ಮೊದಲ ಪ್ಲೇ ಆಫ್‌ ಪಂದ್ಯ 13 ವರ್ಷದ ವನವಾಸದಿಂದ ಹೊರ ಬರ್ತಾರಾ ಡೆಲ್ಲಿ ಹುಡುಗ್ರು..

ಕೊರೋನಾದ ನಡುವೆ ಈ ಬಾರಿ ಐಪಿಎಲ್‌ ನಡೆಯೋದು ಡೌನ್‌ ಅನ್ನೋವಾಗಲೇ ಯುಎಇಯಲ್ಲಿ ಐಪಿಎಲ್‌ ನಡೆಸಿ ಯಶಸ್ವಿಯಾಗಿದ್ದು, ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದು ಮೊದಲ ಪ್ಲೇ ಆಫ್‌ ಮ್ಯಾಚ್‌ ಎರಡು ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಪ್ರೇಕ್ಷಕರಿಲ್ಲದೆ ನಡೆದ ಈ ಬಾರಿಯ ಐಪಿಎಲ್‌ ಅನ್ನು ಕ್ರಿಕೆಟ್‌ ಪ್ರಿಯರು ಟಿವಿಯಲ್ಲಿ ಲೈವ್‌ ನೋಡಿ ಎಂಜಾಯ್‌ ಮಾಡಿದ್ದು, ಇಂದು ಮೊದಲ ಕ್ವಾಲಿಫೈಯರ್‌ ಮ್ಯಾಚ್‌ಗಾಗಿ ಕಾಯುತ್ತಿದ್ದಾರೆ.

ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಅಲಂಕರಿಸಿರೋ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್‌ ನಡುವೆ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯುತ್ತಿದ್ದು, ಹಾಲಿ ಚಾಪಿಂಯನ್ಸ್‌ ಈ ಬಾರಿಯು ಗೆಲುವನ್ನು ಸಾಧಿಸೋ ಮೂಲಕ ಕಪ್‌ ಗೆಲ್ಲುವ ತವಕದಲ್ಲಿದೆ. ಇನ್ನು ಅನುಭವಿ ತಂಡದ ಎದುರು ಯಂಗ್‌ ಡೆಲ್ಲಿ ಕ್ಯಾಪಿಟಲ್‌ ತಂಡ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳುತ್ತಿದೆ. ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಬಂದಿರೋ ಈ ಎರಡು ತಂಡಗಳು ಪ್ಲೇ ಆಫ್‌ನ ಮೊದಲ ಪಂದ್ಯದಲ್ಲಿ ಗೆಲುವನ್ನು ಸಾಧಿಸೋ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶ ಮಾಡುವ ತವಕದಲ್ಲಿದೆ.

ಎರಡು ತಂಡಗಳು ಬಲಿಷ್ಠವಾಗಿದ್ದು, ಮುಂಬೈ ತಂಡದಲ್ಲಿ ಅನುಭವಿಗಳ ದಂಡೆ ತುಂಬಿದ್ದು ತಂಡಕ್ಕೆ ಬಲ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ, ರೋಹಿತ್‌ ಶರ್ಮಾ,ಡಿಕಾಕ್‌,ಪೊಲಾರ್ಡ್‌ರ ಅನುಭವ, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಬೂಬ್ರರ ಸಖತ್‌ ಆಟದಿಂದ ಡೆಲ್ಲಿ ತಂಡಕ್ಕೆ ಒಂದಿಷ್ಟು ಹಿನ್ನೆಡೆಯಾಗಬಹುದು, ಇನ್ನು ಯುವಕರ ತಂಡ ಹೊಂದಿರೋ ಡೆಲ್ಲಿಗೆ ಶಿಖರ್‌ ಧವನ್‌ ಗೆಲುವಿನ ಶಿಖರಕ್ಕೆ ಏರಿಸೋ ತಾಕತ್ತು ಇದ್ರೆ, ಇತ್ತ ರಬಾಡ ಅವರ ಬೌಲಿಂಗ್‌ಗೆ ಮುಂಬೈ ಹುಡುಗರು ತಡಕಾಡೋದು ಗ್ಯಾರಂಟಿ ಇದೆ. ಇನ್ನು ಡೆಲ್ಲಿ ತಂಡದಲ್ಲಿ ನೊಕಿಯೇ,ರಹಾನೆ,ಶ್ರೇಯಸ್ಸ ಆಯ್ಯರ್‌ ಅವರ ಉತ್ತಮ ಪ್ರದರ್ಶನ ತಂಡಕ್ಕೆ ಇನ್ನಷ್ಟು ಬಲ ತಂದುಕೊಡಲಿದೆ. ಆ ಮೂಲಕ ಮುಂಬೈ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸೋ ಪ್ಲಾನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್‌ ಕೂಡ ಇದೆ.

ಇನ್ನು ಕ್ವಾಲಿಫೈಯರ್‌ ೧ರಲ್ಲಿ ಗೆಲುವನ್ನು ಸಾಧಿಸೋ ಮೂಲಕ ಡೆಲ್ಲಿ ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸೋ ತವಕದಲ್ಲಿದ್ರೆ, ಇತ್ತ ಮುಂಬೈ ಗೆದ್ದು ಐಪಿಎಲ್‌ನಲ್ಲಿ ನಾನೇ ಚಾಂಪಿಯನ್‌ ಅನ್ನೋದನ್ನ ತೋರಿಸೋಕೆ ರೆಡಿಯಾಗುತ್ತಿದೆ.

ಒಟ್ಟಿನಲ್ಲಿ ಇಂದಿನ ಪಂದ್ಯ ಇಬ್ಬರಿಗೂ ಪ್ರತಿಷ್ಠೆಯ ಕದನವಾಗಿದ್ದು, ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್‌ ಪ್ರವೇಶಿಸಿದ್ರೆ, ಸೋತವರು ಕ್ವಾಲಿಫೈಯರ್‌ ೨ನಲ್ಲಿ,ಎಲಿಮಿನೇಟರ್‌ ವಿಜೇತ ತಂಡದ ಜೊತೆ ಸೆಣೆಸಾಡಿ ಫೈನಲ್‌ ಪ್ರವೇಶಿಸೋ ಅವಕಾಶ ವಿರುತ್ತದೆ.

ನಿಮ್ಮ ಪ್ರಕಾರ ಇಂದಿನ ಕ್ವಾಲಿಫೈಯರ್‌ ೧ರ ಪಂದ್ಯದಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದು ಯಾವ ತಂಡ ಫೈನಲ್‌ ಪ್ರವೇಶಿಸಲಿದೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top