ಯಶೋಮಾರ್ಗದ ವತಿಯಿಂದ ಗೋಶಾಲೆಗೆ ಮೇಲ್ಛಾವಣಿ ಹಾಗೂ ಕೊಟ್ಟಿಗೆ

ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗದ ವತಿಯಿಂದ ಪಾಂಡವಪುರ ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿ ಗೋಶಾಲೆಗೆ ಮೇಲ್ಛಾವಣಿ ಹಾಗೂ ಕೊಟ್ಟಿಗೆ, ನೀರು ಕುಡಿಯುವ ತೊಟ್ಟಿಗಳ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದು ಸುಮಾರು 13ರಿಂದ 15 ಲಕ್ಷದವರೆಗೆ ವ್ಯಯಿಸುತ್ತಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದೇ ಗೋಶಾಲೆಯ ಗೋವುಗಳಿಗೆ 10 ಟ್ರಾಕ್ಟರ್ ಮೇವನ್ನು ದಾನವಾಗಿ ನೀಡಿದ್ದಾರೆ.

ಈ ಮೂಲಕ ಯಶೋಮಾರ್ಗ ಸಾಮಾನ್ಯರಿಂದ ಸ್ಟಾರ್ ಗಳವರೆಗೂ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದೆ. ಇದರೊಂದಿಗೆ ಮತ್ತೊಮ್ಮೆ ಮಂಡ್ಯದಲ್ಲಿ ಜೋಡೆತ್ತುಗಳು ಸದ್ದು ಸುದ್ದಿ ಮಾಡುತ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top