
ಮೊಮ್ಮಗಳು ಹೇಳಿದ ಮಾತಿಗೆ ಬೇಸರವಾಗಿ ಅಜ್ಜಿಯೊಬ್ಬಳು ಆ್ಯಸಿಡ್ ಕುಡಿದು ಮೃತಪಟ್ಟಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 5 ವರ್ಷದ ಮೊಮ್ಮಗಳು ಮತ್ತು ಅಜ್ಜಿ ಮನೆಯ ಮುಂದೆ ಕುಳಿತು ಸೀಬೆಹಣ್ಣನ್ನು ತಿನ್ನುತ್ತ ಕುಳಿತಿದ್ದರು, ಈ ವೇಳೆ ಮೊಮ್ಮಗಳು ಎಲ್ಲಾ ಹಣ್ಣನ್ನು ನೀವೆ ತಿಂದುಬಿಟ್ಟಿರಿ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡ ನಾನು ತಿಂದಿಲ್ಲ, ಎಲ್ಲ ನನ್ನ ಮೇಲೆ ಆಪಾದನೆ ಮಾಡುತ್ತಿದ್ದೀರಿ ಎಂದು ಹೇಳಿ ಆಸಿಡ್ ಕುಡಿದಿದ್ದಾರೆ. ಎಂದು ಅಜ್ಜಿಯ ಮಗ ಪೊಲೀಸರಿಗೆ ಹೇಳಿದ್ದಾರೆ. ಇನ್ನು ಅಜ್ಜಿ ಆ್ಯಸಿಡ್ ಕುಡಿದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಮಗ ಹೇಳಿದಂತೆ ಮೊಮ್ಮಗಳು ಎಲ್ಲಾ ಹಣ್ಣು ತಿಂದಿದ್ದೀರಾ ಅಂತ ಹೇಳಿದಕ್ಕೆ ಅಜ್ಜಿ ಹೀಗೆ ಮಾಡಿಕೊಂಡಿದ್ದಾರಾ ಎಂದು ಪೂರ್ಣ ತನಿಖೆ ಮುಖಾಂತರ ತಿಳಿಯಬೇಕು ಎಂದು ಪೊಲೀಸರು ಹೇಳಿದ್ದಾರೆ.