ಮೂರು ಮ್ಯಾಚ್ ಗೆದ್ದು ಕಪ್ ಗೆಲ್ತಿವಿ ಅಂದ ABD

ಆರ್‍ಸಿಬಿ ಐಪಿಎಲ್‍ನ ಕೊನೆಯ ಹಂತದಲ್ಲಿ ಸತತ ಸೋಲಿನ ನಡುವೆಯು ನೆಟ್ ರನ್‍ರೇಟ್ ಮೂಲಕ ಪಾಯಿಂಟ್ ಟೇಬಲ್‍ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದು, ಮುಂದಿನ ಎರಡು ಪಂದ್ಯಗಳನ್ನು ಗೆದ್ದರೇ ಮಾತ್ರ ಫೈನಲ್ ಹಂತಕ್ಕೆ ತಲುಪಲು ಸಾಧ್ಯ, ಇದೀಗ ಆರ್‍ಸಿಬಿ ಈ ಬಾರಿಯಾದ್ರು ಚೊಚ್ಚಲ ಕಪ್ ಗೆದ್ದು ಬರಲಿ ಅನ್ನೋದು ಆರ್‍ಸಿಬಿ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರ ಆಶಯ ಕೂಡ ಇದೀಗ ಅಭಿಮಾನಿಗಳ ಆಶಯ ಮತ್ತು ತಂಡ ಗೆಲುವಿನ ಬಗ್ಗೆ ಆತ್ಮ ವಿಶ್ವಾಸದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ ಆರ್‍ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್.

ಹೌದು ಹಿಂದೂಸ್ಥಾನ್ ಟೈಮ್ಸ್ ಕಾಲಂನಲ್ಲಿ ಮಾತನಾಡಿರೋ ಎಬಿಡಿ ವಿಲಿಯರ್ಸ್ ಈ ಬಾರಿ ಚೊಚ್ಚಲ ಐಪಿಎಲ್ ಕಪ್ ಅನ್ನು ಆರ್‍ಸಿಬಿ ಎತ್ತಿಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸತತ ನಾಲ್ಕು ಪಂದ್ಯಗಳ ಸೋಲಿನ ನಡುವೆ ಮತ್ತು ಉಳಿದ ಪಂದ್ಯಗಳನ್ನು ಗೆದ್ದು ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವೇ ಅನ್ನೋ ಪ್ರಶ್ನೆಗೆ ಎಬಿಡಿ ವಿಲಿಯರ್ಸ್ ಅದು ಸಾಧ್ಯವಿದೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಯಾವ ತಂಡವನ್ನು ಯಾವಗಾ ಬೇಕಾದರು ಸೋಲಿಸಲು ಸಾಧ್ಯವಿದೆ. ಸೋಲಿಗೂ ಗೆಲುವಿಗೂ ತುಂಬಾ ಸಣ್ಣ ಅಂತರವಿದೆ. ಕೆಲವು ಸಂಗತಿಗಳು ಬದಲಾಗುವ ವೇಳೆ ಇಡೀ ಫಲಿತಾಂಶವೇ ಬುಡಮೇಲಾಗುತ್ತದೆ. ಕೆಲವೊಮ್ಮೆ ನಾವು ಪಂದ್ಯದ ಸಮಯದಲ್ಲಿ ನಾವು ಹಾಕಿಕೊಂಡ ಯೋಜನೆಯನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ ಎಂದು ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.

ಇನ್ನು ಕೊರೋನಾ ಆತಂಕದ ನಡುವೆಯು ಆರ್‍ಸಿಬಿ ತಂಡವನ್ನು ಅಭಿಮಾನಿಗಳು ಬೆಂಗಳೂರು ಹಾಗೂ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿ ಮನೆಯಲ್ಲಿ ಮ್ಯಾಚ್ ನೋಡಿದ್ದಾರೆ. ಅವರ ಮುಖದಲ್ಲಿ ಸಂತಸವನ್ನು ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಹೀಗೆ ಹೇಳೋ ಮೂಲಕ ಆರ್‍ಸಿಬಿ ಅಭಿಮಾನಿಗಳಿಗೆ ಐಪಿಎಲ್ ಕಪ್ ಗೆದ್ದು ತರುವುದಾಗಿ ಮತ್ತೊಮ್ಮೆ ವಿಶ್ವಾಸಕೊಟ್ಟಿದ್ದಾರೆ. ಈ ಹಿಂದೆ ಆರ್‍ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದವೇಳೆಯಲ್ಲೂ ಈ ಬಾರಿ ಕಪ್ ಗೆದ್ದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದ ಎಬಿಡಿ, ಇದೀಗ ಈ ಬಾರಿ ಕಪ್ ಗೆದ್ದು ಅಭಿಮಾನಿಗಳ ಮುಖದಲ್ಲಿ ಸಂತಸ ತರುತ್ತೇವೆ ಅಂತ ಹೇಳಿದ್ದು, ಅಭಿಮಾನಿಗಳಿಗೆ ಮತ್ತಷ್ಟು ಖುಷಿಕೊಟ್ಟಿದೆ.

ಎಬಿಡಿ ಹೇಳಿದ ರೀತಿ ಈ ಬಾರಿ ಆರ್‍ಸಿಬಿ ಚೊಚ್ಚಲ ಕಪ್ ಗೆದ್ದು ಅಭಿಮಾನಿಗಳಿಗೆ ಖುಷಿ ನೀಡುತ್ತಾ, ಎಬಿಡಿ ಮಾತು ನಿಜವಾಗುತ್ತಾ ನೀವೂ ಆರ್‍ಸಿಬಿ ಅಭಿಮಾನಿಗಳಾಗಿದ್ರೆ, ಕಾಮೆಂಟ್ ಮಾಡಿ ಆರ್‍ಸಿಬಿ ತಂಡಕ್ಕೆ ವಿಶ್ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top