ಮೊದಲ ದಿನವೇ ಬಾಕ್ಸಾಫೀಸ್ ಉಡೀಸ್ ಮಾಡಿದ ಭರಾಟೆ ಚಿತ್ರ..!

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಆಗಿ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.. ಮೊದಲ ಬಾರಿಗೆ ಎರಡು ರೋಲ್‍ನಲ್ಲಿ ಕಾಣಿಸಿಕೊಂಡಿರೋ ಶ್ರೀಮುರುಳಿಯ ಗೆಟಪ್‍ಗೆ ಪ್ರೇಕ್ಷಕ ಫಿದಾ ಆಗಿದ್ದು, ಎಲ್ಲಾ ಕಡೆ ಹೌಸ್‍ಫುಲ್ ಪ್ರದರ್ಶನ ಕಾಣ್ತಾ ಇದೆ, ಸದ್ಯ ಚಿತ್ರ ತಂಡ ಮೊದಲ ದಿನದ ಕಲೆಕ್ಷನ್ ಕುರಿತು ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದು ಫಸ್ಟ್ ಡೇ ಒಟ್ಟು 8.36ಕೋಟಿ ಗಳಿಕೆಯೊಂದಿಗೆ ಗಾಂಧಿನಗರದಲ್ಲಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ.. ಮೈಸೂರು, ಮಂಡ್ಯ ಚಿತ್ರದುರ್ಗ, ತುಮಕೂರು ಭಾಗಗಳಲ್ಲಿ 2.17 ಕೋಟಿ ಗಳಿಕೆ ಯಾಗಿದೆ, ಹುಬ್ಬಳ್ಳಿ,ಧಾರವಾಡ, ಶಿವಮೊಗ್ಗ, ಮಂಗಳೂರು ಮತ್ತು ಹೈದರಾಬಾದ್ ಕರ್ನಾಟಕ ಸೇರಿ 2.38ಕೋಟಿ ಕಲೆಕ್ಷನ್ ಕಂಡಿದೆ,

ಬೆಂಗಳೂರು ಮತ್ತು ಕೋಲಾರದಲ್ಲಿ 3.81 ಕೋಟಿಯನ್ನು ಬಾಕ್ಸಾಫಿಸ್‍ನಲ್ಲಿ ಬಾಚಿದ್ದು ಚಿತ್ರತಂಡ ಹೊಸ ದಾಖಲೆಯನ್ನು ನಿರ್ಮಿಸಿದೆ, ಮೊದಲ ಬಾರಿಗೆ ಡಬಲ್ ಶೇಡ್‍ನಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದು, ಇದರ ಜೊತೆಯಲ್ಲಿ ಸಾಯಿಕುಮಾರ್ ಸಹೋದರರು ಒಟ್ಟಿಗೆ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದ್ದು ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್‍ನಲ್ಲಿ ಇನ್ನಷ್ಟು ಗಳಿಕೆ ಕಾಣಲಿದೆ ಅನ್ನೋ ಖುಷಿಯಲ್ಲಿದ್ದಾರೆ ಭರಾಟೆ ಚಿತ್ರತಂಡ.

#Bharaate ❤️ watch the film at your Cinemas!

Posted by Srii Murali on Friday, 18 October 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top