ಮ್ಯಾಚ್ ಮದ್ಯೆ ಫಿಂಚ್‍ಗೆ ಕಚಗುಳಿ ಇಟ್ಟು ತಮಾಷೆ ಮಾಡಿದ ಕೆ ಎಲ್ ರಾಹುಲ್

ಆಸ್ಟ್ರೇಲಿಯಾ, ಭಾರತ ನಡುವೆ ಎರಡನೇ ಏಕದಿನ ಪಂದ್ಯ ನಡೀತಾ ಇದ್ದು, ಆಸ್ಟ್ರೇಲಿಯಾ ಟಾಸ್ ಗೆದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯ ಅಂದ್ರೆ ಅದೊಂದು ರೀತಿ ಹೈ ವೋಲ್ಟಾಜ್ ಪಂದ್ಯವಾಗಿರುತ್ತದೆ. ಎರಡು ತಂಡಗಳು ಅಗ್ರೆಸಿವ್ ಪ್ರದರ್ಶನ ತೋರಲು ಮುಂದಾಗುತ್ತಾರೆ. ಆದ್ರೆ ಇಂದಿನ ಪಂದ್ಯದಲ್ಲಿ ಮೈದಾನದಲ್ಲಿ ತಮಾಷೆಯ ಕ್ಷಣಕ್ಕೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ನವದೀಪ್ ಸೈನಿ ಎಸೆದ ಬಾಲ್ ಫುಲ್ಟಾಸ್ ಆಗಿ ಬಂದಿದ್ದು, ಫುಲ್ಟಾಸ್ ಎಸೆತವನ್ನು ಬಾರಿಸುವಲ್ಲಿ ವಿಫಲವಾದ ಫಿಂಚ್‍ಗೆ ಬಾಲ್ ಹೊಟ್ಟೆಯ ಭಾಗಕ್ಕೆ ಬಡಿಯಿತು. ಬಾಲ್ ಹೊಟ್ಟೆ ಭಾಗಕ್ಕೆ ಬಡಿದಿದ್ದರಿಂದಾಗಿ ನೋವವನ್ನು ವ್ಯಕ್ತ ಪಡಿಸಿದ್ರು, ಬಳಿಕ ಹಾಗೇ ಸವಾರಿಸಿಕೊಂಡು, ಆಟಕ್ಕೆ ಮುಂದಾದ್ರು, ಈ ವೇಳೆ ಸೈನಿ ಫಿಂಚ್ ಬಳಿ ಬಂದು ಕ್ಷಮೆ ಯಾಚಿಸಿದ್ರೆ, ಇತ್ತ ಕೆ ಎಲ್ ರಾಹುಲ್ ಮತ್ತು ಚಾಹಲ್ ಬಂದು ಆರೋನ್ ಫಿಂಚ್ ಸುಧಾರಿಸಿಕೊಳ್ಳುತ್ತಿರುವುದನ್ನು ನೋಡಿ ರಾಹುಲ್ ತಕ್ಷಣವೇ ಆರೋನ್ ಫಿಂಚ್ ಅಜವರ ಹೊಟ್ಟೆಯ ಭಾಗವನ್ನು ಪರೀಕ್ಷಿಸಿ ಮುಂದಾಗುವ ಮೂಲಕ ಹೊಟ್ಟೆಗೆ ಕಚಗುಳಿ ನೀಡುವ ಮೂಲಕ ತಮಾಷೇಗೆ ಮುಂದಾದರು, ನಂತರ ಫಿಂಚ್ ಕೂಡ ಪ್ರತಿಕ್ರಿಯಿಸಿ ತಮಾಷೆ ಮಾಡಿದ್ರು, ಸದ್ಯ ಮೈದಾನದಲ್ಲಿ ಆಟದ ಜೊತೆಯಲ್ಲಿ ಕ್ರಿಕೆಟ್ ಪ್ರಿಯರಿಗೆ ತಮಾಷೆಯ ಮನೋರಂಜನೆಯು ದೊರೆಯಿತು.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಇವತ್ತಿನ ಪಂದ್ಯಲ್ಲಿನ ಇವತ್ತಿನ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top