ಮ್ಯಾಟ್ನಿ ಶೋ ನೋಡಲು ಹೊರಟ ರಚಿತರಾಮ್‌ ಮತ್ತು ನೀನಾಸಂ

ಇವತ್ತು ಡಿಂಪಲ್‌ ಕ್ವೀನ್‌ ರಚಿತಾ ಬರ್ತ್‌ಡೇ, ಈ ಬರ್ತ್‌ಡೇ ಸಂಭ್ರಮಕ್ಕೆ ಇದೀಗ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ಇದರ ಜೊತೆಯಲ್ಲಿ ಅವರ ಅಭಿಮಾನಿಗಳಿಗೂ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್‌ವುಡ್‌ನ ಟಾಪ್‌ ಹೀರೋಯಿನ್‌ ಆಗಿರೋ ರಚಿತಾ ರಾಮ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

ಈಗಾಗಲೇ ತೆಲುಗಿಗೂ ಕಾಲಿಟ್ಟಿರೋ ರಚಿತಾ ರಾಮ್‌ ಅವರ ಹೊಸ ಸಿನಿಮಾ ಒಂದು ಅನೌನ್ಸ್‌ ಆಗಿದ್ದು, ಈ ಬಾರಿ ಅವ್ರು ನೀನಾಸಂ ಸತೀಶ್‌ ಜೊತೆ ʻಮ್ಯಾಟ್ನಿ; ಶೋ ನೋಡಲು ಹೋಗ್ತಿದ್ದಾರೆ. ಹೌದು ಅಯೋಗ್ಯ ಚಿತ್ರದ ಮೂಲಕ ಸ್ವೀಟ್‌ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ರಚಿತಾ ರಾಮ್‌ ಮತ್ತು ನೀನಾಸಂ ಸತೀಶ್‌ ಇದೀಗ ಮತ್ತೆ ಒಂದಾಗಿದ್ದು, ಈ ಬಾರಿ ಇವರಿಬ್ಬರು ಸೇರಿ ಮ್ಯಾಟ್ನಿ ಶೋ ನೋಡಲು ಹೋತ್ತಿದ್ದಾರೆ. ಅಂದ್ರೆ ಇವರಿಬ್ಬರ ಹೊಸ ಸಿನಿಮಾದ ಹೆಸರು ʻಮ್ಯಾಟ್ನಿʼ ಹೌದು ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ್ದ ಚಿತ್ರತಂಡ ಇಂದು ರಚಿತಾ ರಾಮ್‌ ಬರ್ತ್‌ಡೇ ಪೋಸ್ಟರ್‌ ರಿಲೀಸ್‌ ಮಾಡೋ ಮೂಲಕ ಅವರ ಬರ್ತ್‌ಡೇಗೆ ಗಿಫ್ಟ್‌ ನೀಡಿದ್ದು, ಅದರ ಜೊತೆಯಲ್ಲಿ ರಚಿತಾ ರಾಮ್‌ ಅವರ ಮುಂದಿನ ಸಿನಿಮಾ ʻಮ್ಯಾಟ್ನಿʼ ಅನ್ನೋದನ್ನ ಅಧಿಕೃತ ಗೊಳಿಸಿದ್ದಾರೆ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳೋ ನೀನಾಸಂ ಸತೀಶ್‌ ರಚ್ಚುಗೆ ಮತ್ತೆ ಜೋಡಿಯಾಗಿದ್ದು, ಈ ಬಾರಿ ಯಾವ ರೀತಿ ಮೋಡಿ ಮಾಡ್ತಾ ಅನ್ನೋ ಕುತೂಹಲ ಸಿನಿರಸಿಕರಲ್ಲಿ ಇದೆ. ಇನ್ನು ʻಮ್ಯಾಟ್ನಿʼ ಚಿತ್ರವನ್ನು ರಾಮ್‌ಗೋಪಾಲ್‌ ವರ್ಮಾ ಅವರ ಶಿಷ್ಯ ಮನೋಹರ್‌ ಕಾಂಪಲ್ಲಿ ನಿರ್ದೇಶನ ಮಾಡ್ತಾ ಇದ್ದು, ಎಸ್‌. ಪೂರ್ಣಿಮಾ ನಿರ್ಮಾಣ ಮಾಡ್ತಾ ಇದ್ದಾರೆ. ಇನ್ನು ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಮ್ಯೂಸಿಕ್‌ ಮಾಡ್ತಾ ಇದ್ದು. ಈ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್‌ ಶುರುವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top