ಮುತ್ತಯ್ಯ ಮುರುಳಿಧರನ್‌ ಬಯೋಪಿಕ್‌ನಿಂದ ವಿಜಯ್‌ ಸೇತುಪತಿ ಹೊರಕ್ಕೆ..

ಶ್ರೀಲಂಕಾದ ಲೆಜೆಂಡ್‌ ಕ್ರಿಕೆಟರ್‌ ಮುತ್ತಯ್ಯ ಮುರುಳಿಧರನ್‌ ಬಯೋಪಿಕ್‌ ಚಿತ್ರ 800 ಚಿತ್ರದಿಂದ ಇದೀಗ ನಟ ವಿಜಯ್‌ ಸೇತುಪತಿ ಹೊರನಡೆದಿದ್ದಾರೆ. ಸ್ಪಿನ್‌ ಮಾತ್ರಿಂಕ ಮುರುಳಿಧರನ್‌ ಪಾತ್ರದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದು ವಿಜಯ್‌ ಸೇತುಪತಿಗೆ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾದ್ದು, ಹೀಗಾಗಿ ನನ್ನಿಂದ ಒಬ್ಬ ಮೇರು ನಟನಿಗೆ ಯಾವುದೇ ತೊಂದರೆಯಾಗುವುದು ಬೇಡ, ವಿಜಯ್‌ ಸೇತುಪತಿ ಕೇರಿಯರ್‌ಗೆ ನನ್ನಿಂದ ಅಡ್ಡಿಯಾಗಬಾರದು ಎಂದು ಮುರುಳಿಧರನ್‌ ಟ್ವೀಟ್‌ ಮಾಡಿದ್ರು, ನಂತರ ವಿಜಯ್‌ ಸೇತುಪತಿ ಕೂಡ ಧನ್ಯವಾದ,ನಮಸ್ಕಾರ ಅಂತ ರೀ ಟ್ವೀಟ್‌ ಮಾಡಿದ್ರು, ಇದೀಗ ನಟ ವಿಜಯ್‌ ಸೇತುಪತಿ ಚಿತ್ರದಿಂದ ಹೊರಬರುತ್ತಿರೋದಾಗಿ ಅದಿಕೃತ ಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top