ಮ್ಯಾನ್ ಹೋಲ್ ನಿಂದ ಹೊರ ಬಂತು ರಾಶಿ ರಾಶಿ ಕಾಂಡೋಮ್..!

ನಗರ ಪ್ರದೇಶದಲ್ಲಿ ಮಳೆ ಬಂದ್ರೆ‌ ಸಾಕು ಮ್ಯಾನ್ ಹೋಲ್ ಮೂಲಕ ನೀರಿನ ಜೊತೆ ಅನೇಕ ಕಸದ ರಾಶಿಗಳೇ ಬಂದು ಬಿಡುತ್ತವೆ, ಇನ್ನು ರಸ್ತೆಯಲ್ಲಿ ನಿಂತು ಜಾಮ್ ಆಗಿ ಹೋಗುತ್ತದೆ, ಇನ್ನು ಜನರಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ರೆ ಈ ಪ್ರದೇಶದಲ್ಲಿ ಮ್ಯಾನ್ ಹೋಲ್ ಮೂಲಕ ಹೊರ ಬರುತ್ತಿರೋ ವಸ್ತುವನ್ನು ನೋಡಿ, ಆ ಊರಿನ ಜನರಿಗೆ ಮುಜುಗರ ಉಂಟಾಗುತಾಗಿದೆ.

ಹೌದು ಮಂಗಳೂರಿ‌ನ ಹೃದಯ ಭಾಗ ಕೆ.ಎಸ್.ಆರ್.ರಾವ್ ರಸ್ತೆಯಲ್ಲಿ ಈ ಒಂದು ದೃಶ್ಯಗಳು ಕಂಡುಬಂದಿದ್ದು ಈಗ ಅನೇಕ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ, ಇನ್ನು ಸ್ಮಾರ್ಟ್ ಸಿಟಿ, ಬುದ್ಧಿವಂತರ ಊರು ಎಂದು ಕರೆಸಿಕೊಳ್ಳೋ ಮಂಗಳೂರಿನಲ್ಲಿ ಈಗ ಈ ದೃಶ್ಯವನ್ನು ನೋಡಿದ ಜನ ಇದೆಂಥಾ ಅವಸ್ತೆ ಮರಾಯ ಅನ್ನುತ್ತಿದ್ದಾರೆ. ಇನ್ನು ಈ ಕಾಂಡೋಮ್ ಗಳ ರಾಶಿ ಇರೋ‌ ಮ್ಯಾನ್ ಹೋಲ್ ಸುತ್ತ ಮುತ್ತ ವಸತಿ ಗೃಹಗಳಿದ್ದು ಆ ವಸತಿ ಗೃಹಗಳಿಗೆ ಈ ಮ್ಯಾನ್ ಹೋಲ್ ಸಂಪರ್ಕವನ್ನು ಹೊಂದುತ್ತದೆ, ಸದ್ಯ ಈ ಘಟನೆ ನೋಡಿದ ಜನ ಇಲ್ಲಿನ ಸುತ್ತ ಮುತ್ತ ಏನೋ ನಡೀತಾ ಇದೆ ಅನ್ನೋ ಗುಸು ಗುಸು ಪಿಸು ಪಿಸು ಮಾತುಗಳನ್ನು ಆಡಲು ಶುರುಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top