ಮುಂಬೈ ಬೌಲಿಂಗ್‍ಗೆ CSK ಡಂ ಢಮಾರ್..

ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಬೌಲಿಂಗ್‍ಗೆ ಡಂ ಢಮಾರ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಚೆನ್ನೈಗೆ ಆರಂಭದಲ್ಲೇ ಹೊಡೆತ ಕೊಡುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಿತು. ತಂಡದಲ್ಲಿ ಹಲವು ಬದಲಾವಣೆಯೊಂದಿಗೆ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಚೆನ್ನೈ ಜಗದೀಶನ್ ಮತ್ತು ಗಾಯಕ್‍ವಾಡ್ ತಂಡಕ್ಕೆ ಭರವಸೆ ಮೂಡಿಸುವಲ್ಲಿ ವಿಫಲವಾಗಿದ್ದು, ಸೊನ್ನೆ ಔಟಾಗುವ ಮೂಲಕ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ್ರು, ಮೊದಲು ಕ್ರಿಸ್‍ಗೆ ಬಂದ ಡುಪ್ಲೆಸಿ ಮತ್ತು ಗಾಯಕ್ ವಾಡ್ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾಗಿದ್ದು ಮೊದಲ ಓವರ್‍ನಲ್ಲಿ ಗಾಯಕ್‍ವಾಡ್ ಔಟ್ ಆಗುವ ಮೂಲಕ ತಂಡಕ್ಕೆ ಸೊನ್ನೆ ರನ್ನಿನ ಕಾಣಿಕೆಯನ್ನು ನೀಡಿದ್ರು, ಬೋಲ್ಟ್ ಮತ್ತು ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿದ ಚೆ£ನ್ನೈ ತಂಡ ಮೂರು ರನ್ ಆಗುವಾಗಲೇ ಪ್ರಮುಖ ಮೂರು ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ನಂತರ ಧೋನಿ ಜಡೇಜಾ ಉತ್ತಮ ರನ್ ಪೇರಿಸುತ್ತಾರೆ ಅನ್ನೊವಾಗಲೇ ಜಡೇಜಾ ಬೋಲ್ಟ್‍ಗೆ ವಿಕೇಟ್ ಒಪ್ಪಿಸಿದ್ರೆ, ಜಡೇಜಾ ಬೆನ್ನಲ್ಲೇ ರಾಹುಲ್ ಚಹರ್‍ಗೆ ಧೋನಿ ವಿಕೆಟ್ ಒಪ್ಪಿಸುವ ಮೂಲಕ 30ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಚೆನ್ನೈ ಸಂಕಷ್ಟಕ್ಕೆ ಸಿಲುಕಿತ್ತು.

ಇನ್ನು ಸ್ಯಾಮ್ ಕರನ್ ತಂಡಕ್ಕೆ ಆಸರೆಯಾಗಿ ನಿಂತು ಕಡಿಮೆ ಸ್ಕೋರ್ ದಾಖಲೆಯಿಂದ ಚೆನ್ನೈ ತಪ್ಪಿಸಿಕೊಳ್ಳಲು ಸಹಾಯವಾದ್ರು, ಮೂವತ್ತು ರನ್‍ಗಳ ಜೊತೆಯಾಟ ನೀಡಿದ್ದ ಕರನ್ ಮತ್ತು ಶಾರ್ದೂಲ್ ಠಾಕೂರ್, ಚೆನ್ನೈಗೆ ಜೀವ ತುಂಬಿದ್ರು, 11 ರನ್‍ಗಳಿಸಿದ್ದ ಠಾಕೂರ್ ನತನ್‍ಗೆ ವಿಕೆಟ್ ಒಪ್ಪಿಸಿದ್ರು, ಸ್ಯಾಮ್ ಕರನ್ ಅವರ ತಾಳ್ಮೆಯ ಆಟದಿಂದ ಸಿಎಸ್‍ಕೆ ತನ್ನ ದಾಖಲೆಯನ್ನು ತಾನೇ ಮುರಿದುಕೊಳ್ಳುವ ಪರಿಸ್ಥಿತಿಯಿಂದ ತಪ್ಪಿಸಿಕೊಂಡಿತು, ಮುಂಬೈ ವಿರುದ್ಧ 2013ರಲ್ಲಿ 79ರನ್‍ಗೆ ಅಲೌಟ್ ಆಗಿದ್ದ ಚೆನ್ನೈ ಆ ದಾಖಲೆಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿತು. ಇನ್ನು ಈ ಬಾರಿಯ ಐಪಿಎಲ್‍ನಲ್ಲಿ ಅತಿ ಕಡಿಮೆ ರನ್ ಗಳಿಸಿದ ಕೆಕೆಆರ್ ಹೆಸರಿನಲ್ಲಿದ್ದ ದಾಖಲೆಯಿಂದ ಪಾರಾಗುವ ಮೂಲಕ ಸ್ವಲ್ಪ ನೆಮ್ಮದಿಯನ್ನು ಸಹ ಕಂಡಿತು.

ರನ್ ಹೊಳೆ ಹರಿಯುವ ಶಾರ್ಜಾ ಪಿಚ್‍ನಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಇಪ್ಪತ್ತು ಓವರ್‍ನಲ್ಲಿ ಸ್ಯಾಮ್ ಕರನ್ ಅವರ ಅಮೋಘ 52ರನ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸುವ ಮೂಲಕ ಸಿಎಸ್‍ಕೆ ಈ ಬಾರಿಯ ಐಪಿಎಲ್‍ನಲ್ಲಿ ತಂಡದಲ್ಲಿ ಧೋನಿ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತಿದೆ ಅನ್ನೋದನ್ನ ಸಾಭೀತು ಪಡಿಸಿತು. ಇನ್ನು ಮುಂಬೈ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೋಲ್ಟ್ 4 ವಿಕೆಟ್ ಪಡೆದ್ರೆ ಬುಮ್ರಾ 2,ರಾಹುಲ್ 2, ನತನ್ 1 ವಿಕೆಟ್ ಪಡೆದು ಮಿಂಚಿದ್ರು. ಇನ್ನು ಚೆನ್ನೈ ಮುಂಬೈ ತಂಡಕ್ಕೆ 115ರನ್‍ಗಳ ಅಲ್ಪ ಗುರಿಯನ್ನು ನೀಡಿತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top