ಮೈ ಮೇಲೆ 10ಕೆ.ಜಿ ಚಿನ್ನ ಹಾಕುತ್ತಿದ್ದ ಗೋಲ್ಡ್ ಮ್ಯಾನ್ ಇನ್ನಿಲ್ಲ..!

ಮೈ ಮೇಲೆ ಹತ್ತು ಕೆ.ಜಿಗೂ ಹೆಚ್ಚು ತೂಕದ ಚಿನ್ನವನ್ನು ಹಾಕಿಕೊಂಡು ಓಡಾಡುತ್ತಿದ್ದ ,ಗೋಲ್ಡ್ ಮೆನ್ ಅಂತಾನೇ ಖ್ಯಾತಿ ಹೊಂದಿದ್ದ ಪುಣೆಯ ಸಮ್ರಾಟ್ ಮೊಜೆ (39) ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಪುಣೆಯಲ್ಲಿ ಬ್ಯುಸಿನೆಸ್ ಮೆನ್ ಆಗಿದ್ದ ಸಮ್ರಾಟ್ ಮೊಜೆ ತಮ್ಮ ಕುತ್ತಿಗೆಯಲ್ಲಿ ಹತ್ತು ಕೆಜಿಗೂ ಹೆಚ್ಚಿನ ತೂಕದ ಗೋಲ್ಡ್ ಧರಿಸಿ ಓಡಾಡುತ್ತಿದ್ದರು,

ಇವರು ದೇಶದಲ್ಲಿ ಗೋಲ್ಡ್ ಮೆನ್ ಅಂತಾನೇ ಫೇಮಸ್ ಆಗಿದ್ದು, ಅತೀ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಈಡಾಗಿ ನಿಧನ ಹೊಂದಿದ್ದಾರೆ. ಪುಣೆಯಲ್ಲಿ ಪ್ರಖ್ಯಾತ ಬ್ಯುಸಿನೆಸ್ ಮೆನ್ ಆಗಿದ್ದ ಸಮ್ರಾಟ್ ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ತಾಯಿ,ಹೆಂಡತಿ ಇಬ್ಬರು ಮಕ್ಕಳನ್ನು ಅಗಲಿರೋ ಸಮ್ರಾಟ್ ಅಂತ್ಯಕ್ರಿಯೆ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವೆ ಮಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top