ಯುವರತ್ನ ಇಂಟ್ರೋಡಕ್ಷನ್‌ ಹಾಡಿಗೆ 200 ಜನ ಡ್ಯಾನ್ಸರ್‌ -, ನಾಲ್ಕು ಲೊಕೇಶನ್‌

ʻಯುವರತ್ನʼ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾ, ಎಲ್ಲಾ ಸರಿಯಾಗಿದ್ದಿದ್ದರೆ ಯುವರತ್ನ ಸಿನಿಮಾ ರಿಲೀಸ್‌ ಆಗಿರಬೇಕಾಗಿತ್ತು, ಆದ್ರೆ ಕೊರೋನಾ ಎಫೆಕ್ಟ್‌ನಿಂದಾಗಿ ಮಾರ್ಚ್‌ನಲ್ಲಿ ಶೂಟ್‌ ಆಗ ಬೇಕಾಗಿದ್ದ ಯುವರತ್ನ ಸಿನಿಮಾದ ಇಂಟ್ರೋಡಕ್ಷನ್‌ ಹಾಡಿನ ಚಿತ್ರೀಕರಣ ನಿಂತು ಹೋಯ್ತು.

ಫ್ಯಾರಿಸ್‌ನಲ್ಲಿ ಚಿತ್ರ ಹಾಡನ್ನು ಶೂಟ್‌ಮಾಡಲು ಪ್ಲಾನ್‌ ಕೂಡ ಮಾಡಿಕೊಂಡಿದ್ರು, ಆದ್ರೆ ಲಾಂಗ್‌ ಬ್ರೇಕ್‌ನಂತರ ಶೂಟಿಂಗ್‌ ಶುರುಮಾಡಿರೋ ಯುವರತ್ನ ಚಿತ್ರತಂಡ ಕೊರೋನಾ ಭೀತಿಯಲ್ಲೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರದ ಇಂಟ್ರೊಡಕ್ಷನ್‌ ಸಾಂಗ್‌ ಅನ್ನು ಶೂಟ್‌ ಮಾಡಿದೆ. 200 ಜನ ಡ್ಯಾನ್ಸರ್‌ ಮತ್ತು ಕಂಠೀರವ, ಮಿನರ್ವ ಮಿಲ್‌,ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಅದ್ಧೂರಿ ಸೆಟ್‌ ಹಾಕಿ ಚಿತ್ರದ ಹಾಡಿನ ಶೂಟಿಂಗ್‌ ಮುಗಿಸಿದ್ದಾರೆ.

ಈಗಾಗಲೇ ಮೂರು ದಿನದ ಶೂಟಿಂಗ್‌ ಮುಗಿಸಿದ್ದು, ಗೋವಾದಲ್ಲಿ ಇನ್ನು ಎರಡು ದಿನದ ಶೂಟಿಂಗ್‌ ಬಾಕಿ ಇದೆ. ಸದ್ಯ ಶೂಟಿಂಗ್‌ಗೆ ಬ್ರೇಕ್‌ ನೀಡಿರೋ ಚಿತ್ರತಂಡ ಅಕ್ಟೋಬರ್‌ 3ರಿಂದ ಗೋವಾದಲ್ಲಿ ಎರಡು ದಿನದ ಶೂಟಿಂಗ್‌ ಶುರುಮಾಡಲಿದ್ದಾರೆ. ಇನ್ನು ಹಾಡಿಗೆ ಜಾನಿ ಮಾಸ್ಟರ್‌ ಕೋರಿಗ್ರಫಿ ಮಾಡಿದ್ದು, ಚಿತ್ರ ಇನ್ನೊಂದು ಸಾಂಗ್‌ ಶ್ರೀಘ್ರದಲ್ಲೇ ಶೂಟಿಂಗ್‌ ಮುಗಿಸಿ ಮುಂದಿನ ವರ್ಷದ ಚಿತ್ರ ರಿಲೀಸ್‌ ಮಾಡೋ ಪ್ಲಾನ್‌ನಲ್ಲಿದೆ ಚಿತ್ರತಂಡ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top