ಮೂರು ಮಕ್ಕಳ ಚಿಕಿತ್ಸೆಗಾಗಿ ಅಂಗಾಂಗ ಮಾರಾಟಕ್ಕಿಟ್ಟ ತಾಯಿ

ತನ್ನ ಮೂರು ಮಕ್ಕಳ ಚಿಕಿತ್ಸೆಗಾಗಿ ತನ್ನ ಅಂಗಾಂಗವನ್ನು ಮಾರಾಟ ಮಾಡುತ್ತಿರುವುದಾಗಿ ಮನೆ ಮುಂದೆ ಬೋರ್ಡ್‌ ಹಾಕಿಕೊಂಡಿರುವ ಮನಕಲಕುವ ಘಟನೆ ಕೇರಳದಲ್ಲಿ ನಡೆದಿದೆ.

ಶಾಂತಿ ಎಂಬ 44 ವರ್ಷದ ಮಹಿಳೆಗೆ 5 ಮಕ್ಕಳಿದ್ದು ಕೊಚ್ಚಿಯಲ್ಲಿ ನೆಲೆಸಿದ್ದಾರೆ. ತನ್ನ ಮೊದಲ ಮಗ ಕುಟುಂಬದ ಎಲ್ಲಾ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದ ಆದ್ರೆ ಕಳೆದ ವರ್ಷ ಅಪಘಾತದಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೂ, ಇನ್ನು ಎರಡನೇ ಮಗ ಹುಟ್ಟುತ್ತಲೇ ವಿಕಲಚೇತನ ಮಗುವಾಗಿದ್ದು ಹುಟ್ಜಟಿದ್ದು,11 ವರ್ಷದ ಮಗಳು ಸಹ ರಸ್ತೆ ಅಪಘಾತದಲ್ಲಿ ನರದ ಸಮಸ್ಯೆಗೆ ಒಳಗಾಗಿದ್ದಾಳೆ.

ಇನ್ನು ಮೂರನೇ ಮಗ ಕೂಡ ಕೊರೋನಾ ಎಫೆಕ್ಟ್‌ನಿಂದ ಕೆಲಸವನ್ನು ಕಳೆದುಕೊಂಡಿದ್ದು ಮನೆಯಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದು, ಮೂರು ಮಕ್ಕಳ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಕಾರಣ ತಾಯಿ ತನ್ನ ಮನೆಯ ಮುಂದೆ ಅಂಗಾಂಗ ಮಾರಾಟಕ್ಕೆ ಇದೆ ಎಂದು ಬೋರ್ಡ್‌ ಹಾಕಿಕೊಂಡಿದ್ದಾರೆ.

ತನ್ನ ಬದುಕಿನ ಬಂಡಿಯನ್ನು ಸಾಗಿಸಲು ಸಾಧ್ಯವಾಗದೇ ಈ ಬಡ ತಾಯಿ ಈ ನಿರ್ಧಾರಕ್ಕೆ ಬಂದಿದ್ದು. ಈ ಬಗ್ಗೆ ಮಾತನಾಡಿರೋ ಶಾಂತಿ ನಾವು ಹಲವು ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮನೆ ಬಾಡಿಗೆ ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ , ನನ್ನ ಮೂರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ನನಗೆ ಕೆಲಸ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ, ಇದರ ಜೊತೆಯಲ್ಲಿ ನನಗೆ 20 ಲಕ್ಷದ ವರೆಗೆ ಸಾಲ ಇದ್ದು ಅದನ್ನು ಕಟ್ಟಲು ಸಹ ಸಾಧ್ಯವಾಗದ ಕಾರಣ ಸಹಾಯ ಹಸ್ತ ಚಾಚುತ್ತಿದ್ದೇನೆ. ನಮಗೆ ಯಾವುದೇ ಹಣದ ಮೂಲವಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಶಾಂತಿಯವರು ಡ್ರೈವಿಂಗ್‌ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು, ತನ್ನ ಕಿರಿಯ ಮಗನ ಗರ್ಭಿಣಿಯಾಗಿದ್ದಾಗ ನನ್ನ ಪತಿ ಬಿಟ್ಟು ಹೋದರು. ಒಬ್ಬರ ಹಿಂದೆ ಒಬ್ಬರು ಮಕ್ಕಳಿಗೆ ಆರೋಗ್ಯದ ಸಮಸ್ಯೆ ಶುರುವಾಯಿತು, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನಾನು ಕೆಲಸವನ್ನು ಸಹ ಬಿಟ್ಟೆ ಎಂದು ತಮ್ಮ ಅಳನ್ನು ಹೇಳಿಕೊಂಡಿದ್ದಾರೆ.

ಸದ್ಯ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕುಟುಂಬವನ್ನು ಆಶ್ರಯ ಮನೆಯೊಂದಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಕೇರಳ ಸರ್ಕಾರ ಭರವಸೆಯನ್ನು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top