ಯಶ್ ಬೇಡಿಕೆಗೆ ಸ್ಪಂದಿಸಿದ ಬಿಎಸ್‍ವೈ-ಫಿಲ್ಮ್ ಸಿಟಿಗೆ 500ಕೋಟಿ..!

ಮುಖ್ಯಮಂತ್ರಿ ಯಡಿಯೂರಪ್ಪ ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಸಿನಿಮಾ ಕ್ಷೇತ್ರಕ್ಕೆ ಭರ್ಜರಿಯಾದ ಘೋಷಣೆಯನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಶ್ವದ ಗುಣಮಟ್ಟ ಫಿಲಂ ಸಿಟಿ ನಿರ್ಮಾಣ ಮಾಡಲು 500 ಕೋಟಿ ರೂ ಅನುದಾನ ಘೋಷಣೆ ಮಾಡಿದ್ದಾರೆ.
ಇನ್ನು ಬಜೆಟ್‍ನಲ್ಲಿ ಫಿಲಂ ಸಿಟಿಗೆ 500 ಕೋಟಿ ಘೋಷಣೆಯಾಗಿದ್ದು, ಫೆಬ್ರವರಿ 26ರಂದು ಚಲನಚಿತ್ರೋತ್ಸವ ಕಾರ್ಯಕ್ರಮದ ಸಮಯದಲ್ಲಿ ಬಿಎಸ್‍ವೈ ಬಳಿ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾದ ಬಗ್ಗೆ ಯಶ್ ಮನವಿಯನ್ನು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗುತ್ತಿರುವುದು ಚಿತ್ರರಂಗಕ್ಕೆ ಸಂತೋಷದ ಸುದ್ದಿ ನೀಡಿದ್ದಂತಾಗಿದೆ.

ಇನ್ನು ಯಶ್ ಮುಖ್ಯಮಂತ್ರಿಯವರ ಬಳಿ ಕರ್ನಾಟದಲ್ಲಿ ಹುಡುಗರಿಗೆ ತುಂಬಾನೇ ಕನಸು,ಹುರುಪು,ಶಕ್ತಿಯಿದೆ. ಹೀಗಾಗಿ ಒಂದು ದೊಡ್ಡ ಫಿಲಂ ಸಿಟಿ ಕಟ್ಟಿಸಿ ಬಿಡಿ. ಕೇವಲ ಅಲ್ಲಿ ಅಷ್ಟು ಎಕರೆ, ಇಲ್ಲಿ ಅಷ್ಟು ಎಕರೆ ಕೊಟ್ಟಿದ್ದಾರೆ ಅಂತ ಹೇಳಿದ್ದನ್ನು ಕೇಳಿದ್ದೇವೆ, ಈ ಜಾಗ, ಆ ಜಾಗ ಅಂತ ಹೋಗ್ತಾನೆ ಇದೆ. ಎಲ್ಲೋ ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು ಹೀಗಾಗಿ ನಮಗೆ ಶಕ್ತಿ ಕೊಡಿ, ತೆರಿಗೆ ರೂಪದಲ್ಲಿ ಎಷ್ಟು ವಾಪಸ್ ಕೋಡ್ತೀವಿ ಅಂದ್ರೆ ಅದರಿಂದ ನಿಮಗೆ ಖುಷಿಯಾಗಬೇಕು, ಇದರಿಂದ ಉದ್ಯಮವು ಬೆಳೆಯುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋ ಮಾಡುವ ಮೂಲಕ ಶಕ್ತಿ ತುಂಬಿ ಎಂದು ಮನವಿ ಮಾಡಿಕೊಂಡಿದ್ದರು, ಅದಕ್ಕೆ ಈಗ ಬಜೆಟ್‍ನಲ್ಲಿ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500ಕೋಟಿ ಅನುದಾನ ನೀಡಿರುವುದು ಚಿತ್ರರಂಗದ ಮಟ್ಟಿಗೆ ಸಂತೋಷವನ್ನು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top