಿಗೆ ಮರಳುವ ಆಸೆಯಲ್ಲಿದ್ದ ಯುವರಾಜ್ ಸಿಂಗ್‍ಗೆ ಬಿಸಿಸಿಐ ತಣ್ಣೀರೆರಚಿದೆ, ಹೌದು ಕಳೆದ ವರ್ಷ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಿದ್ದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮತ್ತೆ ದೇಶೀ ಕ್ರಿಕೆಟ್‍ಗೆ ಮರಳುವ ಆಸೆಯನ್ನು ವ್ಯಕ್ತಪಡಿಸಿದ್ರು, ಇನ್ನು ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ ವೇಳೆ ಪಂಜಾಬ್ ಕ್ರಿಕೆಟ್ ಬೋರ್ಡ್ ಕೂಡ ದೇಸಿ ಕ್ರಿಕೆಟ್‍ಗೆ ಕರೆತರುವ ಪ್ರಯತ್ವನ್ನು ನಡೆಸಿತ್ತು, ಇನ್ನು ಯುವರಾಜ್ ಸಿಂಗ್ ಕೂಡ ಪಂಜಾಬ್ ಕೋರಿಕೆಗೆ ಯುವಿ ಕೂಡ ಒಪ್ಪಿಗೆ ಸೂಚಿಸಿ ಬಿಸಿಸಿಐಗೆ ನಿವೃತ್ತಿ ವಾಪಾಸ್ ಪಡೆದು, ದೇಸಿ ಕ್ರಿಕೆಟ್‍ನಲ್ಲಿ ಆಡಲು ಅವಕಾಶ ನೀಡಲು ಪತ್ರವನ್ನು ಬರೆದಿದ್ರು,ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಯುವಿ ಅಭಿಮಾನಿಗಳು ಸಹ ಮತ್ತೆ ಸಿಕ್ಸರ್ ಕಿಂಗ್ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ರು, ಆದ್ರೆ ಇದೀಗ ಬಿಸಿಸಿಐ ಯುವರಾಜ್ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿದೆ. ಹೌದು ಬಿಸಿಸಿಐನ ಕಟ್ಟುನಿಟ್ಟಿನ ನಿಯಮದ ಪ್ರಕಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಯಾವುದೇ ಭಾರತೀಯ ಆಟಗಾರ ವಿದೇಶಿ ಲೀಗ್‍ನಲ್ಲಿ ಪಾಲ್ಗೊಳುವಂತ್ತಿಲ್ಲ, ಆದ್ರೆ ಯುವರಾಜ್ ಸಿಂಗ್ ತಮ್ಮ ನಿವೃತ್ತಿಯ ಬಳಿಕ ಹಲವು ವಿದೇಶಿ ಲೀಗ್‍ನಲ್ಲಿ ಕಾಣಿಸಿಕೊಂಡಿದ್ದರಿಂದಾಗಿ ಯುವರಾಜ್ ಸಿಂಗ್‍ಗೆ ದೇಸಿ ಕ್ರಿಕೆಟ್‍ಗೆ ಮರಳಲು ಅವಕಾಶವನ್ನು ನೀಡಲು ನಿರಾಕರಿಸಿದೆ.

ಒಟ್ಟಿನಲ್ಲಿ ಯುವರಾಜ್ ಸಿಂಗ್ ಅವರ ಆಟವನ್ನು ಮೈದಾನದಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದ ಯುವಿ ಅಭಿಮಾನಿಗಳಿಗೆ ಇದೀಗ ಬಿಸಿಸಿಐ ಶಾಕ್ ನೀಡಿದ್ದು, ಅಭಿನಾನಿಗಳಿಗೆ ನಿರಾಸೆ ಉಂಟಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸೋ ಮೂಲಕ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ನಡುವೆ ಇದೀಗ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಹೊಸದೊಂದು ದಾಖಲೆಯನ್ನು ಕೂಡ ಬರೆದಿದ್ದಾರೆ. ಎರಡನೇ ಟೆಸ್ಟ್‍ನಲ್ಲಿ 11 ಬಳಗದಲ್ಲಿ ಆಡುವ ಅವಕಾಶ ಪಡೆಯುವ ಮೂಲಕ ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ್ರು, ಇನ್ನು ಪಾದಾರ್ಪಣೆ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದ್ರು ಆಸ್ಟ್ರೇಲಿಯಾ ವಿರುದ್ಧ ಒಟ್ಟು 36.3 ಓವರ್ ಮಾಡಿ 77ರನ್‍ಗಳನ್ನು ನೀಡಿ 5 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ. 7 ವರ್ಷಗಳ ನಂತರ ಭಾರತದ ಪರ ಪಾದಾರ್ಪಣೆಯ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2013ರಲ್ಲಿ ಮೊಹಮ್ಮದ್ ಶಮ್ಮಿ ವೆಸ್ಟ್ ಇಂಡೀಸ್ ಭಾರತ ಪ್ರವಾಸದ ವೇಳೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆದಿದ್ರು ಇನ್ನು 2011ರಲ್ಲಿ ಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ಟೆಸ್ಟ್‍ಗೆ ಪಾದಾರ್ಪಣೆ ಮಾಡುವ ಮೂಲಕ 5 ವಿಕೆಟ್ ಪಡೆದು ದಾಖಲೆ ಬರೆದಿದ್ರು, ಇದೀಗ ಮೊಹಮ್ಮದ್ ಸಿರಾಜ್ ಈ ದಾಖಲೆಯನ್ನು 7 ವರ್ಷಗಳ ನಂತರ ಬರೆದಿದ್ದಾರೆ.

ನಿಮ್ಮ ಪ್ರಕಾರ ಬಿಸಿಸಿಐ ತಮ್ಮ ಕಟ್ಟುನಿಟ್ಟಿನ ನಿಯಮವನ್ನು ಸಡಿಲಗೊಳಿಸಿ ಯುವರಾಜ್ ಸಿಂಗ್‍ಗೆ ಆಡಲು ಅವಕಾಶ ನೀಡಬೇಕಿತ್ತಾ, ಇಲ್ಲ ನಿಯಮದಂತೆ ಮನವಿ ತಿರಸ್ಕಾರ ಮಾಡಿದ್ದು ಸರಿ ಅಂತ ಅನಿಸುತ್ತೆಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top