ಮುಂಬೈ ಡೆಲ್ಲಿ ಪಂದ್ಯದಲ್ಲಿ ಕಾಣಿಸಿಕೊಂಡ ಈ ಮಹಿಳೆ ಯಾರು ಗೊತ್ತಾ..?

ನಿನ್ನೆ ನಡೆದ ಡೆಲ್ಲಿ ಮತ್ತು ಮುಂಬೈ ನಡುವಿನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವನ್ನು ಸಾಧಿಸೋ ಮೂಲಕ 6ನೇ ಬಾರಿಗೆ ಫೈನಲ್‌ಗೆ ಪ್ರವೇಶ ಮಾಡಿ ದಾಖಲೆಯನ್ನು ಬರೆದಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 200ರನ್‌ಗಳು ಸಿಡಿಸಿ ಡೆಲ್ಲಿಗೆ ದೊಡ್ಡ ಮೊತ್ತದ ಟಾರ್ಗೆಟ್‌ ಅನ್ನು ನೀಡಿತ್ತು. ಇನ್ನು ನಿನ್ನೆ ಆಡಿದ ರೀತಿ ಎಲ್ಲರನ್ನು ಗಮನ ಸೆಳೆದಿತ್ತು.

ಅದರ ಜೊತೆಯಲ್ಲಿ ನಿನ್ನೆಯ ಪಂದ್ಯದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಒಬ್ಬ ಮಹಿಳೆ ಕಾಣಿಸಿಕೊಂಡಿದ್ದು ಇದೀಗ ಯಾರು ಆ ಮಹಿಳೆ ಅನ್ನೋ ವಿಷಯದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದ್ದೆ, ಅಷ್ಟೇ ಅಲ್ಲದೇ ಆ ಮಹಿಳೆ ಓದುತ್ತಿರೋದಾದ್ರು ಏನು ಅನ್ನೊ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅವರು ಯಾರು ಅಂತ ಹೇಳೋಕು ಮುಂದೆ 2017ರ ಐಪಿಎಲ್‌ ಫೈನಲ್‌ ಮ್ಯಾಚ್‌ ಬಗ್ಗೆ ಹೇಳ್ತೀವಿ, 2017ರ ಐಪಿಎಲ್‌ನಲ್ಲಿ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಪುಣೆ ಸೂಪರ್‌ ಜೈಂಟ್‌ ಮುಖಾಮುಖಿಯಾಗಿತ್ತು, ಪುಣೆಗೆ ಐದು ಎಸೆತದಲ್ಲಿ ಏಳು ರನ್‌ ಅಗತ್ಯವಿತ್ತು. ಈ ವೇಳೆ ಒರ್ವ ಮಹಿಳೆ ಥ್ರಿಲ್ಲಿಂಗ್‌ ಮ್ಯಾಚ್‌ ವೀಕ್ಷಣೆ ಮಾಡುವ ಬದಲಿಗೆ ಕಣ್ಣು ಮುಚ್ಚಿ ಪ್ರೇಯರ್‌ ಮಾಡುತ್ತಿದ್ದರು.

2017ರಲ್ಲೇ ಸಖತ್‌ ಫೇಮಸ್‌ ಆಗಿದ್ದ ಈ ಮಹಿಳೆ ಪ್ರೇಯರ್‌ ಆಂಟಿ ಅಂತಾನೇ ಎಲ್ಲರೂ ಹೇಳೋಕೆ ಶುರುಮಾಡಿದ್ರು, ಆದ್ರೆ ಅವರು ಬೇರೆ ಯಾರು ಅಲ್ಲ ಮುಂಬೈ ತಂಡದ ಓನರ್‌ ನೀತಾ ಅಂಬಾನಿಯವರ ತಾಯಿ ಪೂರ್ಣಿಮಾ ದಲಾಲ್‌ ಅನ್ನೋದು ಪಂದ್ಯದ ನಂತರ ಎಲ್ಲರಿಗೂ ತಿಳಿಯಿತು, ಅಂದಿನಿಂದ ಪ್ರೇಯರ್‌ ಆಂಟಿ ಅಂತಾನೇ ಫೇಮಸ್‌ ಆಗಿದ್ದ ಇವರು ಇದೀಗ ಯುಎಇಯಲ್ಲಿ ನಡೆದ ಮೊದಲ ಕ್ವಾಲಿಫಯರ್‌ ಮ್ಯಾಚ್‌ನಲ್ಲಿ ಸ್ಟ್ಯಾಂಡ್‌ನಲ್ಲಿ ಕುಳಿತು ಒಂದು ಪುಸ್ತಕ ಓದುತ್ತಿರೋದನ್ನು ಪಂದ್ಯದ ಮಧ್ಯದಲ್ಲಿ ನೋಡಿದ ಮುಂಬೈ ಅಭಿಮಾನಿಗಳು ಪ್ರೇಯರ್‌ ಆಂಟಿ ಮ್ಯಾಚ್‌ನಲ್ಲಿ ಇದ್ದಾರೆ ಮುಂಬೈ ಗೆದ್ದಾಯ್ತು ಅನ್ನೋ ಮಾತುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹೇಳೋದಕ್ಕೆ ಶುರುಮಾಡಿದ್ರು, ಇನ್ನು ಪ್ರೇಯರ್‌ ಆಂಟಿ ಕುಳಿತು ಪುಸ್ತಕ ನೋಡಿ ಯಾವ ಮಂತ್ರ ಪಟಿಸುತ್ತಿದ್ರು ಅನ್ನೋ ಕುತೂಹಲ ಇದೀಗ ಎಲ್ಲರಲ್ಲೂ ಮನೆಮಾಡಿದೆ.

2017ರಲ್ಲಿ ವೈರಲ್‌ ಆಗಿದ್ದ ನೀತಾ ಅಂಬಾನಿಯವರ ತಾಯಿ ಇದೀಗ ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದು ಮುಂಬೈ ತಂಡಕ್ಕೆ ಅದೃಷ್ಟ ಎಂದೇ ಎಲ್ಲರೂ ಹೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top