ಮೊದಲ ಐಪಿಎಲ್ ಪಂದ್ಯದಲ್ಲೇ ದಾಖಲೆ ಬರೆದ ದೇವದತ್ ಪಡಿಕಲ್

ಐಪಿಎಲ್‍ನಲ್ಲಿ ಸಾಧನೆ ಮಾಡಿದ ದೇವದತ್ ಪಡಿಕಲ್, ತಾನು ಆಡಿದ ಮೊದಲ ಐಪಿಎಲ್‍ನಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ ದೇವದತ್ ಪಡಿಕಲ್, ಹೌದು ದೇವದತ್ ಪಡಿಕಲ್ ಇಂದು ತಮ್ಮ ಮೊದಲ ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲಿ 42 ಎಸೆತಗಳಲ್ಲಿ 56 ರನ್ ಹೊಡೆಯುವ ಮೂಲಕ ಹೊಸ ದಾಖಲೆ ಬರೆದ ಆಟಗಾರರಾಗಿದ್ದಾರೆ.

ಹೌದು ದೇವದತ್ ಪಡಿಕಲ್ ತಾವು ಆಡಿದ ಪ್ರಥಮ ದರ್ಜೆ,ಲಿಸ್ಟ್ ಎ,ಟಿ 20 ಮತ್ತು ಐಪಿಎಲ್ ಈ ಎಲ್ಲಾ ಟೂರ್ನಿಯಲ್ಲಿ ತಾವು ಆಡಿದ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಡಿಕಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ 11 ಇನ್ನಿಂಗ್ಸ್‍ನಿಂದ 609ರನ್ ಹೊಡೆದಿದ್ದರು, ಈ ಟೂರ್ನಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಸಿಡಿಸಿದ್ದರು

ಇನ್ನು ಮುಸ್ತಾಕ್ ಆಲಿ ಟ್ರೋಫಿಯಲ್ಲಿ 580 ರನ್ ಭಾರಿಸಿದ್ದು ಈ ಟೂರ್ನಿಯಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಸಿಡಿಸಿದ್ರು.

ಇಂದು ಐಪಿಎಲ್ ಮೊದಲ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದು, ಹೊಸ ದಾಖಲೆಗೆ ದೇವದತ್ ಪಡಿಕಲ್ ಸಾಕ್ಷಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top