
ಮೈಸೂರು ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಗೆ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಮತ್ತೆ 20 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಕೊರೋನಾ ಎಫೆಕ್ಟ್ ಟೈಂನಲ್ಲಿ ಮೃಗಾಲಯಕ್ಕೆ ಇದುವರೆಗೂ 40 ಲಕ್ಷ ರೂಪಾಯಿ ನೀಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಕೊರೋನಾ ಎಫೆಕ್ಟ್,ಲಾಕ್ ಡೌನ್ನಿಂದಾಗಿ ಪ್ರವಾಸಿಗರು ಬರದ ಹಿನ್ನೆಲೆಯಲ್ಲಿ ಮೃಗಾಲಯ ನಿರ್ವಹಣೆಗೆ ಹಣದ ಸಮಸ್ಯೆ ಎದುರಾದಾಗ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಇನ್ಪೋಸಿಸ್ಗೆ ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿದ ಇನ್ಫೋಸಿಸ್ ಮೃಗಾಲಯಕ್ಕೆ 20 ಲಕ್ಷ ದೇಣಿಗೆ ನೀಡಿತ್ತು.