ಮೇ 29ಕ್ಕೆ ಮಂಡ್ಯದಲ್ಲಿ ಅಂಬರೀಶ್ ಅದ್ಧೂರಿ ಹುಟ್ಟುಹಬ್ಬ.!

ಮೇ 29 ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಇದ್ದು ಈ ಬಾರಿಯ ಹುಟ್ಟುಹಬ್ಬ ಮಂಡ್ಯದ ಜನತೆಗೆ ಒಂದು ರೀತಿಯಲ್ಲಿ ಸ್ಪೆಷಲ್ ಅಂತಾನೇ ಹೇಳಬೇಕು. ಹೌದು 17ನೇ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಪ್ರಚಂಡ ಮತಗಳ ಮೂಲಕ ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಬಾರಿಯ ಅಂಬಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

ಮಂಡ್ಯದ ಸಿಲ್ವರ್ ಜುಬ್ಲಿ ಮೈದಾನದಲ್ಲಿ ಅಭಿನಂದನ ಕಾರ್ಯಕ್ರಮ ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ಸುಮಲತಾ, ಅಭಿಷೇಕ್, ದರ್ಶನ್, ಯಶ್ ಸೇರಿದಂತೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ. ಈ ಮೂಲಕ‌ ಮಂಡ್ಯದಲ್ಲಿ ಅಂಬಿ ಹುಟ್ಟುಹಬ್ಬ ಆಚರಿಸುವ ಮೂಲಕ ತಮ್ಮ ಗೆಲುವಿಗೆ ಕಾರಣವಾದ ಮಂಡ್ಯ ಜನತೆಗೆ ಅಭಿನಂದನೆ ತಿಳಿಸಲಿದ್ದಾರೆ ಸುಮಲತಾ ಅಂಬರೀಶ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top