ಮೊಹಮ್ಮದ್ ಸಿರಾಜ್ ಬೆಂಕಿ ಬೌಲಿಂಗ್‍ಗೆ ಕೆಕೆಆರ್ ಧೂಳಿಪಟ

ಮ್ಯಾಚ್ ನಂಬರ್ 39 ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡಕ್ಕೆ ಸಿರಾಜ್ ದೊಡ್ಡ ಆಘಾತವನ್ನೇ ನೀಡಿದ್ರು, ಮೊದಲ ಓವರ್‍ನಲ್ಲಿ ಕ್ರಿಸ್ ಮಾರಿಸ್ ಬೌಲಿಂಗ್‍ನಲ್ಲಿ 3ರನ್ ಗಳಿಸಿ ಶುಭಾರಂಭ ಮಾಡಿದ ಕೆಕೆಆರ್ ತಂಡಕ್ಕೆ ಎರಡನೇ ಓವರ್ ಆಘಾತವೇ ಕಾದಿತ್ತು, ಸಿರಾಜ್ ತನ್ನ ಕೊಟಾದ ಮೊದಲ ಓವರ್‍ನಲ್ಲಿ ಬೌಲಿಂಗ್ ಮಾಡಿದ್ದು , ಮೊದಲ ಎಸೆತದಿಂದಲೇ ಉತ್ತಮ ಬೌಲಿಂಗ್ ಮಾಡಿದ್ದು ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಎರಡನೇ ಬಾಲ್‍ನಲ್ಲಿ ತ್ರಿಪಾಠಿಯ ವಿಕೆಟ್ ಪಡೆಯೋ ಮೂಲಕ ಕೆಕೆಆರ್‍ಗೆ ಮೊದಲ ಹೊಡೆತ ಕೊಟ್ಟ ಸಿರಾಸ್ ನಂತರ ನಿತೇಶ್ ರಾಣಾ ಅವರನ್ನು ಮೊದಲ ಬಾಲಿಗೆ ಬೌಲ್ಡ್ ಮಾಡೋ ಮೂಲಕ ಎರಡು ವಿಕೆಟ್‍ಗಳನ್ನು ಪಡೆಯೋ ಮೂಲಕ ಮೇಡನ್ ಎರಡು ವಿಕೆಟ್ ಪಡೆದು ಹೊಸ ದಾಖಲೆಯನ್ನು ನಿರ್ಮಿಸಿದ್ರು, ಈ ಒಂದು ಅದ್ಭುತ ಬೌಲಿಂಗ್‍ನಿಂದ ಸಿರಾಜ್ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದವರ ಬಾಯಿಯನ್ನು ಸಿರಾಜ್ ಮುಚ್ಚಿಸಿದ್ರು, ಇನ್ನು ಈ ಐಪಿಎಲ್‍ನಲ್ಲಿ ಮೇಡನ್ ವಿಕೆಟ್ ಜೊತೆಯಲ್ಲಿ ಒಂದು ಪಂದ್ಯದಲ್ಲಿ ಎರಡು ಮೇಡನ್ ಓವರ್ ಅನ್ನು ಮಾಡೋ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಅನ್ನೋ ಹೆಗ್ಗಳಿಗೆ ಸಿರಾಜ್ ಪಾತ್ರರಾಗಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ 4 ಓವರ್‍ಗಳಲ್ಲಿ 8ರನ್ ನೀಡಿ ಮೂರು ವಿಕೆಟ್ ಪಡೆಯೋ ಮೂಲಕ ಈ ಐಪಿಎಲ್ ಸೀಸನ್‍ನ ಬೆಸ್ಟ್ ಬೌಲರ್ ಆಗಿದ್ದು ಈ ಪಂದ್ಯದ ಗೇಮ್ ಚೇಂಚರ್ ಕೂಡ ಆಗಿದ್ದಾರೆ.

ಇನ್ನು ಚಹೆಲ್,ನವದೀಪ್ ಸೈನಿ,ವಾಷಿಂಗ್ ಟನ್ ಸುಂದರ್,ಕ್ರಿಸ್ ಮಾರಿಸ್ ಅವರ ಅದ್ಭುತ ಬೌಲಿಂಗ್‍ನಿಂದಾಗಿ ಕೆಕೆಆರ್ ತಂಡ 85ರನ್‍ಗಳ ಗುರಿಯನ್ನು ಆರ್‍ಸಿಬಿ ತಂಡಕ್ಕೆ ನೀಡಿದ್ದು, ಆ ಮೂಲಕ ಈ ಬಾರಿಯ ಐಪಿಎಲ್‍ಲ್ಲಿ ಅತಿ ಕಡಿಮೆ ರನ್ ಕಟ್ಟಿಹಾಕುವ ಮೂಲಕ ಆರ್‍ಸಿಬಿ ಹೊಸ ದಾಖಲೆ ಬರೆದಿದ್ದು,ಇತ್ತ ವೇಗಿ ಮೊಹಮ್ಮದ್ ಸಿರಾಜ್ ಎರಡು ಮೇಡನ್ ಓವರ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಗೆ ಸಾಕ್ಷಿ ಆದ್ರು,

ಇವತ್ತಿನ ಆರ್‍ಸಿಬಿ ತಂಡದ ಪ್ರದರ್ಶನ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top